32.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆಯಲ್ಲಿ ತ್ರಿಶೂಲ್ 1 ಗ್ರಾಂ ಗೋಲ್ಡ್ ಮತ್ತು ಫ್ಯಾನ್ಸಿ ಶುಭಾರಂಭ

ಉಜಿರೆ: ಉದ್ಯಮದಲ್ಲಿ ಪ್ರಾಮಾಣಿಕ ಮನಸ್ಸು ಮತ್ತು ನಿಷ್ಠೆ ಅತ್ಯಂತ ಮುಖ್ಯ. ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡು ಪ್ರಾಮಾಣಿಕತೆಯಿಂದ ವ್ಯಾಪಾರ ನಡೆಸಿದಾಗ ಉದ್ಯಮ ಯಶಸ್ಸಿನ ಶಿಖರಕ್ಕೇರಲು ಸಾಧ್ಯ. ನೂತನ ಸಂಸ್ಥೆಯು ಉತ್ತಮ ಸೇವೆಯ ಮೂಲಕ ಜನಮನ್ನಣೆ ಗಳಿಸಲಿ ಎಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಧರ್ಮದರ್ಶಿ ಹರೀಶ್ ಆರಿಕೋಡಿ
ಶುಭ ಹಾರೈಸಿದರು.

ಅವರು ಉಜಿರೆ ಸರ್ಕಲ್ ಬಳಿಯ ವಳಾಲ್ ಕಾಂಪ್ಲೆಕ್ಸ್‌ನಲ್ಲಿ ಆ.19ರಂದು ನೂತನವಾಗಿ ಆರಂಭಗೊಂಡ ತ್ರಿಶೂಲ್ ಫ್ಯಾನ್ಸಿ ಮತ್ತು 1 ಗ್ರಾಂ ಗೋಲ್ಡ್ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.

ದಿನದಿಂದ ದಿನಕ್ಕೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಉಜಿರೆ ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿ ತನ್ನದೇ ಆದ ಛಾಪು ಮೂಡಿಸುತ್ತಿದೆ. ಶಿಕ್ಷಣ, ವ್ಯಾಪಾರ, ಆರೋಗ್ಯ ಹಾಗೂ ಸೇವಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಉಜಿರೆಯಲ್ಲಿ ಇದೀಗ ಗ್ರಾಹಕರಿಗೆ ಮತ್ತೊಂದು ನೂತನ ಸೇವೆ ತ್ರಿಶೂಲ್ 1 ಗ್ರಾಂ ಗೋಲ್ಡ್ ಮತ್ತು ಫ್ಯಾನ್ಸಿ ಮಳಿಗೆ ಮೂಲಕ ಲಭ್ಯವಾಗಿದೆ ಎಂದರು.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿ ಮುಖ್ಯಸ್ಥ ಡೊಂಬಯ್ಯ ಗೌಡ ದೀಪ ಪ್ರಜ್ವಲಿಸಿ ಮಾತನಾಡಿ, ಸಂಸ್ಥೆಯು ಜನಪ್ರಿಯತೆ ಪಡೆದು ಉನ್ನತಿಯತ್ತ ಸಾಗಲಿ ಎಂದು ಹಾರೈಸಿದರು.

ಉಜಿರೆ ಬೆನಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿ, ಉಜಿರೆಯಲ್ಲಿ ವ್ಯಾಪಾರ ಆರಂಭಿಸಿದವರಿಗೆ ಉತ್ತಮ ಅವಕಾಶಗಳಿವೆ. ಶಿಸ್ತು, ಸಂಯಮ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಸಂಕಲ್ಪ ಹೊಂದಿದಾಗ ಉದ್ಯಮ ಖಂಡಿತವಾಗಿಯೂ ಅಭಿವೃದ್ಧಿ ಹೊಂದುತ್ತದೆ ಎಂದರು.

