31 C
ಪುತ್ತೂರು, ಬೆಳ್ತಂಗಡಿ
September 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊರಗ, ಮಲೆಕುಡಿಯರಿಗೆ ಸ್ಥಗಿತಗೊಂಡಿರುವ ಪೌಷ್ಟಿಕ ಆಹಾರ ಕಿಟ್ ವಿತರಣೆ ಪುನರಾರಂಭಿಸಿ: ರಕ್ಷಿತ್ ಶಿವರಾಂ

ಬೆಳ್ತಂಗಡಿ : ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ (ITDP) ಅಡಿಯಲ್ಲಿ ಅಳಿವಿನಂಚಿನಲ್ಲಿರುವ ಮೂಲನಿವಾಸಿ (PVTG) ಸಮುದಾಯಗಳಿಗೆ ನೀಡಲಾಗುತ್ತಿದ್ದ ಪೌಷ್ಟಿಕ ಆಹಾರ ಕಿಟ್ ಗಳ ಪೂರೈಕೆ ಕಳೆದ ಹಲವು ತಿಂಗಳಿಂದ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ, ತಕ್ಷಣವೇ ಆಹಾರ ಕಿಟ್ ವಿತರಣೆಯನ್ನು ಪುನಾರಂಭಿಸುವಂತೆ ಕರ್ನಾಟಕ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಚಿವ ಟಿ. ರಘುಮೂರ್ತಿ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮನವಿ ಸಲ್ಲಿಸಿದ್ದಾರೆ.


ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ಒಟ್ಟು 9 ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಕೊರಗ, ಮಲೆಕುಡಿಯ, ಜೇನುಕುರುಬ, ಕಾಡುಕುರುಬ ಸೇರಿದಂತೆ ಅಳಿವಿನಂಚಿನಲ್ಲಿರುವ ಮೂಲನಿವಾಸಿ ಸಮುದಾಯಗಳ ಕುಟುಂಬಗಳಿಗೆ ITDP ಯೋಜನೆಯಡಿ ಆರೋಗ್ಯ ಸುಧಾರಣೆಗಾಗಿ ಅಕ್ಕಿ, ಬೇಳೆ, ನಂದಿನಿ ತುಪ್ಪ, ಅಡುಗೆ ಎಣ್ಣೆ ಹಾಗೂ ಮೊಟ್ಟೆ ಸೇರಿದಂತೆ ವಿವಿಧ ಪೌಷ್ಟಿಕ ಆಹಾರ ಪದಾರ್ಥಗಳನ್ನು ಒಳಗೊಂಡ ಕಿಟ್‌ಗಳನ್ನು ವಿತರಿಸಲಾಗುತ್ತಿತ್ತು. ಆದರೆ ಈ ಆಹಾರ ಕಿಟ್‌ಗಳ ಪೂರೈಕೆ ಕಳೆದ ಸುಮಾರು 8 ತಿಂಗಳಿಂದ ಸ್ಥಗಿತಗೊಂಡಿರುವುದರಿಂದ ಸಾವಿರಾರು ಕುಟುಂಬಗಳು ತೀವ್ರ ತೊಂದರೆ ಅನುಭವಿಸುತ್ತಿವೆ ಎಂದು ರಕ್ಷಿತ್ ಶಿವರಾಂ ಅವರು ಸಚಿವರ ಗಮನಕ್ಕೆ ತಂದಿದ್ದಾರೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3,015 ಕುಟುಂಬಗಳು-1,215 ಕೊರಗ ಹಾಗೂ 1,800 ಮಲೆಕುಡಿಯ ಕುಟುಂಬಗಳು ಮತ್ತು ಉಡುಪಿ ಜಿಲ್ಲೆಯಲ್ಲಿ 3,120 ಕುಟುಂಬಗಳು-2,670 ಕೊರಗ ಹಾಗೂ 450 ಮಲೆಕುಡಿಯ ಕುಟುಂಬಗಳು ಸೇರಿದಂತೆ ಉಭಯ ಜಿಲ್ಲೆಗಳಲ್ಲೇ 6,000ಕ್ಕೂ ಹೆಚ್ಚು ಕುಟುಂಬಗಳು ಪೌಷ್ಟಿಕ ಆಹಾರದಿಂದ ವಂಚಿತವಾಗಿವೆ.ರಾಜ್ಯಮಟ್ಟದ ಗುತ್ತಿಗೆದಾರರ ಟೆಂಡರ್ ಅವಧಿ ಮುಕ್ತಾಯಗೊಂಡಿದ್ದು, ಹೊಸ ಟೆಂಡ‌ರ್ ಪ್ರಕ್ರಿಯೆಗೆ ಎದುರಾಗಿರುವ ಕಾನೂನು ತೊಡಕುಗಳಿಂದಾಗಿ ಆಹಾರ ಕಿಟ್ ಪೂರೈಕೆ ಸ್ಥಗಿತಗೊಂಡಿದೆ.

