32.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜಾಗದ ನೋಂದಣಿ ಮಾಡಿಕೊಡುವುದಾಗಿ ಹಣ ಪಡೆದು ವಂಚನೆ ಆರೋಪ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಪಟ್ಟಾ ಜಾಗದ ಜೊತೆ ಕುಮ್ಕಿ ಜಾಗವನ್ನು ಸೇರಿಸಿ ನೋಂದಣಿ ಮಾಡಿಸಿಕೊಡುವುದಾಗಿ ನಂಬಿಸಿ ಒಂದು ಕೋಟಿ ರೂ ಪಡೆದುಕೊಂಡಿದ್ದಾರೆ ಎಂದು ಆರೋಪದಡಿ ಮಂಗಳೂರಿನ ಕೊಟ್ಟಾರ ಚೌಕಿಯ ಶಶಿಧರ ಅಚ್ಯುತ ಕೋಟಂತಿದ ಎಂಬವರು ನೀಡಿದ ದೂರಿನಂತೆ ಕುವೆಟ್ಟು ಗ್ರಾಮದ ಸದ್ಯೋದ್ಯಾನ ನಿವಾಸಿಗಳಾದ ಸೋಮನಾಥ ನಾಯಕ್ ಮತ್ತು ರಂಜನ್ ರಾವ್ ಎರ್ಡೂರು ಅವರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಶಶಿಧರ ಅಚ್ಚುತ ಕೋಟಂತಿದ ಅವರು ಮಾಡಿರುವ ಆರೋಪವನ್ನು ಸೋಮನಾಥ ನಾಯಕ್ ಮತ್ತು ರಂಜನ್ ರಾವ್ ನಿರಾಕರಿಸಿದ್ದಾರೆ.


ಮಂಗಳೂರಿನ ಕೊಟ್ಟಾರಚೌಕಿ ನಿವಾಸಿ ಶಶಿಧರ ಅಚ್ಯುತ ತೋಟಂತಿಲ (೬೧) ಅವರು ನೀಡಿದ ದೂರಿನಂತೆ ಸೋಮನಾಥ ನಾಯಕ್ ಮತ್ತು ರಂಜನ್ ರಾವ್ ಎರ್ಡೂರು ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. ೯೧/೨೦೨೬ರಂತೆ ಬಿಎಸ್‌ಎಸ್ ೩೧೮(೪) ಹಾಗೂ ೩(೫)ರಡಿ ಪ್ರಕರಣ ದಾಖಲಾಗಿದೆ.


ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಎಂಬಲ್ಲಿ ದಿನಾಂಕ ೦೪-೧೦-೨೦೨೫ರಂದು ರಂಜನ್ ರಾವ್ ಎರ್ಡೂರು ಎಂಬವರ ಮಾಲಕತ್ವದ ಸರ್ವೆ ನಂ. ೮೫/೩ಎಂ ಜಮೀನಿಗೆ ಸಂಬAಧಪಟ್ಟAತೆ ೦.೨೮.೫೦ ಎಕ್ರೆ ಜಮೀನನ್ನು ಸೋಮನಾಥ್ ನಾಯಕ್ ಎಂಬವರ ಮುಂದಾಳತ್ವದಲ್ಲಿ ರಂಜನ್ ರಾವ್ ಎರ್ಡೂರುರವರಿಗೂ ಹಾಗೂ ಶಶಿಧರ್ ಅಚ್ಯುತ ತೋಟಂತಿಲ ಅವರಿಗೂ ಕರಾರು ಆಗಿದೆ. ಈ ಜಮೀನಿನೊಟ್ಟಿಗೆ ೦.೭೦.೨೫ ಎಕ್ರೆ ಜಮೀನು ಲಗತ್ತು ಇದು ಸದ್ಯಕ್ಕೆ ಕುಮ್ಮಿ ಎಂದು ಕಾಣಿಸುತ್ತೇವೆ. ಮುಂದಕ್ಕೆ ಈ ಜಮೀನನ್ನು ರಂಜನ್ ರಾವ್ ಎರ್ಡೂರುರವರ ಮುಖೇನ ಅವರ ವರ್ಗ ಜಮೀನಿನೊಟ್ಟಿಗೆ ಸೇರಿಸಿ ತಂತಿ ಬೇಲಿ ಹಾಕಿಸಿ ಆಪಾದಿತರ ಸ್ವಾಧೀನದಲ್ಲಿದ್ದು ಮುಂದಕ್ಕೆ ಸದ್ರಿ ೦.೭೦.೨೫ ಎಕ್ರೆ ಜಮೀನು ಕುಮ್ಮಿ ಆಗಿದ್ದು ಮುಂದಕ್ಕೆ ಪ್ರಭಾವವನ್ನು ಬಳಿಸಿ ದರ್ಖಾಸು ಮಾಡಿಸಿಕೊಂಡು ನಿಮಗೆ ಒಟ್ಟು ೦.೨೮.೫೦ ೮ ೦.೭೦.೨೫ ೨ ೦.೯೮.೭೫ ಎಕ್ರೆ ಜಮೀನನ್ನು ರಿಜಿಸ್ಟರ್ ದಾಖಲು ಮುಖೇನ ಕ್ರಯವರಿಸಿ ನಿಮ್ಮ ಸ್ವಾಧೀನಕ್ಕೆ ಕೊಡುತ್ತೇವೆ ಎಂದು ಹೇಳಿ ಆಪಾದಿತರು ಒಟ್ಟು ೫೦,೦೦,೦೦೦ ರೂ. ಕರಾರು ಮಾಡಿಕೊಂಡಿದ್ದಾರೆ.


