November 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಿಜೆಪಿಯ ಸುದೀರ್ಘ ಜನಪರ ಹೋರಾಟಕ್ಕೆ ಬೃಹತ್ ಜಯ: 1,000 ಚದರ ಮೀಟರ್‌ವರೆಗಿನ “ಒಂದೇ ನಿವೇಶನ” ನಕ್ಷೆ ಮಂಜೂರಾತಿ ಅಧಿಕಾರ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರ!

ಬೆಳ್ತಂಗಡಿ: ಸಾಮಾನ್ಯ ನಾಗರಿಕರು ಮತ್ತು ಸಣ್ಣ ಆಸ್ತಿ ಮಾಲೀಕರು ನಕ್ಷೆ ಮಂಜೂರಾತಿ ಹಾಗೂ ಲೇಔಟ್ ಪ್ಲಾನ್ ಅನುಮತಿಗಾಗಿ ಕಚೇರಿಗಳಿಂದ ಕಚೇರಿಗಳಿಗೆ ಅಲೆಯುವ ತೊಂದರೆಯನ್ನು ತಪ್ಪಿಸಲು ಭಾರತೀಯ ಜನತಾ ಪಾರ್ಟಿ (BJP) ನಡೆಸಿದ ನಿರಂತರ ಸತ್ಯಾಗ್ರಹ, ಬೀದಿಗಿಳಿದ ಹೋರಾಟ ಮತ್ತು ಸಾರ್ವಜನಿಕ ಒತ್ತಡಕ್ಕೆ ಕೊನೆಗೂ ಸರ್ಕಾರ ಮಣಿದಿದೆ.

ಕರ್ನಾಟಕ ಸರ್ಕಾರವು ಸೆ.24 ರಂದು ಹೊರಡಿಸಿರುವ ನೂತನ ಅಧಿಸೂಚನೆಯ ಪ್ರಕಾರ, 1,000 ಚದರ ಮೀಟರ್‌ವರೆಗಿನ “ಸಿಂಗಲ್ ಪ್ಲಾಟ್” (Single Plot) ನಕ್ಷೆ ಮಂಜೂರಾತಿ ನೀಡುವ ಅಧಿಕಾರವನ್ನು ಮಹಾನಗರ ಪಾಲಿಕೆಗಳ ವಲಯ ಆಯುಕ್ತರು, ನಗರಸಭೆ ಆಯುಕ್ತರು, ಪುರಸಭೆ/ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಪಿಡಿಒ (PDO) ಮಟ್ಟದ ಅಧಿಕಾರಿಗಳಿಗೆ ವಿಕೇಂದ್ರೀಕರಿಸಿ ಆದೇಶ ಹೊರಡಿಸಿದೆ.

ಬಿಜೆಪಿಯ ಹೋರಾಟದ ಫಲ:

ಸಾಮಾನ್ಯ ಜನರು ತಮ್ಮದೇ ಸ್ವಂತ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳಲು ಅಥವಾ ಸಣ್ಣ ಲೇಔಟ್ ನಕ್ಷೆ ಮಂಜೂರಾತಿ ಪಡೆಯಲು ನಗರಾಭಿವೃದ್ಧಿ ಪ್ರಾಧಿಕಾರಗಳ ಸುತ್ತ ತಿರುಗಿ ಲಂಚಾವತಾರ ಮತ್ತು ಕೆಂಪು ಪಟ್ಟಿಯ ಕಿರುಕುಳಕ್ಕೆ ಒಳಗಾಗುತ್ತಿದ್ದರು. ಈ ವ್ಯವಸ್ಥೆಯ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಬೃಹತ್ ಚಳವಳಿ ರೂಪಿಸಿ, ಆಡಳಿತವನ್ನು ಜನರ ಬಾಗಿಲಿಗೆ ತಲುಪಿಸಬೇಕು ಎಂದು ನಿರಂತರವಾಗಿ ಆಗ್ರಹಿಸಿತ್ತು.

ಈ ನಿರ್ಧಾರವು ಸಂಪೂರ್ಣವಾಗಿ ಭಾರತೀಯ ಜನತಾ ಪಾರ್ಟಿಯ ಸಾರ್ವಜನಿಕ ಕಾಳಜಿ ಮತ್ತು ಸಂಘಟಿತ ಹೋರಾಟಕ್ಕೆ ಸಿಕ್ಕ ಐತಿಹಾಸಿಕ ಜಯವಾಗಿದೆ. ಇದರಿಂದಾಗಿ ಲಕ್ಷಾಂತರ ಸಾಮಾನ್ಯ ನಾಗರಿಕರಿಗೆ, ರೈತರಿಗೆ ಮತ್ತು ಸಣ್ಣ ಉದ್ಯಮಿಗಳಿಗೆ ತಕ್ಷಣದ ಪರಿಹಾರ ಸಿಕ್ಕಂತಾಗಿದೆ.

ಬಿಜೆಪಿ ಎಂದಿಗೂ ಜನರ ಪರವಾಗಿ ನಿಲ್ಲುತ್ತದೆ ಎಂಬುದಕ್ಕೆ ಈ ಆದೇಶವೇ ಸಾಕ್ಷಿ. ಜನಸಾಮಾನ್ಯರ ಹಕ್ಕುಗಳಿಗಾಗಿ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ಬಿಜೆಪಿ ಬೆಳ್ತಂಗಡಿ ಮಂಡಲದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.,

Related posts

ಹುಣ್ಸೆಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷೆಯಾಗಿ ರಮಾದೇವಿ, ಉಪಾಧ್ಯಕ್ಷೆಯಾಗಿ ಶಿವಪ್ರಭಾ ಆಯ್ಕೆ

Suddi Udaya

ಅಭೂತಪೂರ್ವ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿಗಳಾದ ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿ ರವರನ್ನು ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣರವರಿಂದ ಸನ್ಮಾನ

Suddi Udaya

ಉಜಿರೆ: ಕೋಡಿಬೈಲು ನಿವಾಸಿ ಪ್ರಭಾಕರ ಪಡುವೆಟ್ನಾಯ ನಿಧನ 

Suddi Udaya

ಅಂತರಂಗದ ಕದನ ಮತ್ತು ನವಚೈತನ್ಯ: ದುರ್ಗೆಯ ನೆರಳಲ್ಲಿ ಮನೋವಿಜಯ

Suddi Udaya

ಜ.6: 49ನೇ ವರ್ಷದ ಬೆಳ್ತಂಗಡಿ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ

Suddi Udaya

ಅಂಡಿಂಜೆ: ನಾರಾವಿ ಮತ್ತು ಅಳದಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶ: ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ

Suddi Udaya
error: Content is protected !!