29.2 C
ಪುತ್ತೂರು, ಬೆಳ್ತಂಗಡಿ
September 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಿಕ್ಷಕರ ಸೇವೆ ಗುರುತಿಸಿ ಗೌರವಿಸಿದ ಬೆಳ್ತಂಗಡಿ ರೋಟರಿ ಕ್ಲಬ್

ಬೆಳ್ತಂಗಡಿ: ಶಿಕ್ಷಕರ ದಿನಾಚರಣೆ ಅಂಗವಾಗಿ ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಆನ್ಸ್ ಕ್ಲಬ್ ವತಿಯಿಂದ ತಾಲೂಕಿನ ವಿವಿಧೆಡೆ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ ಕೆ.ವಿ. ಹಾಗೂ ಆನ್ ಗಾಯತ್ರೀ ಶ್ರೀಧರ್ ಅವರು ಎಸ್‌ಡಿಎಂ ಪಿಜಿ ಕಾಲೇಜಿನ ಗೀತಾ ವಸಂತ್, ಎಸ್‌ಡಿಎಂ ಅನುದಾನಿತ ಪ್ರೌಢಶಾಲೆಯ ಶ್ರೀರಾಮ್ ಎನ್., ಮಾಯಾ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಕಾವ್ಯ ಹಾಗೂ ಎಸ್‌ಡಿಎಂ ಅನುದಾನಿತ ಪ್ರೌಢಶಾಲೆ ಉಜಿರೆಯ ಚಂದ್ರಶೇಖರ್ ಅವರನ್ನು ಗೌರವಿಸಿದರು.

ರೊ. ಬಿ.ಕೆ. ಧನಂಜಯ ರಾವ್ ಹಾಗೂ ಆನ್ಸ್ ಕ್ಲಬ್ ಅಧ್ಯಕ್ಷೆ ಆನ್ ರಾಜಶ್ರೀ ರಾವ್ ಅವರು ಕರ್ನೋಡಿ ಶಾಲೆಯಲ್ಲಿ 29 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಲಲಿತಾ ಅವರನ್ನು ಗೌರವಿಸಿದರು.

ಅದೇ ರೀತಿ ಆನ್ ಡಾ. ಆಶಾ ರಾಘವೇಂದ್ರ ಹಾಗೂ ಆನ್ ಡಾ. ವಿನಯಾ ಕಿಶೋರ್ ಅವರು ಗುರುವಾಯನಕೆರೆಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಅವರವರ ನಿವಾಸಕ್ಕೆ ತೆರಳಿ ಗೌರವಿಸಿದರು. ವಿದ್ವತ್ ಕಾಲೇಜಿನ ಪಾರ್ವತೀಶ್ವರ ರಾವ್, ಎಸ್‌ಡಿಎಂ ಕಾಲೇಜು ಉಜಿರೆಯ ವಂದನಾ ಜೈನ್, ಸರಕಾರಿ ಪ್ರೌಢಶಾಲೆ ಬೆಳ್ತಂಗಡಿಯ ಪೂರ್ಣಿಮಾ ಮೋಹನ್, ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕಿ ಸಂಧ್ಯಾ, ವಾಣಿ ಕಾಲೇಜು ಬೆಳ್ತಂಗಡಿಯ ಪ್ರಾಧ್ಯಾಪಕ ಮಹಾಬಲ ಗೌಡ, ವಾಣಿ ಕಾಲೇಜಿನ ಪ್ರಾಧ್ಯಾಪಕಿ ಮೀನಾಕ್ಷಿ ಎನ್., ಗರ್ಡಾಡಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಬಬೀಂದ್ರ, ಎಸ್‌ಡಿಎಂ ಇಂಗ್ಲೀಷ್ ಮೀಡಿಯಂ ಶಾಲೆಯ ಸೌಮ್ಯ ಪಿ., ಪದ್ಮಂಜ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಸುಮತಿ ಪಿ.ಎನ್. ಹಾಗೂ ಮೈರೋಲ್ತಡ್ಕ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಶ್ರೀಧರ ಅವರನ್ನು ಗೌರವಿಸಲಾಯಿತು.

Related posts

ಶ್ರೀ ಕ್ಷೇ. ಧ. ಗ್ರಾ. ಯೋ. ವತಿಯಿಂದ ಮುಂಗಾರು ಯಾಂತ್ರಿಕ್ರತ ಭತ್ತ ಬೇಸಾಯ ಕ್ಕೆ ಚಾಲನೆ

Suddi Udaya

ಮೂಡುಬಿದಿರೆ: ವೈಬ್ರೆಂಟ್ ವಿದ್ಯಾರ್ಥಿಗಳಿಗೆ ವಿಜೃಂಭಣೆಯ ಲಾಂಗ್ ಟರ್ಮ್ ಡೇ

Suddi Udaya

ನಾವೂರು ಗ್ರಾ.ಪಂ. ನಲ್ಲಿ ಗಾಂಧಿ ಜಯಂತಿ ಆಚರಣೆ

Suddi Udaya

ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಜಿಲ್ಲಾವಾರು ಉತ್ತಮ ಸಂಘ ಪ್ರಶಸ್ತಿ ಪ್ರಧಾನ

Suddi Udaya

ತೆಂಕಕಾರಂದೂರು ಸಂತಾನ ಗೋಪಾಲ ಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ಹಾಗೂ ಸನ್ಮಾನ ಕಾರ್ಯಕ್ರಮ

Suddi Udaya

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ನಡ ಮತದಾನ ಕೇಂದ್ರದಲ್ಲಿ ಮತದಾನ

Suddi Udaya
error: Content is protected !!