ಬೆಳ್ತಂಗಡಿ: ಉಜಿರೆ ಸಮೀಪದ ಟಿಬಿ ಕ್ರಾಸ್‌ನ ವಿಶಾಲ್ ಕಾಂಪ್ಲೆಕ್ಸ್‌ನಲ್ಲಿರುವ ಕಲರ್ ಕ್ಯೂಬ್ ವಿತ್ ಏಷಿಯನ್ ಪೈಂಟ್ಸ್‌ನ ವಿಶಾಲ್ ಟ್ರೇಡರ್ಸ್ ಮಳಿಗೆಗೆ ಕನ್ನಡ ಚಿತ್ರರಂಗದ ಖ್ಯಾತ ನಟಿ ಐಂದ್ರಿತಾ ರೇ ಅವರು ವಿಶೇಷ ಅತಿಥಿಯಾಗಿ ಭೇಟಿ ನೀಡಿ, ಸಂಸ್ಥೆಗೆ ಶುಭ ಹಾರೈಸಿದರು.
ವಿಶಾಲ್ ಕಾಂಪ್ಲೆಕ್ಸ್‌ನ ಮಾಲಕರಾದ ವಿಶಾಲ್ ಆಗಸ್ಟಿನ್ ಅವರ ಮಾಲಕತ್ವದ ವಿಶಾಲ್ ಟ್ರೇಡರ್ಸ್ ಮಳಿಗೆಗೆ ಸಿನಿ ತಾರೆಯ ಆಗಮನ ಗ್ರಾಹಕರು ಹಾಗೂ ಅಭಿಮಾನಿಗಳ ಗಮನ ಸೆಳೆಯಿತು.
ಕಳೆದ ಎಂಟು ವರ್ಷಗಳಿಂದ ವಿಶಾಲ್ ಕಾಂಪ್ಲೆಕ್ಸ್ ಕಾರ್ಯಾಚರಿಸುತ್ತಿದ್ದು, ಇದರ ಅಂಗವಾಗಿ ಕಲರ್ ಕ್ಯೂಬ್ ವಿತ್ ಏಷಿಯನ್ ಪೈಂಟ್ಸ್‌ನ ವಿಶಾಲ್ ಟ್ರೇಡರ್ಸ್ ಮಳಿಗೆಯು ಸೆ. 9ರಂದು ಶುಭಾರಂಭಗೊಂಡಿದೆ. ಗ್ರಾಹಕರ ಕನಸಿನ ಮನೆಗಳ ಅಂದವನ್ನು ಹೆಚ್ಚಿಸಲು ಗುಣಮಟ್ಟದ ಪೇಂಟ್ ಹಾಗೂ ಸಂಬಂಧಿತ ಉತ್ಪನ್ನಗಳ ಅತ್ಯುತ್ತಮ ಆಯ್ಕೆಗಳನ್ನು ಒದಗಿಸುವ ಉದ್ದೇಶದಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.
ಐಂದ್ರಿತಾ ರೇ ಅವರ ಭೇಟಿ ಸಂದರ್ಭದಲ್ಲಿ ಸಂಸ್ಥೆಯ ಮಾಲಕರು ಹಾಗೂ ಸಿಬ್ಬಂದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.











