ಬೆಳ್ತಂಗಡಿ: ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯದ (ESA) 7ನೇ ಕರಡು ಅಧಿಸೂಚನೆಯ ಕಸ್ತೂರಿರಂಗನ್ ವರದಿ ಜಾರಿ ಮಾಡದಂತೆ ಅಕ್ಷೇಪಣೆಯ ಮನವಿಯನ್ನು ಸೆ.19ರಂದು ಸುಲ್ಕೇರಿ ಗ್ರಾಮ ಪಂಚಾಯತಿನ ಆಡಳಿತ ಅಧಿಕಾರಿಗಳಿಗೆ, ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸಲಾಯಿತು.
ನಾವರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ವಿಶೇಷ ಗ್ರಾಮ ಸಭೆಯ ಸಂದರ್ಭದಲ್ಲಿ ಎನ್ ವೀರೇಂದ್ರ ಕುಮಾರ್ ಯನ್, ವಿಜಯ ಕುಮಾರ್ ಜೈನ್, ನಿತ್ಯಾನಂದ ಎನ್., ಪುಷ್ಪರಾಜ್, ರಾಜು ಪೂಜಾರಿ, ಸುಂದರ ಪೂಜಾರಿ ಕೇಡಲು, ಸಂತೋಷ್ ಕೇಡಲು, ಸುರೇಶ್ ಜಾಲಾ, ರವಿ ಪೂಜಾರಿ , ಹಾಗೂ ಇನ್ನಿತರ ಪ್ರಮುಖರು ಮನವಿ ಸಲ್ಲಿಸಿದರು.











