September 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ತೆಕ್ಕಾರು: ಇಬ್ಬನಿ ಸಂಜೀವಿನಿ ಒಕ್ಕೂಟದ ಮಲ್ಲಿಗೆ ಕೃಷಿ ಮತ್ತು ತರಕಾರಿ ಕೃಷಿಯ ತರಬೇತಿ

ತೆಕ್ಕಾರು: ಇಬ್ಬನಿ ಸಂಜೀವಿನಿ ಗ್ರಾಮ್ ಪಂಚಾಯತ್ ಮಟ್ಟದ ಒಕ್ಕೂಟ ತೆಕ್ಕಾರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ, ಮಹಾತ್ಮ ಗಾಂಧಿ ತೆಕ್ಕಾರು ಗ್ರಾಮ ಪಂಚಾಯತ್ ಇದರ ಸಹಯೋಗದೊಂದಿಗೆ ಒಂದು ದಿನದ ಮಲ್ಲಿಗೆ ಕೃಷಿ ಮತ್ತು ತರಕಾರಿ ಕೃಷಿಯ ತರಬೇತಿ ಆಯೋಜಿಸಲಾಗಿದ್ದು ಒಕ್ಕೂಟದ ಅಧ್ಯಕ್ಷೆ ಪದ್ಮಾವತಿ ಹೆಚ್ ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಬೆಳ್ತಂಗಡಿ ತಾಲೂಕಿನ ಕೃಷಿ ಅಧಿಕಾರಿಯ ಗಣೇಶ್ ಪ್ರಾಸ್ತಾವಿಕವಾಗಿ ಕೃಷಿ ಇಲಾಖೆಯಿಂದ ಆಗುವ ಪ್ರಯೋಜನ ಸೌಲಭ್ಯದ ಬಗ್ಗೆ ಬೇರೆ ಬೇರೆ ತರಬೇತಿ ನಡೆಸಿರುವ ಬಗ್ಗೆ ತಿಳಿಸಿದರು. ನಂತರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೀನ ಎ ರವರು ಗ್ರಾಮ ಪಂಚಾಯಿತಿಯಿಂದ ಸಿಗುವ ಸೌಲಭ್ಯದ ಬಗ್ಗೆ, ಘನತ್ಯಾಜ ಘಟಕದ ಬಗ್ಗೆ, ಮತ್ತು ಹಲವಾರು ವಿಷಯದ ಬಗ್ಗೆ ಮಾಹಿತಿ ನೀಡಿದರು. ನಂತರ ತಾಲೂಕು ಕೃಷಿ ವ್ಯವಸ್ಥಾಪಕ ಬಂಗಾರಪ್ಪ ಸಂಜೀವಿನಿ ಯೋಜನೆಯಿಂದ ಸಿಗುವ ಸಾಲ ಸೌಲಭ್ಯದ ಬಗ್ಗೆ, ತರಬೇತಿ ಕಾರ್ಯಕ್ರಮದಿಂದ ಆಗುವ ಪ್ರಯೋಜನದ ಬಗ್ಗೆ ತಿಳಿಸಿದರು. ನಂತರ ಸಂಪನ್ಮೂಲ ವ್ಯಕ್ತಿಯವರಾದ ಮತ್ತು ಪ್ರಗತಿಪರ ಕೃಷಿಕರು ಆದ ಪ್ರಭಾಕರ್ ಮಯ್ಯ ಅವರು ಮಲ್ಲಿಗೆ ಕೃಷಿ ಮತ್ತು ತರಕಾರಿ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.

52 ಜನ ಫಲಾನುಭವಿಗಳು ತರಬೇತಿಯ ಪ್ರಯೋಜನವನ್ನು ಪಡೆದುಕೊಂಡರು. ಕೃಷಿ ಸಖಿ ಪ್ರಾರ್ಥಿಸಿ. ಪವಿತ್ರ ಸ್ವಾಗತಿಸಿದರು. ಎಲ್ ಸಿ ಆರ್ ಪಿ ಉಷಾ ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದವಿತ್ತರು.

Related posts

ಅರಸಿನಮಕ್ಕಿ ಬೂಡುಮುಗೇರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

Suddi Udaya

ಮದ್ದಡ್ಕ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ವಿಮೆನ್ ಇಂಡಿಯಾ ಮೂವ್ಮೆಂಟ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Suddi Udaya

Carotid body tumor ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುವ ಮರೋಡಿಯ ಯುವಕ: ಶಸ್ತ್ರಚಿಕಿತ್ಸೆಗೆ ಬರೋಬ್ಬರಿ ರೂ. 8 ಲಕ್ಷದ ಅವಶ್ಯಕತೆ, ಬಡಕುಟುಂಬ ಸಹೃದಯ ದಾನಿಗಳ ಸಹಕಾರವನ್ನು ಎದುರು ನೋಡುತ್ತಿದೆ

Suddi Udaya

ಮಚ್ಚಿನ: ಕೃಷಿಕ ಗಂಗಯ್ಯ ಮೂಲ್ಯ ನಿಧನ

Suddi Udaya

ತೋಟತ್ತಾಡಿ: ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!