30.9 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಭಾರತ್ ಬ್ಯಾಂಕಿಗೆ 48 ವರ್ಷಗಳ ಸಂಭ್ರಮ: ಬೆಳ್ತಂಗಡಿ ಶಾಖೆಯಲ್ಲಿ ಆಚರಣೆ

ಬೆಳ್ತಂಗಡಿ: ಮೂರು ರಾಜ್ಯಗಳಲ್ಲಿ ನೂರಕ್ಕೂ ಅಧಿಕ ಶಾಖೆಗಳನ್ನು ಹೊಂದಿರುವ ಭಾರತ್ ಬ್ಯಾಂಕ್ ತನ್ನ 48ನೇ ವರ್ಷದ ಸಂಭ್ರಮವನ್ನು ಬೆಳ್ತಂಗಡಿ ಶಾಖೆಯಲ್ಲಿ ಆ.21ರಂದು ಸಂಭ್ರಮದಿಂದ ಆಚರಿಸಿತು.

ಕಾರ್ಯಕ್ರಮವನ್ನು ನಿವೃತ್ತ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಪೀತಾಂಬರ ಹೆರಾಜೆ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ ಭಾರತ್ ಬ್ಯಾಂಕ್ ನಮ್ಮ ಬ್ಯಾಂಕ್ ಎಂಬ ಹೆಮ್ಮೆ ಎಲ್ಲರಲ್ಲಿದೆ. ಗ್ರಾಹಕರ ವಿಶ್ವಾಸವೇ ಬ್ಯಾಂಕಿನ ಯಶಸ್ಸಿನ ಮೂಲ ಎಂದರು.

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಭಗೀರಥ ಜಿ. ಅವರು ಮಾತನಾಡಿ ಭಾರತ್ ಬ್ಯಾಂಕ್ ಗ್ರಾಹಕ ಸ್ನೇಹಿ ಸೇವೆ ಹಾಗೂ ಉತ್ತಮ ಕಾರ್ಯವೈಖರಿಯಿಂದ ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ ಎಂದರು.

ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ಕೆ.ಎಸ್. ಮಾತನಾಡಿ ಸಿಬ್ಬಂದಿಗಳ ನಗುಮುಖದ ಸೇವೆ ಹಾಗೂ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯದಿಂದ ಬ್ಯಾಂಕ್ ಬಲಿಷ್ಠವಾಗಿ ಬೆಳೆಯುತ್ತಿದೆ ಎಂದು ಹೇಳಿದರು.

ಪತ್ರಕರ್ತ ಅಶ್ರಫ್ ಆಲಿಕುಂಞಿ ಮಾತನಾಡಿ ಭಾರತ್ ಬ್ಯಾಂಕ್ ನನಗೆ ಸಾಲ ಸೌಲಭ್ಯ ನೀಡಿದ ಫಲವಾಗಿ ಇಂದು ಉದ್ಯಮ ನಡೆಸಲು ಸಾಧ್ಯವಾಗಿದೆ ಎಂದು ಸೇವೆಯನ್ನು ಸ್ಮರಿಸಿದರು‌.