ಅದರಂತೆ ಆಪಾದಿತ ರಂಜನ್ ರಾವ್ ಎರ್ಡೂರುರವರ ಬ್ಯಾಂಕ್ ಖಾತೆಗೆ ಸಂಖ್ಯೆಗೆ ೨೪ ಲಕ್ಷ ಹಾಗೂ ಸೋಮನಾಥ ನಾಯಕ್ ರವರ ಬ್ಯಾಂಕ್ ಖಾತೆಗೆ ೧೨,೬೧೨೫೦ ರೂ ಹಾಗೂ ಸೋಮನಾಥ ನಾಯಕ್ ರವರ ಪತ್ನಿ ಕೆ. ವಿದ್ಯಾ ನಾಯಕ್‌ರವರ ಕೆನರಾ ಬ್ಯಾಂಕ್ ಖಾತೆಗೆ ಒಟ್ಟು ೧೯ ಲಕ್ಷ ರೂಪಾಯಿಗಳು ಹಾಗೂ ಸಹಾಯಕರಾದ ದಯಾನಂದ ಪೂಜಾರಿ ಅವರ ಖಾತೆಗೆ ೧೬ ಲಕ್ಷ ಹಾಗೂ ಮತ್ತೊಬ್ಬ ಬಾಬು ಎ. ರವರ ಖಾತೆಗೆ ೮ ಲಕ್ಷ ಹಾಗೂ ಸಂದೀಪ್‌ರವರ ಖಾತೆಗೆ ೧೧ ಲಕ್ಷ ಹಾಗೂ ಭಾರತಿರವರ ಖಾತೆಗೆ ೬ ಲಕ್ಷ ಹಾಗೂ ಸೋಮಶೇಖರ್ ಬ್ಯಾಂಕ್ ಖಾತೆಗೆ ೪೦ ಲಕ್ಷ ಹೀಗೆ ಒಟ್ಟು ೧,೦೦,೬೧,೨೫೦ ರೂಪಾಯಿ ಹಣವನ್ನು ದೂರುದಾರರು ಹಾಕಿದ್ದು, ೯೦ ಲಕ್ಷಕ್ಕೆ ಕರಾಡು ಆಗಿದ್ದರೂ ಸಹ ದರ್ಖಾಸು ಮಾಡಿಸಿಕೊಡುವುದಾಗಿ ೧,೦೦,೬೧,೨೫೦ ರೂ ಹಣವನ್ನು ವಿವಿಧ ಖಾತೆಗೆ ಹಾಕಿಸಿ ಈ ಬಗ್ಗೆ ಪಿರ್ಯಾದಿದಾರರು ಇದು ಕುಮ್ಮಿ ಭೂಮಿಯಲ್ಲ ದರ್ಖಾಸು ಮಾಡಿಸುವುದು ಕಷ್ಟಸಾಧ್ಯವೆಂದು ಸೋಮನಾಥ ನಾಯಕ್ ಅವರಿಗೆ ತಿಳಿಸಿದರೂ ಆ ವಿಷಯ ನಿಮಗೆ ಬೇಡ ಎಂದು ತಿಳಿಸಿ ಪಿರ್ಯಾದಿದಾರರಿಗೆ ಆಪಾದಿತರು ಮೇಲ್ಕಾಣಿಸಿದ ಜಾಗವು ಕುಮ್ಮಿ ಜಮೀನು ಎಂದು ಹೇನ್ ಸರಕಾರಿ ಜಮೀನನ್ನು ಅಕ್ರಮಿಸಿರುವ ಕುರಿತು ಸೋಮನಾಥ ನಾಯಕರವರ ವಿರುದ್ಧ ಕರ್ನಾಟಕ ಭೂಕಬಳಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದ್ದು ಇದರಿಂದ ಬಚವಾಗಲು ದಿನಾಂಕ ೧೪-೪೨೦೨೬ರಂದು ೨೮ ಸೆಂಟ್ಸ್ ಕೃಷಿ ಭೂಮಿಯನ್ನು ದಸ್ತಾವೇಜು ನಂಬ್ರ ೬೯೩/೨೦೨೬-೨೭ರಂತೆ ಆಪಾದಿತರು ರಿಜಿಸ್ಟರ್ ಮಾಡಿ ಕೊಟ್ಟಿರುವುದಾಗಿದೆ. ಈ ರೀತಿಯಾಗಿ ಅಪಾದಿತರು ತನ್ನ ಅತಿಕ್ರಮಿಸಿರುವ ಸರಕಾರಿ ಜಮೀನನ್ನು ಸೇರಿಸಿ ಒಟ್ಟು ೦.೯೮.೭೫ ಎಕ್ರೆ ಜಾಗವನ್ನು ಕೊಡುವುದಾಗಿ ಪಿರ್ಯಾದಿದಾರರಿಂದ ೯೦ ಲಕ್ಷಕ್ಕೆ ಕರಾರು ಆದರೂ ಕೂಡ ೧,೦೦,೬೧,೨೫೦ ರೂ ಹಣವನ್ನು ಪಡೆದು ವಂಚನೆ ಮಾಡಿರುವುದಾಗಿದೆ ಎಂದು ಆ.೧೯ರಂದು ಎಫ್‌ಐಆರ್ ದಾಖಲಿಸಲಾಗಿದೆ.

