25.2 C
ಪುತ್ತೂರು, ಬೆಳ್ತಂಗಡಿ
October 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೋರ್ಟು ರಸ್ತೆಯ ಅಪಾಯಕಾರಿ ಗುಂಡಿಯನ್ನು ಮುಚ್ಚಿ ಸಂಚಾರ ಸುಗಮಗೊಳಿಸಿದ ಪಟ್ಟಣ ಪಂಚಾಯತ್

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣದ ವ್ಯಾಪ್ತಿಯ ತಾಲೂಕು ಕಚೇರಿಯಿಂದ ಕೋರ್ಟ್‌ಗೆ ಹೋಗುವ ರಸ್ತೆಯಲ್ಲಿ ರಸ್ತೆ ಬದಿ ಕುಸಿದು ನಿರ್ಮಾಣವಾದ ಗುಂಡಿಯನ್ನು ಪಟ್ಟಣ ಪಂಚಾಯತದಿಂದ ಮುಚ್ಚಿ ವಾಹನ ಸಂಚಾರಕ್ಕೆ ಸುಗಮಗೊಳಿಸಲಾಗಿದೆ.

ಕೋರ್ಟು ರಸ್ತೆಯ ಎರಡು ಬದಿಗೆ ರಸ್ತೆ ಕುಸಿತವಾಗಿ ವಾಹನ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ಅಪಾಯ ಉಂಟಾಗಿತ್ತು. ಒಂದು ಬದಿಯ ಗುಂಡಿಯನ್ನು ಪಂಚಾಯತು ವತಿಯಿಂದ ಈ ಹಿಂದೆ ಮುಚ್ಚಿ ಸರಿಪಡಿಸಲಾಗಿತ್ತು. ಇನ್ನೊಂದು ಬದಿಯ ಗುಂಡಿಯೂ ಇತ್ತಿಚೇಗೆ ಸುರಿದ ಮಳೆಗೆ ಕುಸಿತಕ್ಕೊಳಗಾಗಿ ಅಪಾಯವನ್ನು ತಂದೊಡ್ಡಿತ್ತು. ಇದರ ಬಗ್ಗೆ ಸುದ್ದಿ ಉದಯ ಆನ್‌ಲೈನ್ ನ್ಯೂಸ್‌ನಲ್ಲಿ ಸಚಿತ್ರ ವರದಿ ಪ್ರಕಟಿಸಲಾಗಿತ್ತು. ಜೊತೆಗೆ ಕೆಡಿಪಿ ಸದಸ್ಯ ಹಾಗೂ ಪಟ್ಟಣ ಪಂಚಾಯತು ಮಾಜಿ ಸದಸ್ಯ ಜಗದೀಶ್ ಡಿ. ಇದರ ದುರಸ್ತಿಗೆ ಪಂಚಾಯತಕ್ಕೆ ಮನವಿ ನೀಡಿದ್ದರು. ಪಂಚಾಯತದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಇದೀಗ ಪಟ್ಟಣ ಪಂಚಾಯತು ವತಿಯಿಂದ ರಸ್ತೆ ಕುಸಿತದ ಹೊಂಡಕ್ಕೆ ಕಲ್ಲು ತುಂಬಿಸಿ ದುರಸ್ತಿಗೊಳಿಸಿದ್ದಾರೆ.

Related posts

ಕೋಟದಲ್ಲಿ ಗ್ರಾ.ಪಂ. ಸದಸ್ಯರಿಗೆ ಕ್ರೀಡಾಕೂಟ ಮಚ್ಚಿನ ಗ್ರಾ.ಪಂ. ಗೆ ದ್ವಿತೀಯ ಪ್ರಶಸ್ತಿ

Suddi Udaya

ಚಾರ್ಮಾಡಿ ಪಂಚಾಯತ್ ನಲ್ಲಿ ಉಚಿತ ದಂತ ಹಾಗೂ ಆರೋಗ್ಯ ತಪಾಸಣಾ ಶಿಬಿರ

Suddi Udaya

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ , ಮುಂಡಾಜೆಯಲ್ಲಿ ಟಯರ್ ಹೊತ್ತಿಸಿ ಆಕ್ರೋಶ

Suddi Udaya

ಬೆಳಾಲು: ಅಕ್ರಮ ಕೋಳಿ ಅಂಕದ ಮೇಲೆ ಧರ್ಮಸ್ಥಳ ಪೊಲೀಸರ ದಾಳಿ

Suddi Udaya

ರಸ್ತೆ ಅಗಲೀಕರಣದಿಂದ ಪಟ್ಟಣದ ಸೌಂದರ್ಯಕ್ಕೆ ಧಕ್ಕೆ ಆಗದಿರಲಿ: ಅಕ್ಬರ್ ಬೆಳ್ತಂಗಡಿ

Suddi Udaya

ಕೊಕ್ಕಡ: ಶ್ರೀ ಲಕ್ಷ್ಮೀ ಪ್ರೋಫೇಶನಲ್ ಲೇಡಿಸ್ ಬ್ಯೂಟಿಪಾರ್ಲರ್ ಶುಭಾರಂಭ

Suddi Udaya
error: Content is protected !!