33.9 C
ಪುತ್ತೂರು, ಬೆಳ್ತಂಗಡಿ
October 14, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಯ್ಯೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆ

ಕೊಯ್ಯೂರು : “ವಿದ್ಯಾರ್ಥಿಗಳಿಗೆ ಮನೆಯಲ್ಲಿ ಕಲಿಕೆಯ ವಾತಾವರಣ ನಿರ್ಮಾಣ ಮಾಡಬೇಕು. ಪೋಷಕರು ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕು. ಆಗ ವಿದ್ಯಾರ್ಥಿಗಳ ಯಶಸ್ಸಿಗೆ ಸಹಕಾರಿಯಾಗುತ್ತದೆ ” ಎಂದು ಧರ್ಮಸ್ಥಳ ಎಸ್ ಡಿ ಎಂ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಬಿ.ಸೋಮಶೇಖರ ಶೆಟ್ಟಿ ಅಭಿಪ್ರಾಯ ಪಟ್ಟರು.

ಅವರು ಕೊಯ್ಯೂರು ಸರಕಾರಿ ಪದವಿಪೂರ್ವ ಕಾಲೇಜ್ ನ ಪೋಷಕರ ಸಭೆಯಲ್ಲಿ ವಿದ್ಯಾರ್ಥಿಗಳ ಹೆತ್ತವರನ್ನು ಉದ್ದೇಶಿಸಿ ಮಾತನಾಡುತ್ತಾ “ಯಶಸ್ಸಿಗೆ ಪರಿಶ್ರಮ ಬಹಳ ಮುಖ್ಯ. ಅಂತೆಯೇ ಯಶಸ್ಸನ್ನು ಪಡೆಯಲು ಮೆಟ್ಟಿಲುಗಳನ್ನು ಏರಬೇಕು ವಿನಃ ಲಿಫ್ಟ್ ಮೂಲಕ ಸಾಧ್ಯವಾಗುವುದಿಲ್ಲ” ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಮೋಹನ ಗೌಡ ವಹಿಸಿಕೊಂಡಿದ್ದರು. ಪೋಷಕರಾದ ಸುರೇಶ್ ಬಂದಾರು ಸಾಂದರ್ಭಿಕವಾಗಿ ಮಾತನಾಡಿದರು.
ವಿದ್ಯಾರ್ಥಿನಿಯರಾದ ರಶ್ಮಿತ, ದಿವ್ಯ, ಕೃಪಾ, ಪ್ರಜ್ಞಾ, ಯಜ್ಞಶ್ರೀ ಪ್ರಾರ್ಥನೆ ಗೈದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಭವ್ಯ ಎಂ. ಸ್ವಾಗತಿಸಿ, ರಾಜ್ಯಶಾಸ್ತ್ರ ಉಪನ್ಯಾಸಕ ಸಂತೋಷ್ ಕುಮಾರ್ ವಂದಿಸಿದರು. ಇತಿಹಾಸ ಉಪನ್ಯಾಸಕ ಲಕ್ಷ್ಮಣ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಭಾಷಾ ಉಪನ್ಯಾಸಕಿ ಶ್ರೀಮತಿ ರಶ್ಮಿ ದೇವಿ, ಪ್ರಶಿಕ್ಷಣಾರ್ಥಿಗಳಾದ ಕುಮಾರಿ ಹರ್ಷಿಣಿ, ಆಮೀರ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Related posts

ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯಾದ ಇಸ್ರೊ ಕೈಗೊಂಡ ಚಂದ್ರಯಾನ-3 ಯಶಸ್ವಿ: ಕೇದಾರನಾಥ ಯಾತ್ರೆ ಕೈಗೊಂಡಿದ್ದ ಬೆಳ್ತಂಗಡಿಯ ಯುವಕರು ಹರಿದ್ವಾರದಲ್ಲಿ ಸಂಭ್ರಮಾಚರಣೆ

Suddi Udaya

ಇಂದಬೆಟ್ಟು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಇಬ್ರಾಹಿಂ ನಿಧನ

Suddi Udaya

ಬೆಳ್ತಂಗಡಿ ಬಂಗೇರ ಬಿಗ್ರೇಡ್ ವತಿಯಿಂದ ಶ್ರೀಮತಿ ಬಿನುತಾ ಬಂಗೇರರ ಸಾರಥ್ಯದಲ್ಲಿ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ

Suddi Udaya

ಕನ್ಯಾಡಿ-2 : ನಾರ್ಯ ಎಂಬಲ್ಲಿ ಚಿರತೆ ಪತ್ತೆ

Suddi Udaya

ಪಡಿತರ ಚೀಟಿದಾರರು ಇ-ಕೆವೈಸಿ ಮಾಡಲು ಆ.31 ಕೊನೆಯ ದಿನಾಂಕ

Suddi Udaya

ಮಚ್ಚಿನ : ಶ್ರೀ ಕ್ಷೇ. ಧ.ಗ್ರಾ, ಯೋಜನೆಯಿಂದ ಆರ್ಥಿಕ ಸಹಾಯಧನ ಹಸ್ತಾಂತರ

Suddi Udaya
error: Content is protected !!