ಹೊಸ ಟೆಂಡ‌ರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಹಳೆಯ ಟೆಂಡರ್ ಆಧಾರದಲ್ಲೇ ಆಹಾರ ಪೂರೈಕೆಯನ್ನು ಮುಂದುವರಿಸಲು ಅನುಮೋದನೆ ನೀಡಲಾಗಿದೆ ಎಂಬ ಮಾಹಿತಿ ಇದ್ದರೂ, ಜಿಲ್ಲಾಮಟ್ಟದ ITDP ಅಧಿಕಾರಿಗಳಿಗೆ ಈವರೆಗೆ ಅಧಿಕೃತ ಆದೇಶ ತಲುಪದಿರುವುದರಿಂದ ಸಮಸ್ಯೆ ಮುಂದುವರಿದಿದೆ.ಮೂಲ ನಿವಾಸಿಗಳ ಆರೋಗ್ಯ ಮತ್ತು ಪೌಷ್ಟಿಕತೆಗೆ ಸಂಬಂಧಿಸಿದ ಈ ಯೋಜನೆ ಆಡಳಿತಾತ್ಮಕ ಅಥವಾ ಟೆಂಡರ್ ಪ್ರಕ್ರಿಯೆಗಳ ಕಾರಣದಿಂದ ಸ್ಥಗಿತಗೊಳ್ಳಬಾರದು. ಪ್ರಸ್ತುತ ಮಳೆಗಾಲದ ಸಂದರ್ಭದಲ್ಲಿ ಈ ಸಮುದಾಯಗಳ ಅನೇಕ ಕುಟುಂಬಗಳಿಗೆ ಉದ್ಯೋಗ ಹಾಗೂ ಆದಾಯದ ಅವಕಾಶಗಳು ಕಡಿಮೆಯಾಗಿದ್ದು, ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳಿಗೆ ಪೌಷ್ಟಿಕ ಆಹಾರದ ಕೊರತೆ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಈ ವಿಚಾರವನ್ನು ಮಾನವೀಯ ನೆಲೆಯಲ್ಲಿ ತುರ್ತಾಗಿ ಪರಿಗಣಿಸುವಂತೆ ಅವರು ಸಚಿವರನ್ನು ಒತ್ತಾಯಿಸಿದ್ದಾರೆ.