ಆರೋಪ ನಿರಾಕರಿಸಿದ ಸೋಮನಾಥ ನಾಯಕ್ ಮತ್ತು ರಂಜನ್ ರಾವ್ : ಭೂಮಿಯ ಮಾಲಕ ರಂಜನ್
ರಾವ್ ಎರ್ಡೂರು ಕರಾರು ಪ್ರಕಾರ ೨೮.೫೦ ಸೆಂಟ್ಸ್ ಭೂಮಿಯನ್ನು ಕುಮ್ಮಿ ಹಕ್ಕು ಸಹಿತ ನೋಂದಣಿ ಮಾಡಿಕೊಟ್ಟಿದ್ದಾರೆ. ಇನ್ನೂ ೧೦.೫೦ ಸೆಂಟ್ಸ್ ನೋಂದಣಿಗೆ ಬಾಕಿ ಇರುತ್ತದೆ. ಸರ್ವೆಯರ್‌ಗಳ ದೀರ್ಘ ಮುಷ್ಕರದಿಂದಾಗಿ ನಕ್ಷೆ ಸಿದ್ಧವಾಗದೆ ನೋಂದಣಿ ಸಾಧ್ಯವಾಗಿಲ್ಲ, ನಾವು ಅವರಿಗೆ ವಂಚನೆ ಮಾಡಿಲ್ಲ, ಯಾವುದೇ ವಿಷಯ ಮಚ್ಚಿಟ್ಟಿಲ್ಲ. ಭೂಕಬಳಿಕೆ ನಿಷೇಧ ಕೋರ್ಟ್ ನಲ್ಲಿ ದಾವೆ ಇರುವುದು ನಮಗೆ ತಿಳಿದು ಬಂದದ್ದು ನೋಂದಣಿಯಾದ ಕೆಲ ವಾರ ಬಳಿಕ, ಕುಮ್ಮಿ ಭೂಮಿ ಈ ಕೋರ್ಟ್ನ ವ್ಯಾಪ್ತಿಗೆ ಬರುವುದಿಲ್ಲ. ನಮ್ಮಲ್ಲಿ ಮಾತನಾಡದೆ ಏಕಾಏಕೆ ಪೊಲೀಸ್ ದೂರು ನೀಡಿರುವುದು ತುಂಬಾ ಬೇಸರವುಂಟು ಮಾಡಿದೆ. ಅವರಿಗೆ ನಾವು ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದೇವೆ. ನೋಂದಣಿಯ ಮೊದಲೇ ಭೂಮಿ ಅವರ ಸ್ವಾಧೀನಕ್ಕೆ ಕೊಟ್ಟಿದ್ದೇವೆ. ಅವರು ಸಜ್ಜನರು. ಯಾರದ್ದೋ ಕುಮ್ಮಕ್ಕಿನಿಂದ ದೂರು ನೀಡಿರಬಹುದು ಎಂಬುದು ನಮ್ಮ ಭಾವನೆ. ಅವರಿಗೆ ಭೂಮಿ ಬೇಡವಾದಲ್ಲಿ ತಿಳಿಸಲಿ, ಅವರಿಗೆ ನಷ್ಟವಾಗದಂತೆ ಹಣ ಹಿಂತಿರುಗಿಸಲು ನಾವು ಸಿದ್ಧರಿದ್ದೇವೆ. ನಾವು ಈವರೆಗೆ ನಡೆಸಿದ ಯಾವುದೇ ಭೂ ವ್ಯವಹಾರದಲ್ಲಿ ಯಾರಿಗೂ ವಂಚನೆ ಅಥವಾ ಅನ್ಯಾಯ ಮಾಡಿಲ್ಲ, ಮಾಡುವುದೂ ಇಲ್ಲ ಎಂದು ಕೆ. ಸೋಮನಾಥ್ ನಾಯಕ್ ಮತ್ತು ರಂಜನ್ ರಾವ್ ಸ್ಪಷ್ಟನೆ ನೀಡಿದ್ದಾರೆ.

