26.3 C
ಪುತ್ತೂರು, ಬೆಳ್ತಂಗಡಿ
October 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸಹನಾ ಶ್ರೀ ಫೌಂಡೇಶನ್ ವತಿಯಿಂದ ಬಂಗಾಡಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಕ್ರೀಡಾ ಸಮವಸ್ತ್ರ ವಿತರಣೆ

ಬಂಗಾಡಿ: ಸರಕಾರಿ ಶಾಲೆಗಳ ಬಲವರ್ಧನೆಯ ಸದುದ್ದೇಶದಿಂದ ಬಂಗಾಡಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಸಹನಾಶ್ರೀ ಫೌಂಡೇಶನ್ ಅಧ್ಯಕ್ಷ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ರಾಜೇಶ್ ಪುದುಶೇರಿಯವರಿಂದ ಕ್ರೀಡಾ ಸಮವಸ್ತ್ರವನ್ನು ಉಚಿತವಾಗಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಂಘದ ಉಪಾಧ್ಯಕ್ಷ ಕೇಶವ ಗೌಡ ವಹಿಸಿದರು.

ಸಮವಸ್ತ್ರ ದಾನಿಗಳಾದ ರಾಜೇಶ್ ಪುದುಶೇರಿ ಇವರು ಕಾರ್ಯಕ್ರಮದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ತಮ್ಮ ಸಂಸ್ಥೆಯಿಂದ ಇದು ಮೊದಲ ಕೊಡುಗೆಯಾಗಿದ್ದು ಮುಂದಿನ ದಿನಗಳಲ್ಲಿ ನಿಮ್ಮೊಂದಿಗೆ ಕೈ ಜೋಡಿಸುವುದಾಗಿ ಭರವಸೆ ನೀಡಿದರು. ಸಮವಸ್ತ್ರ ಕೊಡುಗೆ ನೀಡಿದ ಸಹನಾಶ್ರೀ ಫೌಂಡೇಶನ್ ಅಧ್ಯಕ್ಷ ರಾಜೇಶ್ ಪುದುಶೇರಿ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಹನಶ್ರೀ ಫೌಂಡೇಶನ್ ನಿರ್ದೇಶಕರು, ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷೆ ಆಶಾಲತಾ, ಆನಂದ ಹಡೀಲು, ಲಕ್ಷ್ಮಣ ಗೌಡ ಇರ್ತಿಲಾಲ್, ಅಬ್ದುಲ್ ಸತ್ತಾರ್, ವಿಶ್ವನಾಥ್ ಉದ್ಧಾರ,ಉಮೇಶ್ ಪೂಜಾರಿ, ವೆಂಕಪ್ಪ ಮೂಲ್ಯ, ವೀರಪ್ಪ ಮೊಯ್ಲಿ, ಚಂದ್ರಶೇಖರ ಸುವರ್ಣ, ನವೀನ್ ಕುಮಾರ್ ಬಂಗಾಡಿ, ಹಾಸನ್, ನಿರ್ಮಲ, ಪ್ರದೀಪ್ ಕುಮಾರ್, ಪ್ರಶಾಂತ್ ಬಂಗಾಡಿ, ಕರೀಂ ಸಾಹೇಬ್, ಎಸ್ ಡಿ ಎಂ ಸಿ ಸದಸ್ಯರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಉಪಾಧ್ಯಯಿನಿ ಚಂದ್ರಕಲಾ ಸ್ವಾಗತಿಸಿ, ಸಹ ಶಿಕ್ಷಕಿ ವಿಲ್ಮಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿ, ಸಹ ಶಿಕ್ಷಕಿ ಕು.ದೇವಿಕಾ ವಂದಿಸಿದರು.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಸಂವಿಧಾನ ದಿನಾಚರಣೆ

Suddi Udaya

ಜಡಿಮಳೆ: ಕಳೆಂಜ ಕುಟ್ರುಪ್ಪಾಡಿ ರಾಮಣ್ಣ ನಾಯ್ಕರ ಸೋಗೆ ಮನೆ ಛಾವಣಿ ಸಂಪೂರ್ಣ ಕುಸಿತ

Suddi Udaya

ಕೊಕ್ಕಡ ಗ್ರಾ.ಪಂ.ವ್ಯಾಪ್ತಿಯಲ್ಲಿ ಬೀದಿ ದೀಪಗಳ ಉದ್ಘಾಟನೆ

Suddi Udaya

ಪಟ್ಟೂರು ಹಾಲು ಉತ್ಪಾದಕರ ಸಹಕಾರ ಸಂಘ: ಅಧ್ಯಕ್ಷರಾಗಿ ತಿಮ್ಮಪ್ಪ ಶೆಟ್ಟಿ, ಉಪಾಧ್ಯಕ್ಷರಾಗಿ ಶಶಿಧರ ಗೌಡ ಅವಿರೋಧ ಆಯ್ಕೆ

Suddi Udaya

ಬೆಳ್ತಂಗಡಿ :ಸ್ವಸ್ತಿಕ್ ಆಟೋ ಗ್ಯಾರೇಜ್ ಗೆ ಬೆಂಕಿ, ಹೊತ್ತಿ ಉರಿದ ಆಟೋ ಮತ್ತು ಸಾಮಾಗ್ರಿ, ಲಕ್ಷಾಂತರ ನಷ್ಟ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತು ಹಾಕಿದ ದೂರು ಪ್ರಕರಣ: ದೂರುದಾರ ಸಾಕ್ಷಿಯು ನೀಡಿರುವ ಅಸ್ಥಿಪಂಜರದ ಅವಶೇಷಗಳನ್ನು, ಪಂಚರ ಸಮ್ಮುಖದಲ್ಲಿ ಪೊಲೀಸರು ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ: ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು: ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್‌ ಕೆ.

Suddi Udaya
error: Content is protected !!