ಕನ್ಯಾಡಿ: ಸಿದ್ಧಿವಿನಾಯಕ ಸೇವಾ ಸಮಿತಿ ನೇರೋಳ್ ಪಲ್ಕೆ ಕನ್ಯಾಡಿ-2 ವತಿಯಿಂದ ನಡೆಯುವ 25ನೇ ವರ್ಷದ ಗಣೇಶೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೆ.14 ರಂದು ಕನ್ಯಾಡಿಯ ನೇರೋಳ್ ಪಲ್ಕೆಯಲ್ಲಿ ಯಕ್ಷಭಾರತಿ ಕನ್ಯಾಡಿ ಸಂಯೋಜನೆಯಲ್ಲಿ ಖ್ಯಾತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪ್ರದರ್ಶನ ಪ್ರಸಂಗ- “ಚೌತಿಯ ಮಹಿಮೆ” ಜರುಗಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ್ ಕನ್ಯಾಡಿ ಮತ್ತು ಕುಮಾರಿ ಆಶ್ರಿತಾ ರೆಂಜಾಳ, ಚಂಡೆ ಮದ್ದಳೆಯಲ್ಲಿ ಜಗನ್ನಿವಾಸ ರಾವ್ ಪುತ್ತೂರು, ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಚಕ್ರತಾಳದಲ್ಲಿ ಕೌಸ್ತುಭ ಕನ್ಯಾಡಿ ಸಹಕರಿಸಿದರು.
ಮುಮ್ಮೇಳದಲ್ಲಿ ಸತ್ರಾಜಿತನಾಗಿ ಚರಣ್ ಕಾಣಿಯೂರು, ವನಪಾಲಕನಾಗಿ ಶಶಿಧರ ಕನ್ಯಾಡಿ, ಪ್ರಸೇನನಾಗಿ ಶಿವಾನಂದ ಶೆಟ್ಟಿ ಪೆರ್ಲ, ಕೇಸರಿಯಾಗಿ ಮುಖೇಶ್ ದೇವಧರ್ ನಿಡ್ಲೆ, ಜಾಂಬವಂತನಾಗಿ ಡಾ. ಶ್ರುತಕೀರ್ತಿ ರಾಜ ಉಜಿರೆ, ಕೃಷ್ಣನಾಗಿ ವಸಂತ ಗೌಡ ಕಾಯರ್ತಡ್ಕ, ಜಾಂಬವತಿಯಾಗಿ ಕು. ವೈಷ್ಣವಿ ರಾವ್ ಪುತ್ತೂರು ಪಾತ್ರ ನಿರ್ವಹಿಸಿದರು.











