September 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

1000 ಚ.ಮೀ. ವರೆಗಿನ ಏಕ ನಿವೇಶನ ಲೇಔಟ್ ಅನುಮೋದನೆಗೆ ಪಿಡಿಒಗಳಿಗೆ ಅಧಿಕಾರ: ಗ್ರಾಮೀಣ ಜನರ ಸಂಕಷ್ಟಕ್ಕೆ ಸರ್ಕಾರದ ಸ್ಪಂದನೆ: ರಕ್ಷಿತ್ ಶಿವರಾಂ

ಬೆಳ್ತಂಗಡಿ : ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1000 ಚದರ ಮೀಟರ್‌ವರೆಗಿನ ಏಕ ನಿವೇಶನ (Single Plot/Single Layout) ಲೇಔಟ್ ಪ್ಲಾನ್‌ಗಳಿಗೆ ಅನುಮೋದನೆ ನೀಡುವ ಅಧಿಕಾರವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (PDO) ವಹಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಸ್ವಾಗತಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

ಸಣ್ಣ ಪ್ರಮಾಣದ ನಿವೇಶನ ಹೊಂದಿರುವ ಗ್ರಾಮೀಣ ಭಾಗದ ಜನರು ತಮ್ಮ ಮನೆ ನಿರ್ಮಾಣಕ್ಕಾಗಿ ಲೇಔಟ್ ಅಥವಾ ನಿವೇಶನ ಸಂಬಂಧಿತ ಅನುಮೋದನೆ ಪಡೆಯಲು ಈ ಹಿಂದೆ ವಿವಿಧ ಹಂತಗಳ ಕಚೇರಿಗಳಿಗೆ ತೆರಳಿ ಸಮಯ ಮತ್ತು ಹಣ ವ್ಯಯಿಸಬೇಕಾಗುತ್ತಿತ್ತು. ಇದರಿಂದ ಸಾರ್ವಜನಿಕರಿಗೆ ಅನಗತ್ಯ ವಿಳಂಬ ಹಾಗೂ ತೊಂದರೆ ಉಂಟಾಗುತ್ತಿತ್ತು. ಈ ಸಮಸ್ಯೆಯನ್ನು ಪರಿಹರಿಸುವಂತೆ ಹಾಗೂ ಗ್ರಾಮೀಣ ಜನರಿಗೆ ಸ್ಥಳೀಯ ಮಟ್ಟದಲ್ಲೇ ತ್ವರಿತವಾಗಿ ಸೇವೆ ದೊರೆಯುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿ ವಿನಂತಿಸಲಾಗಿತ್ತು ಇದೀಗ ಸರ್ಕಾರವು ಈ ಮನವಿಗೆ ಸ್ಪಂದಿಸಿ, 1000 ಚದರ ಮೀಟರ್‌ವರೆಗಿನ ಏಕ ನಿವೇಶನ ಲೇಔಟ್ ಪ್ಲಾನ್ ಅನುಮೋದನೆ ಅಧಿಕಾರವನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಪಿಡಿಒಗಳಿಗೆ ನೀಡಿರುವುದು ಸ್ವಾಗತಾರ್ಹ ಮತ್ತು ಜನಪರ ಕ್ರಮವಾಗಿದೆ.

ಈ ನಿರ್ಧಾರದಿಂದ ಗ್ರಾಮೀಣ ಪ್ರದೇಶದ ಸಾಮಾನ್ಯ ಜನರು ಹಿರಿಯ ಅಧಿಕಾರಿಗಳ ಕಚೇರಿಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿ ತಪ್ಪಲಿದೆ. ಕಡತಗಳ ವಿಲೇವಾರಿ ವೇಗವಾಗಿ ನಡೆಯುವುದರಿಂದ ಮನೆ ನಿರ್ಮಾಣದ ಕನಸು ಹೊಂದಿರುವ ಅನೇಕ ಕುಟುಂಬಗಳಿಗೆ ಅನುಕೂಲವಾಗಲಿದೆ. ಮಧ್ಯವರ್ತಿಗಳ ಹಸ್ತಕ್ಷೇಪ ಕಡಿಮೆಯಾಗುವುದರ ಜೊತೆಗೆ, ಸಾರ್ವಜನಿಕರ ಸಮಯ ಮತ್ತು ಹಣವೂ ಉಳಿತಾಯವಾಗಲಿದೆ. ಸ್ಥಳೀಯವಾಗಿ ಕಾರ್ಯನಿರ್ವಹಿಸುವ ಪಿಡಿಒ ಹಾಗೂ ತಾಂತ್ರಿಕ ಸಿಬ್ಬಂದಿಗೆ ಸ್ಥಳದ ಭೌಗೋಳಿಕ ಪರಿಸ್ಥಿತಿ, ರಸ್ತೆ ಸಂಪರ್ಕ ಮತ್ತು ಸ್ಥಳೀಯ ವಾಸ್ತವಾಂಶಗಳ ಬಗ್ಗೆ ಉತ್ತಮ ಅರಿವು ಇರುವುದರಿಂದ, ನಿಗದಿತ ನಿಯಮಾವಳಿಗಳಂತೆ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತವಾಗಿ ವಿಲೇವಾರಿ ಮಾಡಲು ಈ ಅಧಿಕಾರ ವಿಕೇಂದ್ರೀಕರಣ ಸಹಕಾರಿಯಾಗಲಿದೆ.

