28.3 C
ಪುತ್ತೂರು, ಬೆಳ್ತಂಗಡಿ
September 21, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಸರ್ಕಾರಿ ಇಲಾಖಾ ಸುದ್ದಿ

ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ 72ನೇ ವನ್ಯಜೀವಿ ಸಪ್ತಹ ಆಚರಣೆ

ಬೆಳ್ತಂಗಡಿ: ಪ್ರಕೃತಿಯ ಬಹುದೊಡ್ಡ ಸಂಪತ್ತು ಕಾಡು ಹಾಗೂ ಕಾಡು ಪ್ರಾಣಿಗಳಾಗಿವೆ. ಅವುಗಳ ಬಗೆಗೆ ಸದಾ ಮಮತೆ ಮಾನವನಲ್ಲಿರಬೇಕು. ಕಾಡು ಮತ್ತು ಕಾಡು ಪ್ರಾಣಿಗಳನ್ನು ಉಳಿಸಿ ಬೆಳೆಸುವುದು ನಾವು ಈ ಪ್ರಕೃತಿಗೆ ನೀಡುವ ಬಹು ದೊಡ್ಡ ಕೊಡುಗೆಯಾಗುತ್ತದೆ’ ಎಂದು ವಲಯ ಅರಣ್ಯಾಧಿಕಾರಿ ಶರ್ಮಿಷ್ಠಾ ಹೇಳಿದರು.

ಅವರು ಸೋಮವಾರ ಬೆಳ್ತಂಗಡಿ ಶ್ರೀ ಗುರುದೇವ ಕಾಲೇಜಿನಲ್ಲಿ ಬೆಳ್ತಂಗಡಿ ವನ್ಯಜೀವಿ ವಲಯದ ವತಿಯಿಂದ 72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ನಡೆದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ‘ವನ್ಯ ಜೀವಿ ಸಪ್ತಾಹದ ಅಂಗವಾಗಿ ಕಳೆದ ಕೆಲವಾರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಮಾಡುತ್ತಿದ್ದು, ಆ ಮೂಲಕ ವನ್ಯಜೀವಿ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಕೇಶ್ ಕುಮಾರ್ ಕೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ಕೆ.ಸಿ. ಮ್ಯಾಥ್ಯೂ ಮಾತನಾಡಿ, ‘ವನ್ಯಜೀವಿ ಸಪ್ತಾಹದ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಪ್ರಕೃತಿ, ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ಪ್ರೀತಿ ಮತ್ತು ಸಂರಕ್ಷಣಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಉತ್ಸಾಹದ ಭಾಗವಹಿಸುವಿಕೆ ಸಂತೋಷ ನೀಡಿದ್ದು ಪ್ರಾಣಿಗಳ ಸಂರಕ್ಷಣೆಗೆ ಇದು ಪೂರಕವಾಗಲಿ’ ಎಂದರು.

ವೇದಿಕೆಯಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳಾದ ರವೀಂದ್ರ ಕೆ, ಭರತ್, ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಸವಿತಾ ಇದ್ದರು.1ನೇ ತರಗತಿಯಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗಾಗಿ ಒಟ್ಟು ಎಂಟು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಚಿತ್ರಕಲೆ, ರಸಪ್ರಶ್ನೆ, ಪ್ರಬಂಧ, ಭಾಷಣ, ಚಿತ್ರವನ್ನು ನೋಡಿ ಪ್ರಾಣಿ ಹಾಗೂ ಮರವನ್ನು ಗುರುತಿಸುವ ಸ್ಪರ್ಧೆಗಳು ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.

ಕಾಲೇಜಿನ ಉಪ ಪ್ರಾಂಶುಪಾಲ ಶಮೀವುಲ್ಲಾ ಬಿ.ಎ. ಸ್ವಾಗತಿಸಿದರು. ಲೆಕ್ಕಶಾಸ್ತ್ರ ಉಪನ್ಯಾಸಕಿ ಸುಷ್ಮಾ ಬಹುಮಾನ ವಿಜೇತ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ರಸಾಯನ ಶಾಸ್ತ್ರ ಉಪನ್ಯಾಸಕಿ ಸೌಜನ್ಯ ಹಾಗೂ ಇತಿಹಾಸ ಉಪನ್ಯಾಸಕ ಹರೀಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Related posts

ನಡ ಸರಕಾರಿ ಪದವಿ ಪೂರ್ವ ಕಾಲೇಜಿನ ರೇಂಜರ್ಸ್ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಕೊಯ್ಯೂರು ಮೈಂದಕೋಡಿ ಮನೆಯಲ್ಲಿ ಭಜನಾ ಕಮ್ಮಟ ಹಾಗೂ ದೈವಗಳ ಗಗ್ಗರ ಸೇವೆ

Suddi Udaya

ಲಾಯಿಲ: ಪ್ರಸನ್ನ ಪ.ಪೂ. ಕಾಲೇಜಿನಲ್ಲಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ

Suddi Udaya

ಜ.27: ಮಡಂತ್ಯಾರು ಗ್ರಾಮ ಪಂಚಾಯತ್ ನಲ್ಲಿ ವಿವಿಧ ರಸ್ತೆ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಪ.ಜಾತಿ / ಪ.ಪಂಗಡ ಮತ್ತು ದಿವ್ಯಾಂಗಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ವಿತರಣೆ

Suddi Udaya

ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತ: ಕೊಲ್ಲಿ ದೇವಸ್ಥಾನದ ಮಾಜಿ ಮೊಕ್ತೇಸರ, ಯಕ್ಷಗಾನ ಅರ್ಥದಾರಿ ಮಂಜುನಾಥ ಕಾಮತ್ ನಿಧನ

Suddi Udaya

ಜು.14: ಅಳದಂಗಡಿಯಲ್ಲಿ ಪ್ರಾರಂಭಗೊಳ್ಳುತ್ತಿದೆ “ನೊಚ್ಚ ಸೆರಾಮಿಕ್ಸ್”

Suddi Udaya
error: Content is protected !!