September 7, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿ

ಕೋಳಿ ಅಂಕದ ಮೇಲೆ ಪೊಲೀಸರ ದಾಳಿ – ಐವರು ವಶಕ್ಕೆ

ಬೆಳ್ತಂಗಡಿ: ತಾಲೂಕಿನ ಕಡಿರುದ್ಯಾವರ ಗ್ರಾಮದ ಗುಂಡೂರು ಎಂಬಲ್ಲಿ ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಮತ್ತು ಇಂದಬೆಟ್ಟು ಗ್ರಾಮದ ಬೀಟ್ ಸಿಬ್ಬಂದಿಗೆ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಸಿಕಂದರ್ ಪಾಷ ನೇತೃತ್ವದ ಪೊಲೀಸರು ಸೆ.6 ರಂದು ಸಂಜೆ 3:15 ಕ್ಕೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಎರಡು ಕೋಳಿಗಳ ಕಾಲಿಗೆ ಬಾಳು ಕಟ್ಟಿ, ಅವುಗಳನ್ನು ಎದುರುಬದುರು ಹಾರಿಸಿ ಹಣವನ್ನು ಪಣವಾಗಿರಿಸಿ ಕೋಳಿ ಅಂಕ ನಡೆಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಪೊಲೀಸರನ್ನು ಕಂಡ ಕೆಲವರು ಕೋಳಿಗಳೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ.

ಬಳಿಕ ಪೊಲೀಸರು ಹಿಂಬಾಲಿಸಿ ಐವರನ್ನು ವಶಕ್ಕೆ ಪಡೆದಿದ್ದಾರೆ.ವಶಕ್ಕೆ ಪಡೆದವರನ್ನು ಕಡಿರುದ್ಯಾವರ ಗ್ರಾಮದ ತಿಮ್ಮಯ್ಯ ಗೌಡ (59), ಕಲ್ಮಂಜ ಗ್ರಾಮದ ರಾಘವೇಂದ್ರ (37), ಕಣಿಯೂರು ಗ್ರಾಮದ ಉಮೇಶ್ (26), ಕಡಿರುದ್ಯಾವರ ಗ್ರಾಮದ ಬಾಲಕೃಷ್ಣ ಗೌಡ (58) ಹಾಗೂ ಮುಂಡಾಜೆ ಗ್ರಾಮದ ಭವಿತ್ (24) ಎಂದು ಗುರುತಿಸಲಾಗಿದೆ.ಸ್ಥಳದಲ್ಲಿ ಮೂರು ಕೋಳಿಗಳು ಹಾಗೂ ಒಂದು ಸಣ್ಣ ಕತ್ತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಕೋಳಿ ಅಂಕಕ್ಕೆ ಬಳಸಿದ್ದರೆನ್ನಲಾದ ಒಟ್ಟು 3,400 ರೂಪಾಯಿ ನಗದು ಹಣವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 87 ಕೆಪಿ ಆಕ್ಟ್, 11(1)(a)(n) Prevention of Animal Cruelty Act ಹಾಗೂ 112 r/w 3(5) BNS-2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಎಕ್ಸೆಲ್ ಪ್ರೀಮಿಯೆರ್ ಲೀಗ್ ಸೀಸನ್-3: ಎಕ್ಸೆಲ್ ವಿದ್ಯಾಗಣಪತಿ ತಂಡ ಚಾಂಪಿಯನ್ಸ್

Suddi Udaya

ಸಯನ್ಸ್ ಪ್ರಾಜೆಕ್ಟ್ ಡಿಸೈನರ್ ಪ್ರವೀಣ್ ಭಟ್‌ಗೆ “ಶಿಕ್ಷಣ ಸೇವಾರತ್ನ “ಪ್ರಶಸ್ತಿ

Suddi Udaya

ಮದ್ದಡ್ಕ ಪೇಟೆಯಲ್ಲಿ ಸರ್ವಿಸ್ ವಯಾರು ತೆಗೆಯುವಂತೆ ಸ್ಥಳೀಯರ ಒತ್ತಾಯ

Suddi Udaya

ಶುಭ ಕಾರ್ಯಕ್ರಮಕ್ಕೆ ಹೋಗಿ ಹಿಂತಿರುಗಿದಾಗ ನಾಲ್ಕೂರು ಬೊಕ್ಕಸ ಬಳಿ ಬೈಕ್ ಸ್ಕಿಡ್ : ಗಂಭೀರ ಗಾಯಗೊಂಡ ಮಹಿಳೆ ಸಾವು

Suddi Udaya

ತಾಲೂಕು ಆಡಳಿತ ಸೌಧದಲ್ಲಿ ಮಹಾವೀರ ಜಯಂತಿ ಆಚರಣೆ

Suddi Udaya

ಮಳೆಗೆ ಹಾನಿಗೊಳಗಾದ ನಡ ಹಾಗೂ ಉಜಿರೆ ಗ್ರಾಮಗಳ ಮನೆಗಳಿಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya
error: Content is protected !!