ವಿಶೇಷವಾಗಿ ಸಣ್ಣ ನಿವೇಶನ ಹೊಂದಿರುವ ರೈತರು, ಕಾರ್ಮಿಕರು, ಮಧ್ಯಮ ವರ್ಗದ ಕುಟುಂಬಗಳು ಹಾಗೂ ಗ್ರಾಮೀಣ ಭಾಗದ ಸಾಮಾನ್ಯ ನಾಗರಿಕರಿಗೆ ಈ ಕ್ರಮದಿಂದ ಹೆಚ್ಚಿನ ಪ್ರಯೋಜನವಾಗಲಿದೆ ಸರ್ಕಾರದ ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಹಲವು ಬಾರಿ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಈ ರೀತಿಯ ಸರಳೀಕರಣ ಕ್ರಮ ಕೈಗೊಂಡಿರುವ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

Related posts

ರೆಂಕೆದಗುತ್ತು ನಿವಾಸಿ ಜನಾರ್ಧನ ನಿಧನ

Suddi Udaya

ವಕ್ಫ್‌ ಕಾಯ್ದೆಯನ್ನು ಶೀಘ್ರವಾಗಿ ತಿದ್ದುಪಡಿ ಮಾಡಬೇಕು ಮತ್ತು ಎಚ್.ಡಿ. ಕುಮಾರಸ್ವಾಮಿಯನ್ನು ವರ್ಣದ ವಿಚಾರವಾಗಿ ನಿಂದಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಕ್ಷಮೆಯಾಚಿಸಬೇಕೆಂದು ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಅಗ್ರಹ

Suddi Udaya

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬೆಳ್ತಂಗಡಿ ಸಮಿತಿ ರಚನೆ 62 ನೇ ವರ್ಷದ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಶಾಸಕ ಹರೀಶ್ ಪೂಂಜ, ಅಧ್ಯಕ್ಷರಾಗಿ ಚಂದ್ರಶೇಖರ ಕನ್ನಾಜೆ ಆಯ್ಕೆ

Suddi Udaya

ಕುಕ್ಕಾವು ವೀರಪ್ಪ ಪೂಜಾರಿ ಅಸೌಖ್ಯದಿಂದ ನಿಧನ

Suddi Udaya

ಹೆಣ್ಣು ಮಕ್ಕಳ ಬಗ್ಗೆ ಮಾನಹಾನಿಕರ ಹೇಳಿಕೆ ನೀಡಿದ ಅರಣ್ಯ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಭಜನಾ ಪರಿಷತ್ ರಾಜ್ಯಾಧ್ಯಕ್ಷರು ಮತ್ತು ತಾಲೂಕು ಪದಾಧಿಕಾರಿಗಳು

Suddi Udaya

ಲಾಯಿಲ: ವಿಘ್ನೇಶ್ವರ ಕಲಾ ಮಂದಿರದಲ್ಲಿ ರಾಮ ನಾಮ ತಾರಕ ಮಂತ್ರ ಹಾಗೂ 1,111 ಹಣತೆಗಳ ಪ್ರಜ್ವಲನೆ ಸಹಿತ ಶ್ರೀ ರಾಮ ದೇವರಿಗೆ ಮಹಾ ಮಂಗಳಾರತಿ

Suddi Udaya
error: Content is protected !!