ಪ್ರಮುಖ ಬೇಡಿಕೆಗಳು1. ಹೊಸ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದ ಕಾನೂನು ತೊಡಕುಗಳು ನಿವಾರಣೆಯಾಗುವವರೆಗೆ, ಹಳೆಯ ಟೆಂಡರ್ ಆಧಾರದಲ್ಲೇ ಪೌಷ್ಟಿಕ ಆಹಾರ ಕಿಟ್ಗಳ ಪೂರೈಕೆಯನ್ನು ತಕ್ಷಣ ಪುನಾರಂಭಿಸಲು ಜಿಲ್ಲಾ ITDP ಅಧಿಕಾರಿಗಳಿಗೆ ಸೂಕ್ತ ಆದೇಶ ನೀಡಬೇಕು.2. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೊರಗ ಹಾಗೂ ಮಲೆಕುಡಿಯ ಸಮುದಾಯಗಳಿಗೆ ಬಾಕಿ ಉಳಿದಿರುವ ಹಿಂದಿನ ತಿಂಗಳ ಪೌಷ್ಟಿಕ ಆಹಾರ ಕಿಟ್‌ಗಳನ್ನು ಶೀಘ್ರವಾಗಿ ವಿತರಿಸಬೇಕು. 3. ಮುಂದಿನ ದಿನಗಳಲ್ಲಿ ಇಂತಹ ಆಡಳಿತಾತ್ಮಕ ಅಥವಾ ಟೆಂಡ‌ರ್ ಸಂಬಂಧಿತ ಕಾರಣಗಳಿಂದ PVTG ಸಮುದಾಯಗಳಿಗೆ ದೊರೆಯಬೇಕಾದ ಪೌಷ್ಟಿಕ ಆಹಾರ ಯೋಜನೆಗಳು ಸ್ಥಗಿತಗೊಳ್ಳದಂತೆ ಶಾಶ್ವತ ಹಾಗೂ ಪರಿಣಾಮಕಾರಿ ವ್ಯವಸ್ಥೆ ರೂಪಿಸಬೇಕು. ಅಳಿವಿನಂಚಿನಲ್ಲಿರುವ ಮೂಲನಿವಾಸಿ ಸಮುದಾಯಗಳ ಆರೋಗ್ಯ, ಪೌಷ್ಟಿಕತೆ ಹಾಗೂ ಶ್ರೇಯೋಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕು.
ಈ ಹಿನ್ನೆಲೆಯಲ್ಲಿ ಮಾನವೀಯ ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಂಡು, ಸ್ಥಗಿತಗೊಂಡಿರುವ ಪೌಷ್ಟಿಕ ಆಹಾರ ಕಿಟ್‌ಗಳ ವಿತರಣೆಯನ್ನು ಪುನಾರಂಭಿಸಿ, ಬಾಕಿ ಇರುವ ಕಿಟ್‌ಗಳನ್ನು ವಿತರಿಸುವಂತೆ ರಕ್ಷಿತ್ ಶಿವರಾಂ ಸಚಿವರಲ್ಲಿ ಮನವಿ ಮಾಡಿದ್ದಾರೆ.

Related posts

ಸೌತಡ್ಕ : ಗೇರು ಪ್ಲಾಂಟೇಶನ್ ನಲ್ಲಿ ಬೆಳ್ಳಂಬೆಳ್ಳಗೆ ಎರಡು ಕಾಡಾನೆಗಳು ಪ್ರತ್ಯಕ್ಷ

Suddi Udaya

ಬಂಗಾಡಿ ಕುಕ್ಕಾವು ನಿವಾಸಿ ಜಯಂತ್ ಕುಲಾಲ್ ನಿಧನ

Suddi Udaya

ಬಿಜೆಪಿ ತಣ್ಣೀರುಪoತ ಶಕ್ತಿಕೇಂದ್ರ ಪ್ರಮುಖ್ ಆಗಿ ಚೇತನ್ ಸುವರ್ಣ ಅಳಕ್ಕೆ ಆಯ್ಕೆ

Suddi Udaya

ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯ : ಇಬ್ಬರು ವಿದ್ಯಾರ್ಥಿಗಳು Quest Global ಸಂಸ್ಥೆಯ ವಿದ್ಯಾರ್ಥಿ ವೇತನಕ್ಕೆ ಆಯ್ಕೆ

Suddi Udaya

ಎ.30-ಮೇ.3: ಮಾನ್ಯ ಸತ್ಯಚಾವಡಿ ತರವಾಡು ಮನೆಯ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಸಮಾಲೋಚನೆ ಸಭೆ, ಭರದಿಂದ ಸಾಗುತ್ತಿದೆ ಜೀರ್ಣೋದ್ಧಾರ ಕೆಲಸ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಡಾ|| ವೀರೇoದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ವರ್ಧoತಿ ಪ್ರಯುಕ್ತ ಗೌರವಾರ್ಪಣೆ

Suddi Udaya
error: Content is protected !!