September 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯ : “ಇನ್ನೋವೇಟ್ – ಎ – ಥಾನ್ 2026” ಚಾಲನೆ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯ (ಎಸ್‌ಡಿಎಂಐಟಿ) ಇದರ ನವೋದ್ಯಮ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಘಟಕ (IEDC), ಆಂತರಿಕ ಗುಣಮಟ್ಟ ಭರವಸೆ ಕೋಶ (IQAC), ಸಂಸ್ಥೆಯ ಇನ್ನೋವೇಶನ್ ಕೌನ್ಸಿಲ್ (IIC) ಹಾಗೂ ಐಇಡಿಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ಅಂತಿಮ ಹಾಗೂ ಪೂರ್ವ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ 16 ಗಂಟೆಗಳ ಹ್ಯಾಕಥಾನ್ “ಇನ್ನೋವೇಟ್-ಎ-ಥಾನ್ 2026” ಕಾರ್ಯಕ್ರಮವು ಸೆ. 25ರಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ಅದ್ದೂರಿಯಾಗಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮದ ಅಭ್ಯಾಗತರಾಗಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕರಾದ ಪ್ರೊ. ಎಸ್. ಎನ್. ಕಾಕತ್ಕರ್ ಮಾತನಾಡಿ, ಇಂತಹ ಹ್ಯಾಕಥಾನ್ ಹಾಗೂ ನವೋದ್ಯಮ ಆಧಾರಿತ ಕಾರ್ಯಕ್ರಮಗಳು ಇಂದಿನ ಶಿಕ್ಷಣ ಸಂಸ್ಥೆಗಳಿಗೆ ಅತ್ಯಂತ ಅಗತ್ಯವಾಗಿವೆ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಮಸ್ಯೆ ಪರಿಹಾರ ಕೌಶಲ್ಯ ಹಾಗೂ ವಿನೂತನ ಚಿಂತನೆಗಳನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ.

ಪ್ರತಿಯೊಂದು ಹೊಸ ಆಲೋಚನೆ ಮತ್ತು ಸೃಜನಾತ್ಮಕತೆ ಮುಂದೆ ಒಂದು ಉತ್ತಮ ಉತ್ಪನ್ನವಾಗಿ ರೂಪುಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಕೇವಲ ಆಲೋಚನೆ ಇದ್ದರೆ ಸಾಕಾಗುವುದಿಲ್ಲ; ಅದನ್ನು ಕಾರ್ಯರೂಪಕ್ಕೆ ತರಲು ತಾಂತ್ರಿಕ ಜ್ಞಾನ, ಯೋಜನೆ ಹಾಗೂ ನಿರಂತರ ಪರಿಶ್ರಮ ಅಗತ್ಯವಾಗಿರುತ್ತದೆ. ಕಠಿಣ ಪರಿಶ್ರಮವಿಲ್ಲದೆ ಯಾವುದೇ ಕ್ಷೇತ್ರದಲ್ಲಿಯೂ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಗುರಿಯತ್ತ ನಿರಂತರ ಶ್ರಮವಹಿಸಬೇಕು ಎಂದು ಸಲಹೆ ನೀಡಿದರು.

ನವೋದ್ಯಮ ಎಂದರೆ ಕೇವಲ ದೊಡ್ಡ ಅಥವಾ ಸಂಕೀರ್ಣ ಯೋಜನೆಗಳಲ್ಲ. ಸಮಾಜದ ನೈಜ ಸಮಸ್ಯೆಗಳಿಗೆ ಸರಳ, ಉಪಯುಕ್ತ ಹಾಗೂ ಕೈಗೆಟುಕುವ ಪರಿಹಾರಗಳನ್ನು ಕಂಡುಹಿಡಿಯುವುದೇ ನಿಜವಾದ ನವೋದ್ಯಮ. ವಿದ್ಯಾರ್ಥಿಗಳು ಆರಂಭದಲ್ಲೇ ಅತಿ ದೊಡ್ಡ ಯೋಜನೆಗಳ ಬಗ್ಗೆ ಯೋಚಿಸುವ ಬದಲು, ಜನರ ಜೀವನದಲ್ಲಿ ಉಪಯೋಗವಾಗುವ ಸಣ್ಣ ಆದರೆ ಪರಿಣಾಮಕಾರಿ ಹಾಗೂ ಸ್ಮಾರ್ಟ್ ಆಲೋಚನೆಗಳ ಮೇಲೆ ಗಮನಹರಿಸಬೇಕು. ಅಂತಹ ಆಲೋಚನೆಗಳೇ ಮುಂದೆ ದೊಡ್ಡ ಆವಿಷ್ಕಾರಗಳು ಹಾಗೂ ಯಶಸ್ವಿ ಉತ್ಪನ್ನಗಳಾಗಿ ಬೆಳೆಯುತ್ತವೆ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಆಟೋಡೆಸ್ಕ್ ಸಂಸ್ಥೆಯ ಹಿರಿಯ ಉತ್ಪನ್ನ ಭದ್ರತಾ ಅಭಿಯಂತರರಾದ ಅನಿಲ್ ಕುಮಾರ್ ಎಚ್. ಎಂ. ಅವರು ಮಾತನಾಡಿ, ಇಂದಿನ ಜಾಗತಿಕ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪಠ್ಯಜ್ಞಾನ ಸಾಕಾಗುವುದಿಲ್ಲ. ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಕಂಡುಹಿಡಿಯುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಹ್ಯಾಕಥಾನ್‌ಗಳು ವಿದ್ಯಾರ್ಥಿಗಳಲ್ಲಿ ಸೃಜನಾತ್ಮಕ ಚಿಂತನೆ, ತಂಡದ ಕಾರ್ಯಕ್ಷಮತೆ ಹಾಗೂ ತ್ವರಿತ ನಿರ್ಧಾರ ಸಾಮರ್ಥ್ಯವನ್ನು ವೃದ್ಧಿಸುವ ಅತ್ಯುತ್ತಮ ವೇದಿಕೆಗಳಾಗಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್‌.ಡಿ.ಎಂ. ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂದೀಪ್ ಆರ್. ಅವರು ಮಾತನಾಡಿ, 16 ಗಂಟೆಗಳ ಕಾಲ ನಿರಂತರವಾಗಿ ನಡೆಯಲಿರುವ ಈ ಹ್ಯಾಕಥಾನ್‌ನಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ತಂಡಗಳಾಗಿ ಭಾಗವಹಿಸಿ, ನೈಜ ಜೀವನದ ಸಮಸ್ಯೆಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ರೂಪಿಸುವ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. ನವೀನ ಕಲ್ಪನೆಗಳು, ತಾಂತ್ರಿಕ ಪ್ರಾವೀಣ್ಯತೆ ಹಾಗೂ ಸಮಾಜಮುಖಿ ದೃಷ್ಟಿಕೋನದ ಆಧಾರದ ಮೇಲೆ ಅತ್ಯುತ್ತಮ ಯೋಜನೆಗಳನ್ನು ಆಯ್ಕೆ ಮಾಡಲಾಗುವುದು.

ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸಂಶೋಧನಾ ಸಂಸ್ಕೃತಿ, ನವೋದ್ಯಮ ಚಿಂತನೆ ಹಾಗೂ ಉದ್ಯಮಶೀಲತೆಯ ಗುಣಗಳನ್ನು ಉತ್ತೇಜಿಸುವ ಮಹತ್ವದ ವೇದಿಕೆಯಾಗಿದ್ದು, ಭವಿಷ್ಯದ ತಂತ್ರಜ್ಞಾನ ನಾಯಕರು ಮತ್ತು ಉದ್ಯಮಿಗಳನ್ನು ರೂಪಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ನೆರವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ವಿನಯ್ ಎಂ. ಆರ್. ಹಾಗೂ ರಾಮಪ್ರಸಾದ್ ಡಿ. ಎಸ್. ಸಂಯೋಜಿಸಿದರು. ಎಐ ಮತ್ತು ಡೇಟಾ ಸೈನ್ಸ್ (AI&DS) ವಿಭಾಗದ ವಿದ್ಯಾರ್ಥಿಗಳಾದ ಅನನ್ಯ ಕೆ. ರಾಜ್ ಹಾಗೂ ಪಂಚಮಿ ನಿರೂಪಿಸಿದರು. ವಿದ್ಯಾರ್ಥಿನಿ ತ್ರಿಪದ ವಂದಿಸಿದರು. ವಿದ್ಯಾರ್ಥಿಗಳಾದ ಸಿಂಧೂರ ಮತ್ತು ತಂಡದವರು ಪ್ರಾರ್ಥಿಸಿದರು.

Related posts

ಡಿ.5: ವಿದ್ಯುತ್ ನಿಲುಗಡೆ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವ ಇಂದಬೆಟ್ಟುವಿನಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಸುಲ್ಕೇರಿ-ಅಟ್ರಿಂಜೆ ಸೇತುವೆಯ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶ ಸುನಿಲ್ ಅಸೌಖ್ಯದಿಂದ ಮೃತ್ಯು

Suddi Udaya

ಲಾಯಿಲ ಶ್ರೀ ಕ್ಷೇತ್ರ ಪಿಲಿಪಂಜರ ಸಾನಿಧ್ಯದಲ್ಲಿ ಪ್ರತಿಷ್ಠಾ ದಿನ ಹಾಗೂ ದೈವಗಳ ನೇಮೋತ್ಸವ

Suddi Udaya

ಗುರುವಾಯನಕೆರೆ : ಯಡೂ೯ರು ಎಂಬಲ್ಲಿ ಮನೆಯೊಳಗಡೆ ಯುವಕ ಕವಚಿಬಿದ್ದ ಸ್ಥಿತಿಯಲ್ಲಿ ಪತ್ತೆ: ತಲೆಯ ಭಾಗದಿಂದ ನೆಲದಲ್ಲಿ ಹರಿದು ಹೋದ ನೆತ್ತರು

Suddi Udaya

ಭಾರೀ ಮಳೆಗೆ ಶಿಶಿಲ ಸೇತುವೆ ಮುಳುಗಡೆ

Suddi Udaya
error: Content is protected !!