34.2 C
ಪುತ್ತೂರು, ಬೆಳ್ತಂಗಡಿ
October 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ; ಶೇ. 15 ಡಿವಿಡೆಂಡ್ ಘೋಷಣೆ

ವೇಣೂರು: ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘದ ೨೦೨೫-೨೬ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಆ. 25 ರಂದು ತುಂಬೆದಲೆಕ್ಕಿ ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷರಾಗಿರುವ ರಮೇಶ್ ಪೂಜಾರಿ ಪಡ್ಡಾಯಿಮಜಲು ಅವರು ಸಭೆಯ ಅಧ್ಯಕ್ಷತೆ ವಹಿಸಿ, ಸಂಘದ ಪ್ರತೀ ಸದಸ್ಯರಿಗೆ 15 ಶೇ. ಡಿವಿಡೆಂಡ್ ಘೋಷಿಸಿದರು. ಸಂಘವು 6,57,48,313 ರೂ. ವ್ಯವಹಾರ ನಡೆಸಿ, ರೂ. 26,96,875 ಲಾಭ ಗಳಿಸಿದೆ ಎಂದರು. ಸಂಘದಿಂದ ಸಾಮಾಜಿಕ ಚಟುವಟಿಕೆಗಳನ್ನು ಮುಂದುವರಿಸುವುದಾಗಿ ಹೇಳಿದ ಅವರು, ಸಂಘದ ಸದಸ್ಯರ ಆರೋಗ್ಯ ಮತ್ತು ಅವರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದಾಗಿ ಅವರು ತಿಳಿಸಿದರು. ಸಂಘವನ್ನು ಅತ್ಯುತ್ತಮ ಸಂಘವನ್ನಾಗಿ ಮುನ್ನಡೆಯಲು ಕಾರಣೀಕರ್ತರಾದ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದರು.

ದ.ಕ. ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಕಾಮತ್ ಅವರು ಸಂಘಕ್ಕೆ ಹಾಗೂ ಸದಸ್ಯರಿಗೆ ಒಕ್ಕೂಟದಿಂದ ದೊರೆಯುವ ಸವಲತ್ತುಗಳ ಮಾಹಿತಿ ನೀಡಿದರು. ಗುಣಮಟ್ಟದ ಹಾಲು ಪೂರೈಕೆಯಿಂದ ಸದಸ್ಯರಿಗೆ ಮತ್ತು ಸಂಘಕ್ಕೆ ಆಗುವ ಪ್ರಯೋಜನಗಳ ಬಗ್ಗೆ ಸದಸ್ಯರಿಗೆ ಅವರು ತಿಳಿಯಪಡಿಸಿದರು. ನಮ್ಮದು ಕೃಷಿ ಪ್ರಧಾನವಾಗಿದ್ದರೂ ಹೈನುಗಾರಿಕೆಯನ್ನು ಜನ ಮೆಚ್ಚುಕೊಂಡಿದ್ದಾರೆ.

ಅಂಬ್ಯುಲೆನ್ಸ್ ಸೇವೆ
ಹೈನುಗಾರರ ಅನುಕೂಲತೆಗಾಗಿ ಪಶು ಸಂಜೀವಿನಿ ಆಂಬುಲೆನ್ಸ್ ಇದ್ದು, ಜಾನುವಾರುಗಳಿಗಾಗಿಯೇ ಮೀಸಲಾದ ತುರ್ತು ಚಿಕಿತ್ಸಾ ವಾಹನವಾಗಿದೆ. ಜಾನುವಾರುಗಳಿಗೆ ಕಾಯಿಲೆ ಅಥವಾ ತುರ್ತು ಅಪಘಾತ/ಸಮಸ್ಯೆಗಳು ಉಂಟಾದಾಗ ಈ ಸೇವೆಯನ್ನು ಪಡೆಯಬಹುದು ಎಂದು ರಾಜೇಶ್ ಕಾಮತ್ ಹೇಳಿದರು.

ಸಂಪರ್ಕ ಹೇಗೆ?
ತುರ್ತು ಸಂದರ್ಭದಲ್ಲಿ ರೈತರು ಸ್ಥಳೀಯ ಪಶು ಆಸ್ಪತ್ರೆಯನ್ನು ಅಥವಾ ಸರ್ಕಾರದ ನಿರ್ದಿಷ್ಟ ಸಹಾಯವಾಣಿ ಸಂಖ್ಯೆಗಳ (ಟಾಲ್ ಫ್ರೀ ನಂಬರ್ 1962 -Animal Helpline) ಮೂಲಕ ಈ ತುರ್ತು ಆಂಬುಲೆನ್ಸ್ ಸೇವೆಯನ್ನು ತಮ್ಮ ಮನೆಬಾಗಿಲಿಗೇ ಕರೆಸಿಕೊಳ್ಳಬಹುದು ರಾಜೇಶ್ ಕಾಮತ್ ಹೇಳಿದರು.