ಈ ಸಂದರ್ಭದಲ್ಲಿ ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆಯ ಸ್ಥಾಪಕಾಧ್ಯಕ್ಷೆ ಸುಜಿತಾ ವಿ. ಬಂಗೇರ, ಶ್ರೀ ಗುರುದೇವ ಸೊಸೈಟಿಯ ವಿಶೇಷಾಧಿಕಾರಿ ಮೋನಪ್ಪ ಪೂಜಾರಿ ಕಂಡೆಂತ್ಯಾರು, ಸಿಇಒ ಅಶ್ವಥ್ ಕುಮಾರ್, ಸುದ್ದಿ ಉದಯ ಪತ್ರಿಕೆಯ ಮುಖ್ಯಸ್ಥ ಸಂತೋಷ್ ಪಿ. ಕೋಟ್ಯಾನ್, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷೆ ಲೀಲಾವತಿ, ಉದ್ಯಮಿ ದಿನೇಶ್ ಸಾವ್ಯ, ಸಾಂಘವಿ ಡಿಸೈನ್‌ನ ಪ್ರಮೋದ್ ಕಾಮತ್, ರಾಜೇಂದ್ರ ಎಂ., ಹುಂಡೈ ಶೋರೂಮ್ ಮ್ಯಾನೇಜರ್ ಭರತ್ ಶೆಟ್ಟಿ, ಗುರುದೇವ ಬ್ಯಾಂಕಿನ ಶಿವಪ್ರಸಾದ್, ಸೌಮ್ಯ, ಇಂಜಿನಿಯರ್ ಮುರಳೀಧರ್, ಆಶಾ ಉಜಿರೆ, ಶಿವಾನಂದ ಶೆಟ್ಟಿ, ಪ್ರಕಾಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಭಾರತ್ ಬ್ಯಾಂಕ್ ಬೆಳ್ತಂಗಡಿ ಶಾಖೆಯ ವ್ಯವಸ್ಥಾಪಕ ದೀಪಕ್ ಪೂಜಾರಿ, ಉಪ ವ್ಯವಸ್ಥಾಪಕಿ ಶ್ವೇತಾ ಪೂಜಾರಿ ಹಾಗೂ ಸಿಬ್ಬಂದಿಗಳಾದ ಮಂಜುನಾಥ್ ಜನಾರ್ಧನ್, ಮಂಜುನಾಥ ಪೂಜಾರಿ, ಸುಧೀರ್, ಸಂಗೀತಾ, ಪೂರ್ಣಿಮಾ, ಹೇಮಚಂದ್ರ ಸೇರಿದಂತೆ ಶ್ರೀ ಗುರುದೇವ, ಭಾರತ್ ಬ್ಯಾಂಕ್ ಹಾಗೂ ಹುಂಡೈ ಶೋರೂಮ್ ಸಿಬ್ಬಂದಿಗಳು ಮತ್ತು ಗ್ರಾಹಕರು ಭಾಗವಹಿಸಿದ್ದರು.

Related posts

ಬೆಳ್ತಂಗಡಿ : ಐಜಿಎನ್ಐಟಿಇ ಮ್ಯಾನೇಜ್ಮೆಂಟ್ ಫೆಸ್ಟ್ ಲ್ಲಿ ವಾಣಿ ಪದವಿ ಪೂರ್ವ ಕಾಲೇಜು ಚಾಂಪಿಯನ್

Suddi Udaya

ಮಹಾಕುಂಭಮೇಳದಲ್ಲಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಸಿಬ್ಬಂದಿಗಳಿಂದ ಪುಣ್ಯ ಸ್ನಾನ

Suddi Udaya

ಜಿಲ್ಲಾ ಸಂಸ್ಕಾರ ಭಾರತೀ ವತಿಯಿಂದ ವೇಣೂರಿನ ಶ್ರೀ ವರ್ಧಮಾನ ಸ್ವಾಮಿ ಬಸದಿಯಲ್ಲಿ “ಸಂಸ್ಕಾರ ಸಿಂಧೂರ” ಚಿಂತನ ಮಂಥನ ಕಾರ್ಯಕ್ರಮ

Suddi Udaya

ಎಕ್ಸೆಲ್ ಉಪನ್ಯಾಸಕರಿಂದ ಸಾಂಸ್ಕೃತಿಕ ವೈಭವ

Suddi Udaya

ಮಚ್ಚಿನ : ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಭೇಟಿ

Suddi Udaya

ಕಲ್ಮಂಜ: ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಹಾಗೂ ವಾರ್ಷಿಕ ಜಾತ್ರೋತ್ಸವ ಸಮಿತಿಯ ಪೂರ್ವಭಾವಿ ಸಭೆ

Suddi Udaya
error: Content is protected !!