30.2 C
ಪುತ್ತೂರು, ಬೆಳ್ತಂಗಡಿ
September 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಡಂತ್ಯಾರು: ರಾಜ್ಯಕ್ಕೆ ಕೀರ್ತಿ ತಂದುಕೊಟ್ಟ ಸೇಕ್ರೆಡ್ ಹಾರ್ಟ್ ಕಾಲೇಜಿನ ಎನ್ ಸಿ ಸಿ ಕೆಡೆಟ್: ರಾಷ್ಟ್ರಮಟ್ಟದ ಎನ್.ಸಿ.ಸಿ ಶಿಬಿರಕ್ಕೆ ಜೂನಿಯರ್ ಅಂಡರ್ ಆಫೀಸರ್ ಮಂಜುಷಾ ಆಯ್ಕೆ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರಿನ ಎನ್.ಸಿ.ಸಿ. ಆರ್ಮಿ ವಿಂಗ್‌ನ ಜೂನಿಯರ್ ಅಂಡರ್ ಆಫೀಸರ್ (JUO) ಮಂಜುಷಾ ಎ. ಜೆ. ಅವರು 18 KAR BN NCC ಘಟಕದ ವತಿಯಿಂದ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಎನ್.ಸಿಸಿ ಶಿಬಿರ–2026ಕ್ಕೆ ಫೈರಿಂಗ್ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.

ಎನ್.ಸಿ.ಸಿ. ತರಬೇತಿಯಲ್ಲಿ ತೋರಿದ ಶಿಸ್ತು, ಸಮರ್ಪಣೆ, ದೃಢಸಂಕಲ್ಪ ಹಾಗೂ ಕೌಶಲ್ಯದ ಫಲವಾಗಿ ಈ ಪ್ರತಿಷ್ಠಿತ ಶಿಬಿರಕ್ಕೆ ಆಯ್ಕೆಯಾಗಿರುವುದು ಕಾಲೇಜು ಹಾಗೂ ಎನ್.ಸಿ.ಸಿ. ಘಟಕಕ್ಕೆ ಹೆಮ್ಮೆಯ ವಿಷಯವಾಗಿದೆ.

ರಾಷ್ಟ್ರಮಟ್ಟದಲ್ಲಿ ಕಾಲೇಜು ಹಾಗೂ ಎನ್.ಸಿ.ಸಿ.ಯನ್ನು ಪ್ರತಿನಿಧಿಸಲಿರುವ ಜೂನಿಯರ್ ಅಂಡರ್ ಆಫೀಸರ್ ಮಂಜುಷಾ ಅವರ ಸಾಧನೆಯು ಇತರ ಕೆಡೆಟ್‌ಗಳಿಗೆ ಪ್ರೇರಣೆಯಾಗಿದೆ. ಅವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಎನ್.ಸಿ.ಸಿ. ಘಟಕ ಅಭಿನಂದನೆ ಸಲ್ಲಿಸಿ, ಶಿಬಿರದಲ್ಲಿ ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದೆ.

Related posts

ಬೆಳಾಲು: ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆ ಪ್ರಕರಣ: ಇಬ್ಬರು ಆರೋಪಿಗಳು ಐದು ದಿನ ಪೊಲೀಸ್ ಕಸ್ಟಡಿಗೆ

Suddi Udaya

ಫೆ.19-24: ಉಜಿರೆಯಲ್ಲಿ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ವತಿಯಿಂದ ‘ಆನಂದೋತ್ಸವ ಶಿಬಿರ’

Suddi Udaya

ವಿಮೆನ್ ಇಂಡಿಯಾ ಮೂವ್‌ಮೆಂಟ್ ಬೆಳ್ತಂಗಡಿ ಕ್ಷೇತ್ರ ಸಮಿತಿ ಪ್ರತಿನಿಧಿ ಸಭೆ- ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ ಸ್ಥಳೀಯ ಸಂಸ್ಥೆಯಿಂದ ಕಬ್- ಬುಲ್ ಬುಲ್ಸ್ ಉತ್ಸವ, ಸ್ಕೌಟ್ಸ್- ಗೈಡ್ಸ್ ಮೇಳ, ರೋವರ್ಸ್‌ – ರೇಂಜರ್ಸ್‌ ಸಮಾಗಮ

Suddi Udaya

ಜಾಗತಿಕ ಸೀರೋ ಮಲಬಾರ್ ಧರ್ಮ ಸಂಸದ್ ಗೆ ಪಾಲಾದಲ್ಲಿ ಸಮಾಪ್ತಿ: ಬೆಳ್ತಂಗಡಿ ಧರ್ಮ ಪ್ರಾಂತ್ಯ ಭಾಗಿ

Suddi Udaya

ಮೊಬೈಲ್‌ ಟವರ್‌ ನ ಬಾಡಿಗೆ ಕೇಳಿದ್ದಕ್ಕೆ ಜೀವ ಬೆದರಿಕೆ: ಪುಂಜಾಲಕಟ್ಟೆ ಠಾಣೆಗೆ ದೂರು

Suddi Udaya
error: Content is protected !!