30.4 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಡಂತ್ಯಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 44ನೇ ವರ್ಷದ ಗಣೇಶೋತ್ಸವದ ಸಮಾರೋಪ ಸಮಾರಂಭ

ಮಡಂತ್ಯಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ 44ನೇ ವರ್ಷದ ಗಣೇಶೋತ್ಸವದ ಸಮಾರೋಪ ಸಮಾರಂಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರು. ದೈವ ನರ್ತಕರಾದ ಡಾ| ರವೀಶ್ ಪಡುಮಲೆ ಇವರು ಮಾತನಾಡಿ ನಮ್ಮ ಮಕ್ಕಳಿಗೆ ಧರ್ಮ ಶಿಕ್ಷಣವನ್ನು ನಮ್ಮ ಮನೆಯಿಂದಲೇ ಕೊಡುವಂತಾಗಬೇಕು . ಅಧರ್ಮಗಳನ್ನು ಮೆಟ್ಟಿ ನಿಲ್ಲುವಂತ ನಮ್ಮ ಮಕ್ಕಳು ಆಗಬೇಕು ಜಾತಿ ಭೇದ ಮರೆತು ನಾವೆಲ್ಲರೂ ಒಂದಾಗಿ ಗಣೇಶೋತ್ಸವವನ್ನು ಆಚರಿಸೋಣ ಎಂದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣೇಶೋತ್ಸವ ನವೀನ್ ಕುಮಾರ್ ಕೊಡ್ಲಕ್ಕೆ ವಹಿಸಿದರು. ಕಾಂತಪ್ಪ ಗೌಡ ಪ್ರಸ್ತಾವಿಕವಾಗಿ ಮಾತನಾಡಿದರು. ವೀರೇಂದ್ರ ಕುಮಾರ್ ಸ್ವಾಗತಿಸಿದರು ನವೀನ್ ಕುಮಾರ್ ಕೊಡ್ಲಕ್ಕೆ ವಂದಿಸಿದರು. ತುಳಸಿದಾಸ್ ಪೈ ಕಾರ್ಯಕ್ರಮ ನಿರೂಪಿಸಿದರು. ಕುಕ್ಕಿಲ ಅನಂತ ಕೃಷ್ಣ ಭಟ್ ಇವರ ಪೌರಹಿತ್ಯದೊಂದಿಗೆ ಸೆ. 14 ರಂದು ಮಹಾಗಣಪತಿಯ ಪ್ರತಿಷ್ಠೆಯೊಂದಿಗೆ ನಾಲ್ಕು ದಿನಗಳ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಸೆ 17 ರಂದು ಭಜನೆ, ಚೆಂಡೆ ಮೇಳ, ಟ್ಯಾಬ್ಲೋ, ಕೀಳು ಕುದುರೆ, ಸುಡು ಮದ್ದು ಪ್ರದರ್ಶನದೊಂದಿಗೆ ಭವ್ಯ ಮೆರವಣಿಗೆಯೊಂದಿಗೆ ಪೂಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕೆರೆಯಲ್ಲಿ ಜಲ ಸ್ತಂಭನ ಗೊಂಡಿತು, ಸಮಿತಿಯ ಗೌರವ ಅಧ್ಯಕ್ಷ ಸಂಜೀವ ಶೆಟ್ಟಿ ಮುಗೆರೋಡಿ. ಅಧ್ಯಕ್ಷರಾದ ಪುನೀತ್ ಕುಮಾರ್ ಮಡಂತ್ಯಾರ್, ಪ್ರಧಾನ ಕಾರ್ಯದರ್ಶಿಯಾದ ನವೀನ್ ಕುಮಾರ್ ಕೊಡ್ಲಕ್ಕೆ, ಕೋಶಾಧಿಕಾರಿ ಧರ್ಣಪ್ಪ ಗೌಡ ಹಟ್ಟತೋಡಿ, ಜೊತೆ ಕಾರ್ಯದರ್ಶಿ ಸಂಗೀತ ಶೆಟ್ಟಿ ಬ್ರಹ್ಮಗಿರಿ, . ಉಪಾಧ್ಯಕ್ಷ ಸಂಜಿತ್ ಶೆಟ್ಟಿ ಮುಗೆರೋಡಿ, ಸಮಿತಿಯ ಮಾಜಿ ಅಧ್ಯಕ್ಷರು, ಗೌರವ ಸಲಹೆಗಾರರು, ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
✍️ವರದಿ ಹರ್ಷ ಬಳ್ಳಮಂಜ

Related posts

ಗುರುವಾಯನಕೆರೆ: ಶ್ರೀ ಶಿವಂ ಟೆಕ್ಸ್‌ಟೈಲ್ಸ್ ಮತ್ತು ರೆಡಿಮೇಡ್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪೆಷಲ್ ಡಿಸ್ಕೌಂಟ್ ಆಫರ್

Suddi Udaya

ಬೈಂದೂರಿನಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರ ಪುನಶ್ಚೇತನ ಕೇಂದ್ರ ಸೇವಾಧಾಮಕ್ಕೆ ಭೂಮಿ ಪೂಜೆ

Suddi Udaya

ತೆಂಕಕಾರಾಂದೂರು ಗ್ರಾಮದಲ್ಲೊಂದು ಕೇಳುವವರಿಲ್ಲದ ಅಂಬೇಡ್ಕರ್ ಭವನ: ಗಾಳಿ ಮಳೆಗೆ ಮೇಲ್ಛಾವಣಿ ಕುಸಿದರು ಗಮನಿಸಿದ ಸಂಬಂಧಪಟ್ಟ ಇಲಾಖೆ: ನೂತನ ಅಂಬೇಡ್ಕರ್ ಭವನ ನಿರ್ಮಿಸಿ ಅಥವಾ ದುರಸ್ತಿಗೊಳಿಸುವಂತೆ ಅಶ್ರಫ್ ಕಟ್ಟೆಯವರಿಂದ ಮನವಿ

Suddi Udaya

ಚಿಬಿದ್ರೆ ಪರವಾನಿಗೆ ಇಲ್ಲದೆ ಮರ ಕಡಿದು ಸಾಗಾಟಕ್ಕೆ ಯತ್ನ :ಬೆಳ್ತಂಗಡಿ ಅರಣ್ಯ ಇಲಾಖೆಯಿಂದ ಮರ ಮತ್ತು ಕಟ್ಟಿಗೆಗಳ ವಶ

Suddi Udaya

ನಿಡ್ಲೆ ಪ್ರೇರಣ ಸಂಜೀವಿನಿ ಹಾಗೂ ಕಳೆಂಜ ಸಂಜೀವಿನಿ ಒಕ್ಕೂಟದಿಂದ ಸಮಗ್ರ ಕೃಷಿ ಸಮೂಹ ಚಟುವಟಿಕೆ ಕುರಿತು ಮಾಹಿತಿ ಕಾರ್ಯಾಗಾರ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಮಕ್ಕಳಿಗೆ ಹಿಂದೂ ಸಂಸ್ಕಾರ ಶಿಬಿರ

Suddi Udaya
error: Content is protected !!