28.1 C
ಪುತ್ತೂರು, ಬೆಳ್ತಂಗಡಿ
October 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಚ್ಚಿನದಲ್ಲಿ ಚಿರತೆ ಓಡಾಟ: ಜನರಲ್ಲಿ ಆತಂಕ

ಬೆಳ್ತಂಗಡಿ: ತಾಲೂಕಿನ ಮಚ್ಚಿನ ಗ್ರಾಮದ ಬಳ್ಳಮಂಜ,ಪುಂಚ ಪಾದೆ ಪರಿಸರದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.


ಜನನಿಬಿಡ ಪ್ರದೇಶದ ಸಮೀಪದಲ್ಲಿರುವ ಅರಣ್ಯ ಪ್ರದೇಶದಲ್ಲಿ ಚಿರತೆ ಓಡಾಡುತ್ತಿರುವುದನ್ನು ಸ್ಥಳೀಯರು ಮೊಬೈಲ್‌ ನಲ್ಲಿ ವಿಡಿಯೊ ಚಿತ್ರೀಕರಿಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಆಗಿದೆ.

ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಚಿರತೆ ಓಡಾಟ ಕಂಡುಬರುತ್ತಿದೆ ಎಂಬ ಮಾಹಿತಿ ಸ್ಥಳೀಯರಿಂದ ಕೇಳಿಬರುತ್ತಿತ್ತು. ಇದೀಗ ಚಿರತೆಯ ಚಲನವಲನದ ದೃಶ್ಯ ಸೆರೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಜನರು ಒಂಟಿಯಾಗಿ ಸಂಚರಿಸಲು ಹಿಂದೇಟು ಹಾಕುವಂತಾಗಿದೆ. ಕೃಷಿ ಚಟುವಟಿಕೆಗಳಿಗೆ ತೆರಳುವವರು ಹಾಗೂ ಜಾನುವಾರು ಸಾಕಣೆ ಮಾಡುತ್ತಿರುವವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತಾಗಿದೆ.

ಇದರ ನಡುವೆ ಪರಿಸರದಲ್ಲಿ ಹುಲಿ ಕಾಣಿಸಿಕೊಂಡಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇದರಿಂದ ಜನರಲ್ಲಿ ಮತ್ತಷ್ಟು ಆತಂಕ ಉಂಟಾಗಿದೆ. ಆದರೆ ಅರಣ್ಯ ಇಲಾಖೆ ಈ ಭಾಗದಲ್ಲಿ ಹುಲಿ ಓಡಾಟ ಇರುವ ಸಾಧ್ಯತೆಯನ್ನು ತಳ್ಳಿಹಾಕಿದೆ. ಈ ಪರಿಸರದಲ್ಲಿ ಈ ಹಿಂದೆಯೂ ಚಿರತೆ ಓಡಾಟದ ಕುರಿತು ಮಾಹಿತಿ ಲಭಿಸಿತ್ತು ಎಂದು ಅರಣ್ಯ ಇಲಾಖೆ ತಿಳಿಸಿದೆ.

Related posts

ಬೆಳಾಲು: ಸ್ಕೂಟರ್‌ಗೆ ಕ್ರೇನ್ ಡಿಕ್ಕಿ ಹೊಡೆದು ಅಪಘಾತ-ಬಳಂಜ ಕಾಪಿನಡ್ಕ ನಿವಾಸಿ ಜಯ ಮೇಸ್ತ್ರೀ ಸ್ಥಳದಲ್ಲೇ ಸಾವು

Suddi Udaya

ಡಿ.6-8 ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದ ನೂತನ ರಾಜಗೋಪುರ, ಶ್ರೀ ದುರ್ಗಾಗಣೇಶ ಸಭಾಭವನ ಲೋಕಾರ್ಪಣೆ

Suddi Udaya

ಗುರುವಾಯನಕೆರೆ ವ್ಯಾಪ್ತಿಯಲ್ಲಿ ದಾಖಲೆಗಳಿದ್ದ ಪರ್ಸ್ ಕಳೆದುಹೋಗಿದೆ: ಸಿಕ್ಕಿದ್ದಲ್ಲಿ ಹಿಂದಿರುಗಿಸುವಂತೆ ಮನವಿ

Suddi Udaya

ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಬೆಳ್ತಂಗಡಿ ಕ್ಷೇತ್ರದ ಸಾಮಾನ್ಯ ಸಭೆ

Suddi Udaya

ಧರ್ಮಸ್ಥಳ ವಸ್ತು ಸಂಗ್ರಹಾಲಯಕ್ಕೆ ಬರಲಿದೆ ಹಾಯಿದೋಣಿ: ಜೂ.9ರಂದು ಕುಂದಾಪುರದಿಂದ ಮೆರವಣಿಗೆಯ ಮೂಲಕ ಧಮ೯ಸ್ಥಳಕ್ಕೆ

Suddi Udaya

ಪಡಂಗಡಿ ಗ್ರಾಮ ಪಂಚಾಯತ್ ನ ಗ್ರಾಮಸಭೆ

Suddi Udaya
error: Content is protected !!