28.6 C
ಪುತ್ತೂರು, ಬೆಳ್ತಂಗಡಿ
September 22, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪುಂಜಾಲಕಟ್ಟೆ: ಅರಫಾ ಸ್ಟಾರ್ ವತಿಯಿಂದ ಎಮ್.ಪಿ.ಎಲ್ ಲೀಗ್ ಪಂದ್ಯಾಟ

ಪುಂಜಾಲಕಟ್ಟೆ: ಅರಫಾ ಸ್ಟಾರ್ ವತಿಯಿಂದ ಸೆ.20 ರಂದು ಎಮ್.ಪಿ.ಎಲ್ ಲೀಗ್ ಪಂದ್ಯವನ್ನು ಬಸವನಗುಡಿ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಸಂಸ್ಥೆಯ ಮಾಲಕರಾದ ಅಲ್ಫೋನ್ಸ್ ಫ್ರಾಂಕೋರವರು ಭಾಗವಹಿಸಿದ್ದರು. ಇವರು ಪ್ರಥಮ ಮತ್ತು ದ್ವಿತೀಯ ಸ್ಥಾನದ ಟ್ರೋಫಿಯನ್ನು ಕೊಡುಗೆಯಾಗಿ ನೀಡಿದರು.

ಈ ವೇಳೆ ಪುಂಜಾಲಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹನೀಫ್, ತಾಜುದ್ದೀನ್ ವಕೀಲರು ಮಂಗಳೂರು, ನಿರೂಪಕರಾಗಿ ಇಲ್ಯಾಝ್, ಉಪಸ್ಥಿತರಿದ್ದರು.

ಮ್ಯಾನ್ ಆಫ್ ದಿ ಮ್ಯಾಚ್ ಕೊಡುಗೆಯನ್ನು ಬಿ.ಹೆಚ್. ಸ್ಕ್ರಾಪ್ ಮಾಲಕರಾದ ಸಾದಿಕ್ ಪಾಂಡವರಕಲ್ಲು ಇವರು ನೀಡಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಗ್ರೌ೦ಡ್ ನೀಡಿ ಸಹಕರಿಸಿದರು. ಸಲೀಂ ಹಾಗೂ ಸಲಾಂ ಬಸವನಗುಡಿ ತೀರ್ಪುಗಾರಾಗಿದ್ದರು. ಪ್ರಥಮ ಸ್ಥಾನವನ್ನು ಟಿ.ವಿ. ಕೆ. ತಲಪತಿ ತಂಡವು ಚಾಂಪಿಯನ್ ಪಟ್ಟವನ್ನು ಪಡೆದುಕೊಂಡಿತು. ದ್ವಿತೀಯ ಸ್ಥಾನವನ್ನು ಸತ್ಯದೇವತೆ ಫ್ರೆಂಡ್ಸ್ ಸಾಲುಮರ ಇವರು ಪಡೆದುಕೊಂಡರು. ವಿಶ್ವನಾಥ್ ಬಸವನಗುಡಿ, ರೌಫ್ ಪುಂಜಾಲಕಟ್ಟೆ, ಮುಂತಾದವರು ಭಾಗವಹಿಸಿದ್ದರು. ಇರ್ಷಾದ್ ಇವರ ವತಿಯಿಂದ ಕ್ರಿಕೆಟ್ ಪಂದ್ಯಾವನ್ನು ಆಯೋಜಿಸಲಾಗಿತ್ತು.ಆಫ್ರಿದ್ ಇವರು ಜೊತೆಗೂಡಿಕೊಂಡು ಪಂದ್ಯಾವನ್ನು ಯಶಸ್ವಿಗೊಳಿಸಿದರು.

Related posts

ಕಾಪಿನಡ್ಕ: ಧಾರಕಾರವಾಗಿ ಸುರಿದ ಮಳೆಯಿಂದ ಮನೆಯಂಗಳಕ್ಕೆ ನುಗ್ಗಿದ ನೀರು

Suddi Udaya

ಕೊಲೆಯಾದ ಸುಮಂತ್ ಮನೆಗೆ ಪ್ರತಿಭಾ ಕುಳಾಯಿ ಭೇಟಿ

Suddi Udaya

ಬೆಳ್ತಂಗಡಿ ಮುಳಿಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ

Suddi Udaya

ವೇಣೂರು ಸೊಸೈಟಿ ಅಧ್ಯಕ್ಷ ಸುಂದರ ಹೆಗ್ಡೆ ಅವರಿಗೆ ಗೌರವಾರ್ಪಣೆ

Suddi Udaya

ತಾಲೂಕು ಮಟ್ಟದ ಖೋ-ಖೋ ಪಂದ್ಯಾಟ: ನಡ ಕಾಲೇಜಿನ ಹುಡುಗರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಮುಂಡೂರು ಶ್ರೀನಾಗಕಲ್ಲುರ್ಟಿ ಕ್ಷೇತ್ರದಲ್ಲಿ ಶ್ರೀನಾಗಬ್ರಹ್ಮ ದೇವರ ಪುನರ್ ಪ್ರತಿಷ್ಠಾ ಕಲಶೋತ್ಸವ

Suddi Udaya
error: Content is protected !!