28.1 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿಯ ಸುವರ್ಣ ಸ್ಟುಡಿಯೋ ಮಾಲಕ ಪಾಲಾಕ್ಷ ಸುವರ್ಣ ಮಾಲಕತ್ವದಲ್ಲಿ ಗುರುವಾಯನಕೆರೆಯಲ್ಲಿ ‘ಸುವರ್ಣ ಕಾಂಪ್ಲೇಕ್ಸ್’ ಹಾಗೂ ‘ಸುವರ್ಣ ಸ್ಟುಡಿಯೋ’ ಉದ್ಘಾಟನೆ

ಗುರುವಾಯನಕೆರೆ: ಬೆಳ್ತಂಗಡಿ ತಾಲೂಕಿನಲ್ಲಿ ಪ್ರಖ್ಯಾತಿಯನ್ನು ಪಡೆದ ಬೆಳ್ತಂಗಡಿಯ ಸುವರ್ಣ ಸ್ಟುಡಿಯೋ ಮಾಲಕ ಪಾಲಾಕ್ಷ ಸುವರ್ಣ ಅವರು ಗುರುವಾಯನಕೆರೆ ಶಾಲಾ ಬಳಿಯ ತಮ್ಮ ಮನೆಯ ಸಮೀಪ ನೂತನವಾಗಿ ನಿರ್ಮಿಸಿದ ‘ಸುವರ್ಣ ಕಾಂಪ್ಲೇಕ್ಸ್’ ಹಾಗೂ ‘ಸುವರ್ಣ ಸ್ಟುಡಿಯೋ’ ಇದರ ಪ್ರಾರಂಭೋತ್ಸವವು ಸೆ.13ರಂದು ನಡೆಯಿತು.

ನೂತನ ಸುವರ್ಣ ಕಾಂಪ್ಲೇಕ್ಸ್ ಹಾಗೂ ಸುವರ್ಣ ಸ್ಟುಡಿಯೋವನ್ನು ಹಿರಿಯರಾದ ಪಾಲಾಕ್ಷ ಸುವರ್ಣ ಅವರ ಮಾತೃಶ್ರೀ ಶ್ರೀಮತಿ ನಾರಾಯಣಿ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ, ಆಶೀರ್ವದಿಸಿದರು. ನಿವೃತ್ತ ಅಧಿಕಾರಿ ವಸಂತ ಸುವರ್ಣ ಲಾಯಿಲ, ಬೆಳ್ತಂಗಡಿ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರವಿ ನಾರಾವಿ, ಸುದ್ದಿ ಉದಯ ಪತ್ರಿಕೆಯ ಸಂಪಾದಕ ಬಿ.ಎಸ್.ಕುಲಾಲ್, ಪದ್ಮನಾಭ ಸುವರ್ಣ ಮಡಂತ್ಯಾರು ನೂತನ ಸಂಸ್ಥೆಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಶ್ರೀಮತಿ ಜಾಜೀವಿ, ಸರೋಜಿನಿ ಬಳ್ಳಮಂಜ, ರಾಘವ ಸುವರ್ಣ ಉಜಿರೆ, ಶ್ರೀಮತಿ ವಾರಿಜ ಲಾಯಿಲ, ಹರೀಶ್ ಮಂಗಳೂರು, ಪ್ರಸನ್ನ ಶಕ್ತಿನಗರ, ದೀಪಕ್ ಸುರತ್ಕಲ್, ತಿಮ್ಮಪ್ಪ ಕಾಫಿನಡ್ಕ, ಗಿರೀಶ್ ಸುವರ್ಣ, ಛಾಯಾಗ್ರಾಹಕರಾದ ಗೋಪಾಲ್ ಅಳದಂಗಡಿ, ರತ್ನಕರ್ ಪುಂಜಾಲಕಟ್ಟೆ, ಉಮೇಶ್ ಉಜಿರೆ, ಹರ್ಷ ಬಳ್ಳಮಂಜ, ಪ್ರಭಾಕರ ಪುಂಜಾಲಕಟ್ಟೆ, ಛಾಯಾಗ್ರಾಹಕ ಸಂಘದ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಗಣ್ಯರು, ಕುಟುಂಬಸ್ಥರು ಉಪಸ್ಥಿತರಿದ್ದರು.

ಸೆ.12ರಂದು ರಾತ್ರಿ ಸುವರ್ಣ ಕಾಂಪ್ಲೇಕ್ಸ್‌ನಲ್ಲಿ ವಾಸ್ತು ಹೋಮ, ಸುದರ್ಶನ ಹೋಮ ಹಾಗೂ ಸೆ.13 ರಂದು ಬೆಳಿಗ್ಗೆ ಗಣಹೋಮ ಮೊದಲಾದ ಧಾರ್ಮಿಕ ವಿಧಿಗಳು ನಡೆಯಿತು. ಸಂಸ್ಥೆಯ ಮಾಲಕರಾದ ಪಾಲಾಕ್ಷ ಸುವರ್ಣ ಹಾಗೂ ಶ್ರೀಮತಿ ವಿಜಯಲಕ್ಷ್ಮೀ ಮಕ್ಕಳಾದ ನಿಖಿಲಾ ಪಿ.ವಿ, ಮತ್ತು ಸಿಂಧೂಶ್ರೀ ಪಿ ವಿ. ಅವರು ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು. ಮದ್ದಡ್ಕ ಮನು ಸ್ಟುಡಿಯೋ ಮಾಲಕ ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಪಾಲಾಕ್ಷ ಸುವರ್ಣ ಅವರು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Related posts

ಭಜನಾ ಕಮ್ಮಟ; ಭಜನೆಗಳು ಜೀವನ ಶಿಕ್ಷಣ ಕಲಿಸುತ್ತವೆ: ಬಿ.ಕೆ. ಧನಂಜಯ ರಾವ್

Suddi Udaya

ಭಾರತೀಯ ಮಜ್ದೂರ್ ಸಂಘದ ರಾಷ್ಟ್ರೀಯ ಪ್ರಮುಖರಿಂದ ಸೇವಾಧಾಮಕ್ಕೆ ಭೇಟಿ

Suddi Udaya

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಬೆಳ್ತಂಗಡಿ ತಾಲೂಕು ಘಟಕದಿಂದ ನಿವೃತ್ತ ಯೋಧ ಸಿ ಜಾರ್ಜ್ ಕುಟ್ಟಿ ಯವರಿಗೆ ಸನ್ಮಾನ

Suddi Udaya

ಜು.19: ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ: ಹಿಂದೂಗಳ ಹತ್ಯೆಗೆ ಖಂಡನೆ, ಹಿಂದೂಗಳ ರಕ್ಷಣೆಗೆ ಆಗ್ರಹ

Suddi Udaya

‘ಕರ್ಂಗೋಲು ಕಂಗುಲು’ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ‘ಕುದ್ಕಬಚ್ಚಿರೆ’ ಕಥಾ ಸಂಕಲನ ಬಿಡುಗಡೆ

Suddi Udaya

ಯುವವಾಹಿನಿ ಘಟಕದಿಂದ ಯುವ ವೈಭವ 2025 ಕ್ಕೆ ಅದ್ದೂರಿ ಚಾಲನೆ : ನಾರಾಯಣ ಗುರು ಚಿಂತನೆಯಿಂದ ಈಡಿಗ ಬಿಲ್ಲವರು ಒಗ್ಗಟ್ಟಾಗೋಣ: ವಿಖ್ಯಾತಾನಂದಶ್ರೀ

Suddi Udaya
error: Content is protected !!