September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಡ ಕಸ್ತೂರಿರಂಗನ್ ವರದಿ ವಿಶೇಷ ಗ್ರಾಮಸಭೆ

ನಡ : ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ಪ್ರದೇಶದ 7ನೇ ಅಧಿಸೂಚನೆಯ ಕುರಿತು ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಪಡೆಯುವ ಸಲುವಾಗಿ ಸೆ.24ರಂದು ಕಳೆಂಜ ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್‌ನ ಅಂಬೇಡ್ಕರ್ ಸಭಾ ಭವನದಲ್ಲಿ ವಿಶೇಷ ಗ್ರಾಮಸಭೆ ನಡೆಯಿತು.

ಪೂರ್ವಾಹ್ನ 11 ಗಂಟೆಗೆ ನಡೆದ ಸಭೆಯ ಅಧ್ಯಕ್ಷತೆಯನ್ನು ನಡ ಆಡಳಿತಾಧಿಕಾರಿ ರಮೇಶ್ ಸಿ ಕೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಹಾಜರಿ ಪುಸ್ತಕದಲ್ಲಿದ್ದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.


ನಡ ಗ್ರಾಮದ ಅರಣ್ಯಾಧಿಕಾರಿ ರವೀಂದ್ರ ಹಾಗೂ ರಾಕೇಶ್ ಅವರು ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ಪ್ರದೇಶದ 7ನೇ ಅಧಿಸೂಚನೆಯ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ವರದಿಯ 7ನೇ ಅಧಿಸೂಚನೆ ನಡ ಗ್ರಾಮಕ್ಕೆ ಜಾರಿಯಾದರೆ, ತಲೆತಲಾಂತರಗಳಿಂದ ಕೃಷಿ ಭೂಮಿಯನ್ನು ಅವಲಂಬಿಸಿಕೊಂಡು ಜೀವನ ನಡೆಸುತ್ತಿರುವ ಗ್ರಾಮಸ್ಥರಿಗೆ ಜೀವನ ನಡೆಸಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಕಸ್ತೂರಿ ರಂಗನ್ ವರದಿ ಜಾರಿಗೆ ಗ್ರಾಮಸ್ಥರಿಂದ ಸಂಪೂರ್ಣ ಆಕ್ಷೇಪವಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ನಡ ಗ್ರಾಮವನ್ನು ಕಸ್ತೂರಿ ರಂಗನ್ ವರದಿಯಿಂದ ಕೈಬಿಡಬೇಕು. ರೈತ ವಿರೋಧಿ ನೀತಿಯುಳ್ಳ ಯಾವುದೇ ಯೋಜನೆಗಳು ನಡ ಗ್ರಾಮಕ್ಕೆ ಶಾಶ್ವತವಾಗಿ ಜಾರಿಯಾಗಬಾರದು. ಪಶ್ಚಿಮ ಘಟ್ಟ ಪ್ರದೇಶ ಹಾಗೂ ಜನವಸತಿ ಪ್ರದೇಶಕ್ಕೆ ಗಡಿಗುರುತು ಮಾಡಿ, ಮುಂದೆ ಬರುವ ಯಾವುದೇ ಯೋಜನೆಗಳಿಗೆ ಝೀರೋ ಬಫರ್ ನ್ ಘೋಷಣೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.ಮಲೆನಾಡು ಜನ ಹಿತ ರಕ್ಷಣಾ ವೇದಿಕೆಯ ಸಂಚಾಲಕರ ಪರವಾಗಿ ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ಕೈಬಿಡಬೇಕು ಎಂದು ಒತ್ತಾಯಿಸಲಾಯಿತು.