ಸನ್ಮಾನ
ಯುವ ವೈದ್ಯ ಡಾ. ಧೀರಜ್ ಹೆಗ್ಡೆ ಬಜಿರೆ, ಚಾರ್ಟೆಟ್ ಅಕೌಂಟೆಂಟ್ ದೀಪಕ್ ಹೆಗ್ಡೆ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ನಿಕ್ಷಿತ್ ಎಸ್. ಕೋಟ್ಯಾನ್ ಮತ್ತು ಕು. ಅನುಜ್ಞಾ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರ ಸಾಧಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಯಿತು. ಸರಾಸರಿ ಅತೀ ಹೆಚ್ಚು ಹಾಗೂ ಗುಣಮಟ್ಟದ ಹಾಲು ಪೂರೈಸಿದ ಸದಸ್ಯರನ್ನು ಗೌರವಿಸಲಾಯಿತು. ನಿರ್ದೇಶಕ ನವೀನ್ ಪೂಜಾರಿ ಪಚ್ಚೇರಿ ಮತ್ತು ವಸಂತ ಗೌಡ ಸನ್ಮಾನಪತ್ರ ವಾಚಿಸಿದರು. ನಿಧನ ಹೊಂದಿರುವ ಸಂಘದ ಸದಸ್ಯರಿಗೆ ಮೌನಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಂಘದ ಕಾರ್ಯನಿರ್ವಹಣಾಧಿಕಾರಿ ರಾಜು ಪೂಜಾರಿ ವರದಿ ಮಂಡಿಸಿ, ಸಭೆಯನ್ನು ನಿರ್ವಹಿಸಿದರು.
ಸಂಘದ ಉಪಾಧ್ಯಕ್ಷ ಜೋಸ್ಲಿ ಫೆರ್ನಾಂಡಿಸ್, ನಿರ್ದೇಶಕರುಗಳಾದ ಕುಮಾರುಹೆಗ್ಡೆ, ಆನಂದ ಸಾಲ್ಯಾನ್, ಭಾಸ್ಕರ ಬಲ್ಯಾಯ, ಸೇಸಪ್ಪ ಪೂಜಾರಿ, ಸುಂದರ, ಶ್ರೀಮತಿ ಶಾರದಾ, ಕು. ಸುನಂದ ಹಾಗೂ ವಿಮಲ ನಾಯ್ಕ್ ಉಪಸ್ಥಿತರಿದ್ದರು.

Related posts

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ರಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ: ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಶಿಥಿಲಾವ್ಯಸ್ಥೆಯಲ್ಲಿ ಇರುವುದರಿಂದ ನೂತನ ಕಟ್ಟಡ ರಚನೆಗೆ ಮನವಿ

Suddi Udaya

ಮಚ್ಚಿನ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಶಾಲಾ ಸಂಸತ್ತಿನ ಪ್ರಮಾಣ ವಚನ

Suddi Udaya

ಕರಾವಳಿಯ ಅಭಿವೃದ್ಧಿಯೊಂದಿಗೆ ಕಾರ್ಮಿಕರ ಬದುಕಿನಲ್ಲೂ ಹೊಸ ಅಧ್ಯಾಯ ಆರಂಭವಾಗಲಿ : ಅನಿಲ್ ಕುಮಾರ್ ಯು

Suddi Udaya

ಉಜಿರೆ- ಬೆಳಾಲು ರಸ್ತೆಯ ಕಿರಿಯಾಡಿ ಕ್ರಾಸ್ ಬಳಿ ಧರೆಗುರುಳಿದ 33 ಕೆವಿ ವಿದ್ಯುತ್ ಟವರ್ ದೊಂಡೋಲೆ ಪವರ್ ಪ್ರಾಜೆಕ್ಟ್ ನವರಿಗೆ ಸೇರಿದ ಕಾರು – ಬೈಕ್ ಜಖಂ: ಕಾರಿನೊಳಗೆ ಇದ್ದ ‌ಪವರ್ ಪ್ರಾಜೆಕ್ಟ್ ನ ಸಿಬ್ಬಂದಿ ಗಣೇಶ್ ಅಪಾಯದಿಂದ ಪಾರು

Suddi Udaya

ಹೊಸಂಗಡಿ ಶೌರ್ಯ ‌ವಿಪತ್ತು ನಿರ್ವಹಣಾ ಘಟಕದಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನಾಟಿ

Suddi Udaya

ಉರುವಾಲು : ಬೈತಾರು ಕಾರಿಂಜ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಸಂಭ್ರಮ

Suddi Udaya
error: Content is protected !!