31.8 C
ಪುತ್ತೂರು, ಬೆಳ್ತಂಗಡಿ
October 3, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಡಿರುದ್ಯಾವರ ಕುಕ್ಕಾವು ಕಾರ್ಯಕ್ಷೇತ್ರದಿಂದ ಪೌಷ್ಟಿಕ ಆಹಾರ ಅರಿವು ಕಾರ್ಯಕ್ರಮ


ಮುಂಡಾಜೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬೆಳ್ತಂಗಡಿ ತಾಲೂಕು ಮುಂಡಾಜೆ ವಲಯದ ಕಡಿರುದ್ಯಾವರ ಕುಕ್ಕಾವು ಕಾರ್ಯಕ್ಷೇತ್ರದಲ್ಲಿ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಪೌಷ್ಟಿಕ ಆಹಾರ ಅರಿವು ಕಾರ್ಯಕ್ರಮವನ್ನು ಮಿತ್ತಬಾಗಿಲು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ ಬಂಗೇರರವರು ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಆಹಾರ ಪದ್ಧತಿಯನ್ನುಉಳಿಸುವ ಮಾಹಿತಿ ಕಾರ್ಯಕ್ರಮ ಇಂದಿನ ದಿನಗಳಲ್ಲಿ ಅವಶ್ಯಕತೆಯಿದ್ದು ಇದರ ಪ್ರಯೋಜನವನ್ನು ಪಡೆಯುವಂತೆ ತಿಳಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾದ ಉಷಾ ನಾಯಕ್ ರವರು ಕೇಸರಿ ಬಿಳಿ ಹಸಿರು ತರಕಾರಿ ಸೇವನೆ ಬಗ್ಗೆ ಸೊಪ್ಪು , ಕಾಳು, ತರಕಾರಿಯಲ್ಲಿರುವ ಪೌಷ್ಟಿಕಾಂಶದ ಬಗ್ಗೆ ಹಾಗೂ ಸಮತೋಲಿತ ಆಹಾರದ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕರಾದ ಪೂರ್ಣಿಮಾ ಹಾಗೂ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಧುರಾ ವಸಂತ್ ಉಪಸ್ಥಿತರಿದ್ದರು. ಸೇವಪ್ರತಿನಿಧಿ ರಶ್ಮಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರಾದ ತುಳಸಿ ಸ್ವಾಗತಿಸಿ, ಕಮಲ ಧನ್ಯವಾದ ನೀಡಿದರು.

Related posts

ಮಡಂತ್ಯಾರು ಶ್ರೀ ಕ್ಷೇ.ಧ.ಗ್ರಾ. ಯೋಜನೆ ಹಾಗೂ ವಿವಿಧ ಸಮಿತಿಯಿಂದ ಸತ್ಯ ನಾರಾಯಣ ಪೂಜೆ ಮತ್ತು ಪದಗ್ರಹಣ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಶ್ರೀ ಕೃಷ್ಣ ಜಯಂತಿ ಆಚರಣೆ

Suddi Udaya

ಶಿಶಿಲ: ಬರ್ಗುಳದಲ್ಲಿ ಹದಗೆಟ್ಟ ರಸ್ತೆ : ಅರಸಿನಮಕ್ಕಿ ಶಿಶಿಲ ಶೌರ್ಯ ಘಟಕ ಸ್ವಯಂಸೇವಕರಿಂದ ದುರಸ್ತಿ ಕಾರ್ಯ

Suddi Udaya

ತಾಲೂಕು ಮಟ್ಟದ ದಸರಾ ಕ್ರೀಡಾಕೂಟ: ತ್ರೋಬಾಲ್ ಪಂದ್ಯಾಟದಲ್ಲಿ ಜೈ ಶ್ರೀ ರಾಮ್ ಫ್ರೆಂಡ್ಸ್ ಮುರ ತಂಡ ದ್ವಿತೀಯ ಸ್ಥಾನ

Suddi Udaya

ನಾಪತ್ತೆಯಾದ ಮಾಲಾಡಿ ನಿವಾಸಿ, ಬಂಟ್ವಾಳ ಅಮ್ಟಾಡಿ ಗ್ರಾ.ಪಂ. ಕಾರ್ಯದರ್ಶಿ ಲಕ್ಷ್ಮೀನಾರಾಯಣ; ನಾಲ್ಕು ದಿನಗಳ ಬಳಿಕ ಶವ ಪಟ್ರಮೆ ನದಿಯಲ್ಲಿ ಪತ್ತೆ: ಮೃತದೇಹವನ್ನು ಮೇಲೆತ್ತಿದ ಶೌರ್ಯ ವಿಪತ್ತು ನಿವ೯ಹಣಾ ತಂಡ

Suddi Udaya

ಹಿರಿಯ ಪತ್ರಕರ್ತ ಮನೋಹರ ಪ್ರಸಾದ್‌ರವರ ನಿಧನಕ್ಕೆ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya
error: Content is protected !!