September 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಸಮಾಜ ಮಂದಿರದಲ್ಲಿ ನಡೆಯುವ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟಕ ಬದಲಾವಣೆ “ಶೋಭಾಜಿ” ಬದಲು “ಅಧ್ಯಕ್ಷೆರ್” ಪ್ರದರ್ಶನ

ಬೆಳ್ತಂಗಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬೆಳ್ತಂಗಡಿ ವತಿಯಿಂದ ಸಮಾಜ ಮಂದಿರದಲ್ಲಿ ಆಯೋಜಿಸಿರುವ ಗಣೇಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಟಕ ಬದಲಾವಣೆ ಮಾಡಲಾಗಿದೆ.

ನಾಳೆ (ಸೆ.17) ಪ್ರದರ್ಶನಗೊಳ್ಳಬೇಕಿದ್ದ “ಶೋಭಾಜಿ” ನಾಟಕದ ಪ್ರಮುಖ ಕಲಾವಿದೆ ಅಪಘಾತಕ್ಕೊಳಗಾದ ಕಾರಣ ಅನಿವಾರ್ಯವಾಗಿ “ಶೋಭಾಜಿ” ನಾಟಕವನ್ನು ರದ್ದುಗೊಳಿಸಲಾಗಿದೆ.

ಅದರ ಬದಲು 200ಕ್ಕೂ ಅಧಿಕ ಪ್ರದರ್ಶನ ಕಂಡು ಎಲ್ಲೆಡೆ ಕಲಾಭಿಮಾನಿಗಳ ಮೆಚ್ಚುಗೆ ಪಡೆದ ಯಶಸ್ವಿ ನಾಟಕ “ಅಧ್ಯಕ್ಷೆರ್” ನಾಟಕವನ್ನು ಪ್ರದರ್ಶಿಸಲಾಗುವುದು ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ. ಕಲಾಭಿಮಾನಿಗಳು ಈ ಅನಿವಾರ್ಯ ಸ್ಥಿತಿಯನ್ನು ಅರ್ಥಮಾಡಿಕೊಂಡು ನಾಳಿನ ಪ್ರದರ್ಶನಕ್ಕೆ ಆಗಮಿಸಿ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕಾಗಿ ಸಮಿತಿ ವಿನಂತಿಸಿದೆ.

Related posts

ನಾಟ (NATA) 2026 ಫಲಿತಾಂಶ: ಎಕ್ಸೆಲ್‌ ಪಿಯು ಕಾಲೇಜಿಗೆ ಭರ್ಜರಿ ಯಶಸ್ಸು, ರಾಜ್ಯ ಮಟ್ಟದಲ್ಲಿ ಮಿಂಚಿದ ವಿದ್ಯಾರ್ಥಿಗಳು

Suddi Udaya

ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕವ್ವಾಲಿಯಲ್ಲಿ ತೃತೀಯ ಸ್ಥಾನವನ್ನು ಮುಡಿಗೇರಿಸಿಕೊಂಡ ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ

Suddi Udaya

ಗುರುವಾಯನಕೆರೆ: ಶ್ರೀ ಕ್ಷೇ.ಧ.ಗ್ರಾ. ಯೋಜನೆಯ 93 ಒಕ್ಕೂಟಗಳ ಕೇಂದ್ರ ಒಕ್ಕೂಟದ ಸಭೆ

Suddi Udaya

ಕೊಕ್ಕಡ ಹಳ್ಳಿಗೇರಿ ಕಾಮಧೇನು ಗೋಶಾಲೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ | ಡಿ. ವೀರೇಂದ್ರ ಹೆಗ್ಗಡೆ ಹಾಗೂ ಇಸ್ಕಾನ್ ನ ಹರೀಶ್ ಭೇಟಿ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತಿನ ನೂತನ ನಾಯಕರ ಪದಗ್ರಹಣ ಮತ್ತು ಪ್ರಮಾಣವಚನ

Suddi Udaya

ಉಜಿರೆ: ಯು.ಎಸ್. ಆಟೋ ಚಾಲಕ ಮಾಲಕರ ಸಂಘದಿಂದ ಸ್ವಾತಂತ್ರೋತ್ಸವ ಆಚರಣೆ

Suddi Udaya
error: Content is protected !!