ಉಜಿರೆ ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ ಮಾತನಾಡಿ, ಕಠಿಣ ಪರಿಶ್ರಮ ಮತ್ತು ವ್ಯಾಪಾರ ಧರ್ಮವನ್ನು ಪಾಲಿಸಿದಾಗ ಉದ್ಯಮ ಕೈಹಿಡಿಯುತ್ತದೆ. ಶಿಸ್ತು ಹಾಗೂ ಪ್ರಾಮಾಣಿಕತೆಯಿಂದ ವ್ಯಾಪಾರ ನಡೆಸಿದರೆ ಯಶಸ್ಸು ಖಂಡಿತ ದೊರೆಯುತ್ತದೆ ಎಂದು ಹೇಳಿದರು.

ಉಜಿರೆ ವರ್ತಕರ ಸಂಘದ ಮಾಜಿ ಅಧ್ಯಕ್ಷ ಅರವಿಂದ್ ಕಾರಂತ್ ಮಾತನಾಡಿ, ಗ್ರಾಹಕರಿಗೆ ನಗುಮೊಗದ ಸೇವೆ ನೀಡುವುದರಿಂದ ಸಂಸ್ಥೆಯ ಮೇಲಿನ ವಿಶ್ವಾಸ ಹೆಚ್ಚುತ್ತದೆ. ಉತ್ತಮ ಸೇವೆಯೊಂದಿಗೆ ಸಂಸ್ಥೆ ಪ್ರಗತಿಯತ್ತ ಸಾಗಲಿ ಎಂದು ಶುಭ ಹಾರೈಸಿದರು.

ಬೆಳ್ತಂಗಡಿ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಡಾ. ದೇವಿಪ್ರಸಾದ್ ಬೊಳ್ಮ ಮಾತನಾಡಿ, ವ್ಯಾಪಾರದಲ್ಲಿ ಯಶಸ್ಸು ಪಡೆಯಲು ಗುಣಮಟ್ಟದ ಉತ್ಪನ್ನಗಳ ಜೊತೆಗೆ ಗ್ರಾಹಕರ ವಿಶ್ವಾಸ ಅತ್ಯಂತ ಮುಖ್ಯ. ತ್ರಿಶೂಲ್ ಸಂಸ್ಥೆಯು ಉಜಿರೆಯ ಜನರ ಪ್ರೀತಿ ಹಾಗೂ ವಿಶ್ವಾಸವನ್ನು ಗಳಿಸಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.

ವೇದಿಕೆಯಲ್ಲಿ ಹಳೆಪೇಟೆ ಜುಮ್ಮಾ ಮಸೀದಿ ಖತೀಬರಾದ ಸಫ್ವಾನ್ ಜೌಹರಿ ಆಲ್ ಹಿಕಮಿ ಅರಳ ಹಾಗೂ ಉಜಿರೆ ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಮರ್ಲಿನ್ ಡಿಸೋಜಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಶ್ವನಾಥ ಗೌಡ-ಸುಂದರಿ, ಗಾಂಧಿನಗರ ಉಜಿರೆ, ವಸಂತ ಗೌಡ-ವೇದಾವತಿ ಆರಿಕೋಡಿ, ಉದ್ಯಮಿ ಪ್ರಶಾಂತ್ ಜೈನ್ ಅಮೃತ್, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್., ನಿರೂಪಕ ವಿಜಯ್ ಅತ್ತಾಜೆ, ಉದ್ಯಮಿ ವಿಶ್ವ ಭಂಡಾರಿ, ರೋಹಿತ್ ರಾಧಾಕೃಷ್ಣ ಬೆಳ್ತಂಗಡಿ, ಜಯಂತ್ ನಮನ ಉಜಿರೆ, ಮೋಹನ್ ಚೌಧರಿ ಉಜಿರೆ, ಹುಕಂರಾಮ್ ಪಟೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಸಂಸ್ಥೆಯ ಮಾಲಕರಾದ ಕಾವ್ಯಾ ಮತ್ತು ಭರತ್ ಅವರು ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು. ಉಜಿರೆ ಸಿಎ ಬ್ಯಾಂಕ್ ಉದ್ಯೋಗಿ ಮೋಹನ್ ಗೌಡ ಕಾರ್ಯಕ್ರಮ ನಿರೂಪಿಸಿದರು. ಸುದ್ದಿ ಉದಯ ಮುಖ್ಯಸ್ಥ ಸಂತೋಷ್ ಪಿ. ಕೋಟ್ಯಾನ್ ವಂದಿಸಿದರು.