ಅಲ್ಲದೆ, ಆನೆ ದಾಳಿ ಹಾಗೂ ಇತರೆ ಕಾಡು ಪ್ರಾಣಿಗಳಿಂದ ಕೃಷಿ ನಾಶವಾಗದಂತೆ ಅರಣ್ಯ ಇಲಾಖೆ ನಿಗಾ ವಹಿಸಬೇಕು. ಪ್ಲಾಟಿಂಗ್ ಆಗದ ಹಕ್ಕುಪತ್ರಗಳಿಗೆ ಅಥವಾ ಸರ್ವೆ ನಂಬ್ರಗಳಿಗೆ ತಕ್ಷಣ ಪ್ಲಾಟಿಂಗ್ ಆಗುವ ರೀತಿಯಲ್ಲಿ ಅನುಮತಿ ನೀಡಬೇಕು. ರೈತರ ಸ್ವಾಧೀನದಲ್ಲಿರುವ ಕೃಷಿ ಭೂಮಿಗೆ ಹಕ್ಕುಪತ್ರ ನೀಡಲು ಅನುಮತಿ ನೀಡಬೇಕು. ಪರಿಭಾವಿತ ಅರಣ್ಯದಡಿಯಲ್ಲಿ ಸೇರಿಸಿರುವ ಕಂದಾಯ ಸರ್ವೆ ನಂಬ್ರಗಳನ್ನು ಪುನ‌ರ್ ಪರಿಶೀಲನೆ ಮಾಡಿ ಅದನ್ನು ಕಂದಾಯ ಭೂಮಿ ಎಂದು ಪರಿಗಣಿಸಬೇಕು ಎಂದು ಆಗ್ರಹಿಸಲಾಯಿತು. ಪಶ್ಚಿಮ ಘಟ್ಟ ಮತ್ತು ಜನವಸತಿ ಪ್ರದೇಶಕ್ಕೆ ಗಡಿಗುರುತು ಮಾಡಬೇಕು.


ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಬೇಕು. ಸರ್ವಾನುಮತದ ನಿರ್ಣಯ: ವಿಶೇಷ ಗ್ರಾಮಸಭೆಯಲ್ಲಿ ಕಸ್ತೂರಿ ರಂಗನ್ ಅಧಿಸೂಚನೆಯ ಕುರಿತು ಕಳೆಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಂದ ವ್ಯಕ್ತವಾದ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಗಣಿಸಿ, ಕಸ್ತೂರಿ ರಂಗನ್ ವರದಿಯ ಪರಿಸರ ಸೂಕ್ಷ್ಮ ಪ್ರದೇಶದ ೭ನೇ ಅಧಿಸೂಚನೆಯಿಂದ ನಡ ಗ್ರಾಮವನ್ನು ಜನವಸತಿ ಹಾಗೂ ಕೃಷಿ ಪ್ರದೇಶ ಸಹಿತ ಸಂಪೂರ್ಣವಾಗಿ ಕೈಬಿಡಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.


ಈ ನಿರ್ಣಯಕ್ಕೆ ಸಭೆಯಲ್ಲಿ ಹಾಜರಿದ್ದ ಎಲ್ಲಾ ಗ್ರಾಮಸ್ಥರು ಒಕ್ಕೊರಲಿನ ಚಪ್ಪಾಳೆ ತಟ್ಟುವುದರ ಮೂಲಕ ಸರ್ವಾನುಮತದ ಅಂಗೀಕಾರ ನೀಡಿದರು. ಕಂದಾಯ ಇಲಾಖೆ ರಾಣೀತಾ, ಪಂಚಾಯತ್ ಕಾರ್ಯದರ್ಶಿ ಕಿರಣ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ್ ನಾಯಕ್, ಕೆ ಸ್ವಾಗತಿಸಿದರು ವಂದಿಸಿದರು

Related posts

ನಾರಾವಿ ಬಂಟರ ವಲಯದ ಕೊಕ್ರಾಡಿ ಗ್ರಾಮ ಸಮಿತಿ ಸಭೆ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಇಲೆಕ್ಟ್ರಿಕಲ್‌ ಮೋಟಾರು ರಿವೈಂಡಿಂಗ್‌ ಮತ್ತು ಪಂಪ್‌ ಸೆಟ್‌ ರಿಪೇರಿ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಏ.24-26: ಕುಂಡದಬೆಟ್ಟು ಮಖಾಂ ಶರೀಫ್ ಉರೂಸ್

Suddi Udaya

ಬೆಳ್ತಂಗಡಿ: ಸ್ಥಗಿತಗೊಂಡ ಬಸ್ ನಿಲ್ದಾಣದ ಕಾಮಗಾರಿ; ಶಾಸಕ ಹರೀಶ್ ಪೂಂಜರಿಂದ‌ ಅಧಿಕಾರಿಗಳೊಂದಿಗೆ ಸಭೆ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ದಿ| ಕಾಶ್ಮೀರಿ ಮೆನೇಜಸ್‌ ರವರಿಗೆ ಶ್ರದ್ಧಾಂಜಲಿ ಸಭೆ

Suddi Udaya

ಕಳೆಂಜ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯಾಗಿ ಅಂಬರೀಶ್ ಅಧಿಕಾರ ಸ್ವೀಕಾರ

Suddi Udaya
error: Content is protected !!