27.6 C
ಪುತ್ತೂರು, ಬೆಳ್ತಂಗಡಿ
September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ರೋಯಲ್ ಕ್ರೀಮ್ ಹೌಸ್ ಪ್ರಾರಂಭೋತ್ಸವ

ಬೆಳ್ತಂಗಡಿ: ಸಂತೆಕಟ್ಟೆಯ ರೋಯಲ್ ಕಾಂಪ್ಲೆಕ್ಸ್ ನಲ್ಲಿ ಹರ್ಷೇಂದ್ರ ಜೈನ್ ಇವರು ನೂತನವಾಗಿ ಪ್ರಾರಂಭಿಸಿದ ರೋಯಲ್ ಕ್ರೀಮ್ ಹೌಸ್ ಸೆ. 24 ರಂದು ಶುಭಾರಂಭಗೊಂಡಿತು.

ಅಳದಂಗಡಿ ಅರಮನೆಯ ತಿಮ್ಮಣ್ಯರಸರಾದ ಡಾ. ಪದ್ಮಪ್ರಸಾದ್ ಅಜಿಲರು ದೀಪ ಬೆಳಗಿಸಿ, ನೂತನ ಕ್ರೀಮ್ ಪಾರ್ಲರ್ ಉದ್ಘಾಟಿಸಿ ಭಗವಂತನ ಅನುಗ್ರಹದಿಂದ ಈ ಸಂಸ್ಥೆಯು ಬೆಳಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಪವರ್ ಆನ್ ಬ್ಯಾಟರಿ ಸಂಸ್ಥೆಯ ಮಾಲಕ ಶೀತಲ್ ಜೈನ್, ಉದ್ಯಮಿಗಳಾದ ಸಂತೋಷ್ ಕುಮಾರ್ ಜೈನ್, ಅಯಾನ್ಶ್ ಮೊಬೈಲ್ ಮಾಲಕ ಹರಿಹಂತ್ ಜೈನ್, ಬಳಂಜ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶೀತಲ್ ಪಡಿವಾಳ್,ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ನಾರಾಯಣ್ ಭಟ್ ಮುಗುಳಿ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಕೋರಿದರು.

ಸಂಸ್ಥೆಯ ಮಾಲಕರಾದ ರೋಯಲ್ ಹೌಸ್ ಕ್ರೀಮ್ ಪಾರ್ಲರ್ ಮಾಲಕ ಹರ್ಷೇಂದ್ರ ಜೈನ್, ಸಪ್ನಾ ಹರ್ಷೇಂದ್ರ ಜೈನ್, ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು. ಶೋಭಿತ್ ಕುಮಾರ್ ಸಹಕರಿಸಿದರು.

Related posts

ಸೌತಡ್ಕ ಕ್ಷೇತ್ರಕ್ಕೆ ಯುವ ವಾಗ್ಮಿ ಹಾರಿಕಾ ಮಂಜುನಾಥ್ ಭೇಟಿ

Suddi Udaya

ಬೀಡಿ ಬ್ರಾಂಚ್ ನ ಕಟ್ಟಡದ ಅಡ್ಡಕ್ಕೆ ವ್ಯಕ್ತಿ ನೇಣು ಹಾಕಿಕೊಂಡು ಆತ್ಮಹತ್ಯೆ

Suddi Udaya

ಜು.8 : ಬೆಳ್ತಂಗಡಿ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅವರಿಗೆ ಅಭಿನಂದನೆ

Suddi Udaya

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನೂರಾರು ಕಾರ್ಯಕರ್ತರು

Suddi Udaya

ಪಟ್ರಮೆ ಅನಾರು ಸ.ಉ.ಹಿ.ಪ್ರಾ. ಶಾಲೆ: ಶಾಲಾ ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ಗ್ರಾ.ಪಂ ಅಧ್ಯಕ್ಷ, ಸದಸ್ಯರು ಮತ್ತು ಗ್ರಾಮಸ್ಥರಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜಿನ ಎನ್ ಸಿ ಸಿ ಕ್ಯಾಡೆಟ್‌ಗಳು ಶ್ರೀನಗರದಲ್ಲಿ ನಡೆಯುವ ವಿಶೇಷ ರಾಷ್ಟ್ರೀಯ ಏಕತಾ ಶಿಬಿರಕ್ಕೆ ಆಯ್ಕೆ

Suddi Udaya
error: Content is protected !!