ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆ.28 ರಿಂದ ಅ.4ರ ವರೆಗೆ ನಡೆಯುವ ಭಜನಾ ಕಮ್ಮಟದ ಮೇಲುಸ್ತುವಾರಿಯನ್ನು ನೋಡಿಕೊಳ್ಳುವ ಸಲುವಾಗಿ ಮಹೋತ್ಸವದ ಸಭಾ ಭವನದಲ್ಲಿ ಕಚೇರಿಯನ್ನು ಪ್ರಾರಂಭಿಸಲಾಯಿತು.
ಭಜನಾ ಕಮ್ಮಟದ ರಾಜ್ಯ ಸಂಚಾಲಕರಾದ ಸುಬ್ರಮಣ್ಯಪ್ರಸಾದ್ ಕಮ್ಮಟದ ಯಶಸ್ಸಿಗೆ ಶ್ರೀ ಮಂಜುನಾಥ ಸ್ವಾಮಿಗೆ, ಚಂದ್ರನಾಥ ಸ್ವಾಮಿಗೆ, ಅಣ್ಣಪ್ಪನಿಗೆ ಹಾಗೂ ಎಲ್ಲ ಧರ್ಮದೇವತೆಗಳಿಗೆ ಪ್ರಾರ್ಥಿಸಿದ ನಂತರ ಖಾವಂದರ ಆಪ್ತ ಕಾರ್ಯದರ್ಶಿಗಳಾದ ವೀರು ಶೆಟ್ಟಿಯವರು ದೀಪ ಪುಜ್ವಲನೆ ಮಾಡುವ ಮೂಲಕ ಕಚೇರಿಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷರು, ಕಮ್ಮಟ ಸಮಿತಿಯ ಪದಾಧಿಕಾರಿಗಳು ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.












