28.3 C
ಪುತ್ತೂರು, ಬೆಳ್ತಂಗಡಿ
September 21, 2026
ಅಪಘಾತಪ್ರಮುಖ ಸುದ್ದಿಬೆಳ್ತಂಗಡಿವರದಿ

ತೆರೆದ ಬಾವಿಗೆ ಬಿದ್ದ ಚಿರತೆ: ಅರಣ್ಯ ಇಲಾಖೆಯಿಂದ ರಕ್ಷಣೆ

ಬೆಳ್ತಂಗಡಿ: ಕರಿಮಣೇಲು ಗ್ರಾಮದ ಬಕ್ಯಾರಡ್ಡ ನಿವಾಸಿ ಡೊಂಬಯ್ಯ ಪೂಜಾರಿ ಮಗ ಅಶೋಕ್ ಪೂಜಾರಿ ಅವರಿಗೆ ಸೇರಿದ ತೆರೆದ ಬಾವಿಗೆ ಚಿರತೆಯೊಂದು ಸೆ.21 ರಂದು ಆಕಸ್ಮಿಕವಾಗಿ ಬಿದ್ದ ಘಟನೆ ನಡೆದಿದೆ.

ಸುಮಾರು 30 ಅಡಿ ಆಳವಿದ್ದ ಬಾವಿಯಲ್ಲಿ ಸುಮಾರು 6 ಅಡಿಯಷ್ಟು ನೀರು ಇದ್ದು, ಚಿರತೆ ಬಾವಿಯೊಳಗೆ ಸಿಲುಕಿಕೊಂಡಿತ್ತು. ವಿಷಯ ತಿಳಿದು ಸ್ಥಳಕ್ಕೆ ವೇಣೂರು ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು.

ಕುಂದಾಪುರ ಡಿಎಫ್‌ಒ ರುದ್ರನ್ (IFS) ಹಾಗೂ ಮೂಡುಬಿದಿರೆ ಎಸಿಎಫ್ ಆಕಾಶ್ ಕದಮ್ (IFS) ಅವರ ಮಾರ್ಗದರ್ಶನದಲ್ಲಿ, ಮಂಗಳೂರಿನ ವನ್ಯಜೀವಿ ಪಶುವೈದ್ಯೆ ಡಾ. ಯಶಸ್ವಿನಿ ಅವರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಯಿತು. ವನ್ಯಜೀವಿ ರಕ್ಷಣಾ ಬಲೆ ಹಾಗೂ ಚಿರತೆ ರಕ್ಷಣಾ ಪಂಜರವನ್ನು ಬಳಸಿ ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಚಿರತೆಯನ್ನು ಬಾವಿಯಿಂದ ಸಂಜೆ ವೇಳೆಗೆ ಮೇಲಕ್ಕೆತ್ತಿ ರಕ್ಷಿಸುವಲ್ಲಿ ಯಶಸ್ವಿಯಾದರು.

ರಕ್ಷಿಸಲಾದ ಚಿರತೆ ಹೆಣ್ಣು ಜಾತಿಯದ್ದಾಗಿದ್ದು, ಸುಮಾರು 3 ವರ್ಷ ವಯಸ್ಸಿನದು ಎಂದು ತಿಳಿದುಬಂದಿದೆ. ಪಶುವೈದ್ಯರು ನಡೆಸಿದ ಆರೋಗ್ಯ ತಪಾಸಣೆಯಲ್ಲಿ ಚಿರತೆ ಉತ್ತಮ ಆರೋಗ್ಯದಲ್ಲಿದ್ದು, ಅದನ್ನು ಕಾಡಿಗೆ ಬಿಡಲು ಸೂಕ್ತ ಸ್ಥಿತಿಯಲ್ಲಿರುವುದು ಕಂಡುಬಂದಿದೆ.ವೇಣೂರು ವಲಯ ಅರಣ್ಯಾಧಿಕಾರಿ ಭರತ್ ಯು.ಜಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಅರಣ್ಯ ಇಲಾಖೆಯ ತ್ವರಿತ ಕಾರ್ಯಾಚರಣೆಯಿಂದ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

Related posts

ಮುಂಡಾಜೆ: ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪೂರ್ವಭಾವಿ ಸಭೆ

Suddi Udaya

ಉಜಿರೆಯಲ್ಲಿ ನಾಟ್ಯ ತರಬೇತಿ ಪುನರಾರಂಭ

Suddi Udaya

ಮಾ.24: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ ಬ್ರಿಜೇಶ್ ಚೌಟ ಬೆಳ್ತಂಗಡಿಗೆ ಭೇಟಿ

Suddi Udaya

ಎಸ್.ಡಿ.ಎಂ ಕಾಲೇಜು: ವಿಟಿಯು ಅಂತರ್ ವಲಯ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ

Suddi Udaya

ಎಸ್.ಡಿ.ಎಂ. ಬಿ.ಎಡ್ , ಡಿ.ಇಎಲ್.ಇಡಿ ಹಾಗೂ ಶ್ರೀ ಧ.ಮಂ. ಮಹಿಳಾ ಐಟಿಐ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಕ್ರೀಡಾಕೂಟ

Suddi Udaya

ಫೆ.26: ಬೆಳಂಗಡಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya
error: Content is protected !!