ಒಂದೇ ಸೂರಿನಡಿ ಆಕರ್ಷಕ ಫ್ಯಾನ್ಸಿ ವಸ್ತುಗಳು ಹಾಗೂ 1 ಗ್ರಾಂ ಗೋಲ್ಡ್

ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಆಕರ್ಷಕ ಫ್ಯಾನ್ಸಿ ವಸ್ತುಗಳು ಹಾಗೂ ನವೀನ ವಿನ್ಯಾಸದ 1 ಗ್ರಾಂ ಗೋಲ್ಡ್ ಆಭರಣಗಳು ತ್ರಿಶೂಲ್‌ನಲ್ಲಿ ಲಭ್ಯವಿವೆ. ಮದುವೆ, ಹಬ್ಬ-ಹರಿದಿನಗಳು, ವಿಶೇಷ ಸಂದರ್ಭಗಳು ಹಾಗೂ ದಿನನಿತ್ಯದ ಬಳಕೆಗೆ ಸೂಕ್ತವಾದ ವಿವಿಧ ವಿನ್ಯಾಸಗಳ ಆಭರಣಗಳು ಮತ್ತು ಫ್ಯಾನ್ಸಿ ವಸ್ತುಗಳನ್ನು ಒಂದೇ ಸೂರಿನಡಿ ಗ್ರಾಹಕರು ಪಡೆಯಬಹುದಾಗಿದೆ.
ಉತ್ತಮ ಗುಣಮಟ್ಟ ಹಾಗೂ ಆಕರ್ಷಕ ವಿನ್ಯಾಸಗಳೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ಸಂಸ್ಥೆಯ ಉದ್ದೇಶವಾಗಿದ್ದು, ಗ್ರಾಹಕರು ತಮ್ಮ ಸಂಸ್ಥೆಯನ್ನು ಪ್ರೋತ್ಸಾಹಿಸಬೇಕು ಎಂದು ಮಾಲಕರಾದ ಕಾವ್ಯಾ ಮತ್ತು ಭರತ್ ತಿಳಿಸಿದ್ದಾರೆ.

Related posts

ಜೈನ ಮುನಿ ಆಚಾರ್ಯ ಶ್ರೀ ಕುಮಾರ ನಂದಿ ಮಹಾರಾಜರ ಭೀಕರ ಹತ್ಯೆ ಖಂಡನೀಯ : ಶಾಸಕ ಹರೀಶ್ ಪೂಂಜ

Suddi Udaya

ಮುಳಿಯ ಗೋಲ್ಡ್ & ಡೈಮಂಡ್ಸ್‌: ಡಿ.27ರಿಂದ ಜ.5ರ ವರೆಗೆ ವರ್ಷಾಂತ್ಯದ ಮಾರಾಟ: ಶೇ 50ರ ವರೆಗೆ ವಿಎ ಕಡಿತ; ಹಳೆಯ ಆಭರಣಗಳ ವಿನಿಮಯಕ್ಕೆ ಅವಕಾಶ

Suddi Udaya

ಜೂ.27: ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದಿಂದ ಕೆಂಪೇಗೌಡ ಜಯಂತಿ ಆಚರಣೆ ಹಾಗೂ ಬೃಹತ್‌ ರಕ್ತದಾನ ಶಿಬಿರ

Suddi Udaya

ಭಾರಿ ಮಳೆಗೆ: ಪುತ್ತಿಲ ನಡುಕೇರ್ಯದಲ್ಲಿ ಬರೆ ಕುಸಿತ

Suddi Udaya

ಶಿಶಿಲ ಸ.ಉ.ಹಿ.ಪ್ರಾ.ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಶ್ರೀ ಕಿರಾತ ಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ದ್ರಢ ಕಲಶ

Suddi Udaya
error: Content is protected !!