September 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಖಂಡಿಗ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗಣಪತಿ, ದುರ್ಗಾದೇವಿ ಗುಡಿ ಶಿಲಾನ್ಯಾಸ

ಬೆಳ್ತಂಗಡಿ: ಖಂಡಿಗ ಶ್ರೀ ಸಂತಾನ ಗೋಪಾಲಕೃಷ್ಣ ದೇವರ ಬ್ರಹ್ಮಕಲಶೋತ್ಸವವು 2027ರ ಮೇ ತಿಂಗಳಲ್ಲಿ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಪ್ರಶ್ನಾ ಚಿಂತನೆಯ ಮೂಲಕ ಕಂಡುಬಂದಂತೆ ಗಣಪತಿ ದೇವರು ಹಾಗೂ ಶ್ರೀ ದುರ್ಗಾದೇವಿಯ ಗುಡಿ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಸೆ 23ರಂದು ನಡೆಯಿತು.

ಜಿರ್ಣೋದ್ದಾರ ಸಮಿತಿ ಗೌರವಾಧ್ಯಕ್ಷ ರಾದ ಶಾಸಕ ಹರೀಶ್ ಪೂಂಜ, ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್, ಅಧ್ಯಕ್ಷರಾದ ಬರೋಡ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಇವರ ಮುಂದಾಳತ್ವದಲ್ಲಿ ಕ್ಷೇತ್ರದ ಕಾರ್ಯಕ್ರಮಗಳು ನಡೆಯಲಿದೆ.

ತಂತ್ರಿಗಳಾದ ಮುಂಡೂರು ಗೋಪಾಲಕೃಷ್ಣ ಭಟ್ ಅವರ ನೇತೃತ್ವದಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು. ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರ ವಿಷ್ಣು ಸಂಪಿಗೆತ್ತಾಯ ಹಾಗೂ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರರಾದ ಸುಬ್ರಹ್ಮಣ್ಯ ನೂರಿತ್ತಾಯ ಅವರು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚಕರಾದ ರಂಗನಾಥ ನೂರಿತ್ತಾಯ,ರತ್ನಾಕರ ನೂರಿತ್ತಾಯ,ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಕೆ. ಯೋಗೀಶ್ ಕುಮಾರ್ ನಡಕ್ಕರ, ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ, ಕೋಶಾಧಿಕಾರಿ ಪದ್ಮ ನಾಯ್ಕ್ ಖಂಡಿಗ, ಸಮಿತಿ ಪ್ರಮುಖರಾದ ಸಂತೋಷ್ ಕುಮಾರ್ ಹೆಗ್ಡೆ, ರಾಜೀವ ಸಾಲಿಯಾನ್ ಮುಂಡೂರು, ಶರತ್ ಪೂಜಾರಿ ಕಡಂಬು, ಸೌಮ್ಯ, ಸಂತೋಷ್ ಮುಂಡೂರು, ಸುರೇಖಾ, ರಮೇಶ್ ಹೆಗ್ಡೆ, ಪ್ರಕಾಶ್ ಆಚಾರ್ಯ, ರಮೇಶ್ ಬಜನೋಡಿ, ರಮಾನಾಥ ಶೆಟ್ಟಿ ಗರಿಯಾರು, ವಸಂತ ನಾಯ್ಕ ಖಂಡಿಗ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಭಗವದ್ಭಕ್ತರು ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ವಿಶ್ವ ಮಹಿಳಾ ದಿನದ ಅಂಗವಾಗಿ ಆರ್ಥಿಕ ನೆರವು

Suddi Udaya

ಕೊರಿಂಜ ಪಂಚಲಿಂಗೇಶ್ವರ ದೇವರ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ: ಭವ್ಯ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಮಾಜಿ ಶಾಸಕ ವಸಂತ ಬಂಗೇರ ಅಗಲುವಿಕೆಗೆ ಕಾಜೂರು ಸಮಿತಿಯಿಂದ ಸಂತಾಪ

Suddi Udaya

ಮುಂಡಾಜೆ ಕಾಲೇಜಿನಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ

Suddi Udaya

ಮದ್ದಡ್ಕದಿಂದ ಬಸ್ಸು ಇಲ್ಲದೆ ಪ್ರಯಾಣಿಕರು ನೇತಾಡಿ‌ಕೊಂಡು ಹೋಗುವ ಪರಿಸ್ಥಿತಿ: ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಜನರ ಮನವಿ

Suddi Udaya

ಬೆಳ್ತಂಗಡಿ ಮುಳಿಯ ಜುವೆಲ್ಸ್ ನಲ್ಲಿ ಕರಿಮಣಿ ಉತ್ಸವ: 500 ವೆರೈಟಿಯ ಕರಿಮಣಿ ಉತ್ಸವ ಇನ್ನೂ ಕೇವಲ 6 ದಿನ ಬಾಕಿ

Suddi Udaya
error: Content is protected !!