30.9 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ

ಉಜಿರೆ : ಇಲ್ಲಿನ ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನಲ್ಲಿ ಕಲಾವಿಭಾಗದ ವ್ಯುತ್ಪತ್ತಿ ಸಂಘದ ವತಿಯಿಂದ ಸದ್ಭಾವನಾ ದಿನಾಚರಣೆ ಯನ್ನು ಸರ್ವಧರ್ಮ ಗಳ ಪ್ರಾರ್ಥನೆ ಹಾಗೂ ಸಂದೇಶಗಳನ್ನು ವಿದ್ಯಾರ್ಥಿಗಳೇ ಪಟಿಸಿ, ಅನುವಾದಿಸಿ ವಿನೂತನವಾಗಿ ಆಚರಿಸಿದರು.

ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಇವರು ವಿದ್ಯಾರ್ಥಿಗಳಿಗೆ ಸದ್ಭಾವನಾ ಪ್ರತಿಜ್ಞೆಯನ್ನು ಭೋಧಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ಪ್ರತಿವರ್ಷ ಆ. 20 ರಂದು ಭಾರತದಲ್ಲಿ ಸದ್ಭಾವನಾ ದಿವಸ್ ಅಥವಾ ಸಾಮರಸ್ಯ ದಿನವನ್ನು ಆಚರಿಸಲಾಗುತ್ತದೆ. ಇದು ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನವಾಗಿದೆ. ಜಾತಿ, ಧರ್ಮ, ಭಾಷೆ ಅಥವಾ ಪ್ರದೇಶಗಳ ಭೇದವಿಲ್ಲದೆ ಎಲ್ಲ ಜನರ ನಡುವೆ ಶಾಂತಿ, ರಾಷ್ಟ್ರೀಯ ಏಕತೆ, ಪ್ರೀತಿ ಮತ್ತು ಸದ್ಭಾವನೆಯನ್ನು ಉತ್ತೇಜಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಹಾಗೂ ವಿದ್ಯಾರ್ಥಿಗಳು ತಮ್ಮ ಜಾತಿ ,ಮತ ,ಭಾಷೆಗಳ ಭೇದಗಳಿದ್ದರೂ ಸ್ನೇಹ ಹಾಗೂ ಸೌಹಾರ್ಧತೆಗಳ ಮೂಲಕ ಒಂದಾಗಿ ಬದುಕಬೇಕು ಎಂಬ ಸಂದೇಶ ನೀಡಿದರು.


ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಾದ ಸ್ಮೃತಿ ಹಿಂದೂ ಧರ್ಮದ, ನಿಶಾನ ಇಸ್ಲಾಮ್ ಧರ್ಮದ , ಶ್ರೇಯ ಮರಿಯಾ ಕ್ರೈಸ್ತ ಧರ್ಮದ, ರಾಜ್ ಇಂದ್ರ ಜೈನ ಧರ್ಮದ ಹಾಗೂ ಮನೋಜ್ ಎಂ ಬೌದ್ಧ ಧರ್ಮದ ಸಾಮರಸ್ಯದ ಸಂದೇಶ ಸಾರಿದರು.
ವಿದ್ಯಾರ್ಥಿನಿ ಪ್ರಾರ್ಥನಾ ಸ್ವಾಗತಿಸಿ, ತುಳಸಿ ವಂದಿಸಿದರು ,ಸ್ಪೂರ್ತಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ದಿವ್ಯಾ ಕುಮಾರಿ, ಶ್ಯಾಮಿಲಾ ಹಾಗೂ ಪ್ರೇಕ್ಷಿತಾ ಸಹಕರಿಸಿದರು.

Related posts

ಫೆ 27-ಮಾ 02: ಗುರುವಾಯನಕೆರೆ ರತ್ನಗಿರಿ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಪುನರ್ ಪ್ರತಿಷ್ಠಾ ಕಾರ್ಯಕ್ರಮ

Suddi Udaya

ತಾಲೂಕು ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನ ಸಭೆ

Suddi Udaya

ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆ

Suddi Udaya

ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ಕ್ಷಮತ್ವಂ 2026: ಆಟೋಇಮ್ಯೂನ್ ಕಾಯಿಲೆಗಳ ಕುರಿತು ಆಯುರ್ವೇದದ ಜಾಗತಿಕ ಸಂವಾದಕ್ಕೆ ವೇದಿಕೆ

Suddi Udaya

ಸ್ನೇಹಮಯಿ ಕೃಷ್ಣ ವಿರುದ್ಧ ಬೆಳ್ತಂಗಡಿ ವೃತ್ತ ನಿರೀಕ್ಷಕರಿಗೆ ವೆಂಕಪ್ಪ ಕೋಟ್ಯಾನ್ ರಿಂದ ದೂರು

Suddi Udaya

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ಪೆರಿಂಜೆ ಸ.ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!