30.4 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಡೆಕ್ಕಾವು ಗುತ್ತುವಿನಲ್ಲಿ ಸಂಕ್ರಮಣ ಪೂಜೆ ಹಾಗೂ ಉಚಿತ ಕಣ್ಣಿನ ಪರೀಕ್ಷೆ ಮತ್ತು ಕನ್ನಡಕ ವಿತರಣೆ

ಬೆಳ್ತಂಗಡಿ: ದೈವ ಕ್ಷೇತ್ರ ಬಡೆಕ್ಕಾವು ಇಲ್ಲಿ ನಡೆದ ಸಂಕ್ರಮಣ ಪೂಜೆಯೆಂದು ಅಪ್ಪೆ ಕಲ್ಲುರ್ಟಿಗೆ ಮತ್ತು ಕೊರಗಜ್ಜನಿಗೆ ದೊಂದಿ ಕೋಲ ಜೊತೆಗೆ ನಾವೂರು ,ಇಂದಬೆಟ್ಟು, ನಡ, ಕನ್ಯಾಡಿ ನಾಲ್ಕು ಗ್ರಾಮಗಳ 40 ವರ್ಷಕ್ಕಿಂತ ಮೇಲ್ಪಟ್ಟ ಗ್ರಾಮಸ್ಥರಿಗೆ ಉಚಿತ ಕಣ್ಣಿನ ಪರೀಕ್ಷೆ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮ ನಡೆಯಿತು.

ಪ್ರತಿಯೊಂದು ಧರ್ಮದವರನ್ನು ಸಮಾನತೆಯಿಂದ ಕಾಣುವ ದೈವ ಕ್ಷೇತ್ರವೇ ಬಡೆಕ್ಕಾವು ಗುತ್ತು ಇಲ್ಲಿ ಸೇರುವ ಪ್ರತಿಯೊಬ್ಬರೂ ಸಮಾನ ಮನಸ್ಸಿನವರು ಪ್ರತಿಯೊಂದು ಜಾತಿ ಧರ್ಮದವರಿಗೂ ಗೌರವ ನೀಡುವ ಸ್ಥಳವೇ ದೈವ ಕ್ಷೇತ್ರ ಬಡೆಕ್ಕಾವು
ಕೇವಲ ವೈಯಕ್ತಿಕ ಪ್ರತಿಷ್ಠೆಗೆ ಇಲ್ಲಿ ಅವಕಾಶವೇ ಇಲ್ಲ, ಅದಕ್ಕೊಂದು ಸ್ಪಷ್ಟ ನಿದರ್ಶನವೇ ಕಣ್ಣಿನ ಪರೀಕ್ಷೆ ಮತ್ತು ಕನ್ನಡಕ ವಿತರಣೆ ಇದರಲ್ಲಿ ಮುಸ್ಲಿಂ ಮತ್ತು ಕ್ರೈಸ್ತ. ಹಿಂದೂ ಬಾಂಧವರು ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಂಡಿದ್ದು ವಿಶೇಷ. ಈ ಸಂದರ್ಭದಲ್ಲಿ ಸುಮಾರು 110ಕ್ಕೂ ಹೆಚ್ಚು ಕನ್ನಡಕ ವಿತರಿಸಲಾಯಿತು.


ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದ ಡಾ| ಶಂಕರ್ ಡಿಸಿಪಿ ನವದೆಹಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದು ಹೀಗೆ ದೈವ ಕ್ಷೇತ್ರಗಳಲ್ಲಿ ನಡೆಯುವ ಸಾಂಪ್ರದಾಯಿಕ ಕಟ್ಟು ಕಟ್ಟಲೆಗಳ ಜೊತೆಗೆ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳಿಗೆ ವಿದ್ಯಾರ್ಥಿವೇತನ ಒಂದನೇ ತರಗತಿಯಿಂದ ಪದವಿ ಪೂರ್ವ ವರಗಿನ ಮಕ್ಕಳಿಗೆ ನೋಟ್ ಬುಕ್ ವಿತರಣೆ 10 ಹಲವು ಬಾರಿ ನಡೆದಿದ್ದು ಇದೀಗ ನಾಲ್ಕು ಗ್ರಾಮಗಳ ಗ್ರಾಮಸ್ಥರಿಗೆ ಕಣ್ಣಿನ ಪರೀಕ್ಷೆ ಮತ್ತು ಕನ್ನಡಕ ವಿತರಣೆ ನಡೆಸಿರುವುದು ಸಾಮಾನ್ಯ ಸಾಧನೆ ಅಲ್ಲ, ದೈವ ಕ್ಷೇತ್ರದ ಇಂಥ ಕೆಲಸಗಳಿಗೆ ನಾವೆಲ್ಲರೂ ಸಹಕರಿಸಬೇಕೆ ಹೊರತು ಅನಗತ್ಯ ತಪ್ಪನ್ನು ಹುಡುಕಿ ಕ್ಷೇತ್ರದ ಹೆಸರನ್ನು ಕೆಡಿಸುವ ಹುನ್ನಾರ ನಡೆಯಬಾರದು ಎಂದು ನುಡಿದರು.

