September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರುಣೋದಯ ಕುಣಿತ ಭಜನಾ ಮಂಡಳಿಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ವಿದ್ಯಾರ್ಥಿವೇತನ ವಿತರಣೆ

ಬೆಳ್ತಂಗಡಿ: ಅರುಣೋದಯ ಭಜನಾ ಮಂದಿರ ಬಡೆಕೊಟ್ಟು ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ನಡೆದ ಸಮಾರಂಭದಲ್ಲಿ ಅರುಣೋದಯ ಕುಣಿತ ಭಜನಾ ಮಂಡಳಿಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ವಿದ್ಯಾರ್ಥಿವೇತನ ನೀಡಲಾಯಿತು.

ವಿಷ್ಣುಮೂರ್ತಿ ದೇವಸ್ಥಾನ ಇಳಿಯೂರು ಇದರ ಅರ್ಚಕರಾದ ಸುಧೀಂದ್ರ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.. ಭಜನಾ ಮಂದಿರದ ಅಧ್ಯಕ್ಷ ಲೋಕೇಶ್ ಅಗಚ್ಚರಿ ಕೊಡಿ ಅಧ್ಯಕ್ಷತೆಯನ್ನು ವಹಿಸಿದರು. ಭಜನಾ ಮಂಡಳಿಯ ವಿದ್ಯಾರ್ಥಿಗಳಿಗೆ ಭಜನಾ ತಂಡದ ಗುರುಗಳಾದ ಸಂದೇಶ್ ಮದ್ದಡ್ಕ ಇವರು ಸಮವಸ್ತ್ರವನ್ನು ವಿತರಿಸಿದರು.

ಭಜನಾ ಮಂದಿರದ ಸ್ಥಾಪಕ ಅಧ್ಯಕ್ಷ ಕೇಶವ ಪೂಜಾರಿ ಮಜಲು ವಿದ್ಯಾರ್ಥಿ ವೇತನವನ್ನು ವಿತರಿಸಿದರು. ವೇದಿಕೆಯಲ್ಲಿ
ಮಣಿನಾಲ್ಕೂರು ಬಿಲ್ಲವ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಕಟದಡೆ, ಭಜನಾ ಗುರುಗಳಾದ ಆಕಾಶ್, ಗುರುವಾಯನಕೆರೆ ಹಿರಿಯರಾದ ವಾಸು ಪೂಜಾರಿ ಮಜಲು, ಮಹಿಳಾ ಮಂಡಳದ ಅಧ್ಯಕ್ಷೆ ಚಂದ್ರಿಕಾ ಮಜಲು ರಾಮ ನಲ್ಕೆ, ಭಜನಾ ಮಂಡಳಿಯ ಮೇಲುಸ್ತುವಾರಿಯಾದ ಹೊನ್ನಪ್ಪ ಪೂಜಾರಿ ಮುದಲಾಡಿ, ಸವಿತಾ ಬಾರೈತಿಯಾರು, ಆಶಾ ಬತ್ತನಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ನೀತಾ ಬತ್ತನಾಡಿ ನಿರೂಪಿಸಿದರು.

Related posts

ಚಾರ್ಮಾಡಿ ತ್ರಿವರ್ಣ ಸಂಜೀವಿನಿ ಗ್ರಾ. ಪಂ. ಮಹಿಳಾ ಒಕ್ಕೂಟದ ಮಾಸಿಕ ಸಭೆ

Suddi Udaya

ಮದ್ದಡ್ಕ: ಕಿನ್ನಿಗೋಳಿ ಎಂಬಲ್ಲಿ ಎರಡು ಕಾರುಗಳ ನಡುವೆ ಡಿಕ್ಕಿ

Suddi Udaya

ಬೆಳ್ತಂಗಡಿ: ಪಿ.ಎಂ.ಶ್ರೀ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ ಹಾಗೂ ಬೆಂಕಿ ಇಲ್ಲದ ಅಡುಗೆ ಕಾರ್ಯಕ್ರಮ

Suddi Udaya

ಅಯೋಧ್ಯೆ ಪ್ರಭು ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ: ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ವಿಶೇಷ ಪೂಜೆ

Suddi Udaya

ನವೀಕೃತಗೊಂಡ ಉಜಿರೆ ಹಳೇಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಸ್ತಾಂತರ

Suddi Udaya

ಪಿಲಿಗೂಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಅಧ್ಯಕ್ಷರಾಗಿ ಚೈತ್ರಾ ಎಂ.ಜಿ., ಉಪಾಧ್ಯಕ್ಷರಾಗಿ ಪ್ರೇಮಾ ಸಿ.

Suddi Udaya
error: Content is protected !!