25.2 C
ಪುತ್ತೂರು, ಬೆಳ್ತಂಗಡಿ
October 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಸಂಸ್ಥೆಗೆ ಕ್ಲಾರಿಯನ್ ಕಂಪೆನಿಯ ಏರಿಯಾ ಸೇಲ್ಸ್ ಮ್ಯಾನೇಜರ್ ಮಹೇಶ್ ಭೇಟಿ

ಬೆಳ್ತಂಗಡಿ: ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಒಂದೇ ತಾಯಿ ಮಕ್ಕಳಂತೆ ಇದ್ದು ಪರಸ್ಪರ ಸಹಕರಿಸಿದರೆ ಗುರಿ ಮುಟ್ಟಲು ಸಾಧ್ಯ ಎಂದು ಕ್ಲಾರಿಯನ್ ಕಂಪೆನಿಯ ಏರಿಯಾ ಸೇಲ್ಸ್ ಮ್ಯಾನೇಜರ್ ಮಹೇಶ್ ಹೇಳಿದರು.

ಅವರು ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳನ್ನು ಉದ್ದೇಶಿಸಿ ಅನುಭವವನ್ನು ಹಂಚಿಕೊಂಡರು.

ಪರಸ್ಪರ ಹೊಂದಾಣಿಕೆ ಮತ್ತು ಶಿಸ್ತು ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ. ಗ್ರಾಹಕರನ್ನು ಆಕರ್ಷಿಸುವ ಹಾಗೂ ಗೌರವಿಸುವ ಕಲೆ ಎಲ್ಲಾ ಸಿಬ್ಬಂದಿಗಳಲ್ಲಿ ಇರಬೇಕು. ಜೀವನದಲ್ಲಿ ಅವಮಾನಗಳನ್ನು ಎದುರಿಸಿದರೆ ಮನುಷ್ಯ ಬಲಿಷ್ಠನಾಗುತ್ತಾನೆ. ಇದರಲ್ಲಿ ಮಾಲಕರ ಪ್ರೋತ್ಸಾಹ ಹಾಗೂ ಶುಭಹಾರೈಕೆ ಅತ್ಯಗತ್ಯ ಎಂದರು.

ಮಾಹಿತಿ ಕಾರ್ಯಾಗಾರದಲ್ಲಿ ಸಂಸ್ಥೆಯನ್ನುದ್ದೇಶಿಸಿ ಮಾತನಾಡಿದ ಮಹೇಶ್ ರವರಿಗೆ ವ್ಯವಸ್ಥಾಪಕ ಲ್ಯಾನ್ಸಿ ಡಿಸೋಜಾ ಸ್ಮರಣಿಕೆ ನೀಡಿ ಗೌರವಿಸಿದರು.
ಕುಮಾರಿ ಸ್ಪಂದನಾ ಸ್ವಾಗತಿಸಿ, ಪೂರ್ಣಿಮ ವಂದಿಸಿದರು. ಸಂಸ್ಥೆಯ ಸಿಬ್ಬಂದಿಗಳು,ಆಡಳಿತ ನಿರ್ದೇಶಕರಾದ ಅಲ್ಫೋನ್ಸ್ ಫ್ರಾಂಕೋ, ಅಕೌಂಟೆಂಟ್ ಶಶಿಕಲಾ, ಜೋಶಿಲ್ ಫೆರ್ನಾಂಡಿಸ್, ವರ್ಷಿತಾ, ಪವಿತ್ರ ಹಾಗೂ ಇತರರು ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ: ಏಕದಿನ ಶೈಕ್ಷಣಿಕ ಸಮ್ಮೇಳನ ಸಮಾರೋಪ: ಪಠ್ಯಪುಸ್ತಕ ರಚನೆಯಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು: ಎಮ್.ಎಲ್.ಸಿ ಭೋಜೇ ಗೌಡ

Suddi Udaya

ಕುಂಭಶ್ರೀ ಪಿಯು ಕಾಲೇಜಿನಿಂದ “ಆಸರೆ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆ – 2026” ಯಶಸ್ವಿ ಆಯೋಜನೆ

Suddi Udaya

ಇಂದಬೆಟ್ಟು ಸಮೃದ್ಧಿ ಸಂಜೀವಿನಿ ಮಹಿಳಾ ಒಕ್ಕೂಟ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ಜೇನು ಕೃಷಿ ತರಬೇತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ ಮಾತೃಶ್ರೀ ಸಿಲ್ಕ್ ನಲ್ಲಿ ಅಮೋಘ ದರಕಡಿತ ಮಾರಾಟ, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

Suddi Udaya

ಕಡಿರುದ್ಯಾವರ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಕಲ್ಲೇರಿ: ಪಂಜಿಕುಡೇಲು ನಿವಾಸಿ ಸುಂದರ ಕೋಟ್ಯಾನ್ ನಿಧನ

Suddi Udaya
error: Content is protected !!