ಮುಖ್ಯ ಅತಿಥಿಗಳಲ್ಲಿ ಖ್ಯಾತ ನೇತ್ರ ತಜ್ಞರಾದ ಡಾ! ಶರತ್ ಕುಮಾರ್ ದಾವಣಗೆರೆ, ಪ್ರದೀಪ್ ಆಚಾರ್ಯ ಬೆಂಗಳೂರು,
ಶಾಂತಿಪ್ರಸಾದ್ ಮೇರೆಲ್ದೊಟ್ಟು ಬಂಟ್ವಾಳ , ರವಿರಾಜ್ ಜೈನ್ ಬಡೆಕ್ಕಾವು, ಸುರೇಶ್ ಇಂಚರ ದಿನೇಶ್ ಪ್ರಭು ನಾವೂರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಚಿಗುರು ಕನಸು ಮೆಲೋಡೀಸ್ ಉಜಿರೆ ಈ ತಂಡದವರಿಂದ ದೈವ ದೇವರುಗಳ ಭಕ್ತಿ ಗೀತೆಗಳ ಕಾರ್ಯಕ್ರಮ ನಡೆಯಿತು . ದೈವ ಕ್ಷೇತ್ರದ ವತಿಯಿಂದ ನಡೆಯುವ ಈ ಕಾರ್ಯಕ್ರಮದ ಮುಖ್ಯಸ್ಥ ರಕ್ಷಿತ್ ಅಜಿಲ ರವರು ಎಲ್ಲರನ್ನೂ ಅಭಿನಂದಿಸುವುದರ ಜೊತೆಗೆ ಎಲ್ಲಾ ಗಾಯಕರಿಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

Related posts

ಜಿಪ್ಸಿ ಮತ್ತು ಬೈಕ್ ನಡುವೆ ಅಪಘಾತ: ಬೈಕ್ ಸವಾರ ಬಳಂಜ ಶಾಲಾ ಮುಖ್ಯೋಪಾಧ್ಯಾಯರಿಗೆ ಗಂಭೀರ ಗಾಯ

Suddi Udaya

ಬೆಳ್ತಂಗಡಿ ನಾಲ್ಕು ರೋಟರಿ ಸಮುದಾಯ ದಳಗಳ ಪದಗ್ರಹಣ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ/ ದುರ್ಗಾದೇವಿ ದೇವಸ್ಥಾನದ ನಾಗನ ಕಟ್ಟೆಯ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ನಾಳೆ(ಆ.3) : ಬೆಳ್ತಂಗಡಿ ಆನ್‌ಸಿಲ್ಕ್‌ನಲ್ಲಿ ಮೇಘ ಬ್ರಾಂಡೆಂಡ್ ವಸ್ತ್ರಮೇಳ: ಶೇ.20 ರಿಂದ ಶೇ70 ರಷ್ಟು ರಿಯಾಯಿತಿ

Suddi Udaya

ಹೊಕ್ಕಾಡಿಗೋಳಿ ಎಸ್. ಕೆ. ಫ್ರೆಂಡ್ಸ್ ನೀರಪಲ್ಕೆ ಇದರ ಆಶ್ರಯದಲ್ಲಿ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

Suddi Udaya

ಡಾ. ಡಿ.ವೀರೇಂದ್ರ ಹೆಗ್ಗಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಉಜಿರೆ ವಿದ್ಯುತ್ ಕಂಬಗಳ ಸ್ವಚ್ಚತಾ ಶ್ರಮದಾನ

Suddi Udaya
error: Content is protected !!