31.8 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕಕ್ಯಪದವು ಎಲ್.ಸಿ.ಆರ್ ವಿದ್ಯಾಸಂಸ್ಥೆಯ ಪ.ಪೂ. ವಿಭಾಗದಲ್ಲಿ “ಹೂಡಿಕೆಯ ವಿವಿಧ ಅವಕಾಶ” ಗಳ ಕುರಿತು ಕಾರ್ಯಾಗಾರ

ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ತರ್ ಎಜುಕೇಷನಲ್ ಟ್ರಸ್ಟ್ ನಿಂದ ನಡೆಸಲ್ಪಡುವ ಎಲ್.ಸಿ.ಆರ್ ವಿದ್ಯಾಸಂಸ್ಥೆಯ ಪದವಿಪೂರ್ವ ವಿಭಾಗದಲ್ಲಿ ವಾಣಿಜ್ಯ ಸಂಘದ ವತಿಯಿಂದ ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗೆ ‘ ಹೂಡಿಕೆಯ ವಿವಿಧ ಅವಕಾಶಗಳ ‘ ಕುರಿತು ಕಾರ್ಯಾಗಾರವನ್ನು ನಡೆಸಲಾಯಿತು.

ಸಂಸ್ಥೆಯ ಸಂಯೋಜಕ ಯಶವಂತ್ ಜಿ. ನಾಯಕ್ ಅವರು ಕಾರ್ಯಗಾರವನ್ನು ನಡೆಸಿಕೊಟ್ಟರು. ಕಾರ್ಯಗಾರದಲ್ಲಿ ಹೂಡಿಕೆಯ ಅರ್ಥ, ಹೂಡಿಕೆ ಮಾಡಲು ಲಭ್ಯವಿರುವ ವಿವಿಧ ಮಾರ್ಗಗಳು ಹಾಗೂ ಅವುಗಳ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಸಾಂಪ್ರದಾಯಿಕ ಹೂಡಿಕೆ ಮಾರ್ಗಗಳಾದ ಸ್ಥಿರ ಠೇವಣಿ (Fixed Deposit), LIC, ರಿಯಲ್ ಎಸ್ಟೇಟ್, ಚಿನ್ನ ಮತ್ತು ಬೆಳ್ಳಿ ಮುಂತಾದವುಗಳ ಬಗ್ಗೆ ವಿವರಿಸಲಾಯಿತು.

ಇದರೊಂದಿಗೆ, ಇಂದಿನ ಆಧುನಿಕ ಹೂಡಿಕೆ ಮಾರ್ಗಗಳಾದ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್‌ಗಳು, ಕ್ರಿಪ್ಟೋಕರೆನ್ಸಿಗಳು, ETFಗಳು, ಷೇರುಗಳಲ್ಲಿ SIP ಹಾಗೂ ಮ್ಯೂಚುವಲ್ ಫಂಡ್‌ಗಳಲ್ಲಿ SIP ಮುಂತಾದವುಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು. ಪ್ರತಿಯೊಂದು ಹೂಡಿಕೆ ಮಾರ್ಗದ ಸ್ವರೂಪ, ಅಪಾಯ ಮತ್ತು ಸಾಧ್ಯತೆಗಳ ಕುರಿತು ಸರಳವಾಗಿ ವಿವರಿಸಲಾಯಿತು.

Related posts

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಹೊಸಂಗಡಿ ವಲಯದ ಕೇಳದಪೇಟೆ ಕಾರ್ಯಕ್ಷೇತ್ರದ ವತಿಯಿಂದ ವೀಲ್ ಚಯರ್ ವಿತರಣೆ

Suddi Udaya

ಬಿಜೆಪಿ ಮಹಿಳಾ ಮೋರ್ಚಾ ಬೆಳ್ತಂಗಡಿ ಮಂಡಲದ ವತಿಯಿಂದ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ಬೆಂಕಿ ರಹಿತ ಅಡುಗೆ, ಪ್ರಾತ್ಯಕ್ಷಿಕೆ

Suddi Udaya

ಇಂದಬೆಟ್ಟು-ನಾವೂರು 27 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Suddi Udaya

ಕೊಯ್ಯೂರು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿ ಉದ್ಘಾಟನೆ

Suddi Udaya

ವೇಣೂರು ಮಹಾಮಸ್ತಕಾಭಿಷೇಕ: ಡಿ. 17 ರಂದು ಬೃಹತ್ ವೈದ್ಯಕೀಯ ಶಿಬಿರ

Suddi Udaya

ಉಜಿರೆ: ಶ್ರೀ ಧ.ಮಂ. ಪ.ಪೂ. ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್‌ದಳದಿಂದ ಪ್ರಶಸ್ತಿ ಪತ್ರ ವಿತರಣೆ

Suddi Udaya
error: Content is protected !!