Related posts

ಬೆಳ್ತಂಗಡಿ ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ವಿಶ್ವ ಯೋಗ ದಿನಾಚರಣೆ

Suddi Udaya

ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಣಕು ಸಂಸತ್ತು ಅಧಿವೇಶನ.

Suddi Udaya

ಭಾರತೀಯ ಸೇನೆಯ ಪರಾಕ್ರಮ, ಶೌರ್ಯ, ನಿಖರತೆ ಶ್ಲಾಘನೀಯ: ರಕ್ಷಿತ್ ಶಿವರಾಂ

Suddi Udaya

ಮದ್ದಡ್ಕ ತೋಟಗಾರಿಕೆ ಇಲಾಖೆಯ ಆವರಣ ಗೋಡೆ ಕುಸಿತ

Suddi Udaya

ಉಜಿರೆ ಕಾಶಿಬೆಟ್ಟು ಸಹನಶ್ರೀ ಕ್ರೆಡಿಟ್ ಸೌಹಾರ್ದ ಕೋ-ಆಪರೆಟಿವ್ ಸೊಸೈಟಿಯಿಂದ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ

Suddi Udaya

ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 16ನೇ ವರ್ಷದ ಪಟ್ಟಾಭಿಷೇಕದ ವರ್ಧಂತ್ಯುತ್ಸವ

Suddi Udaya
error: Content is protected !!