29.4 C
ಪುತ್ತೂರು, ಬೆಳ್ತಂಗಡಿ
September 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ನಗರ ಹಾಗೂ ಗ್ರಾಮಂತರದಲ್ಲಿ 25 ಸೆಂಟ್ಸ್ (1000 ಚ. ಮೀಟರ್) ವರೆಗಿನ ವಿನ್ಯಾಸ : ಪತ್ರಿಕಾ ಗೋಷ್ಠಿಯಲ್ಲಿ ಸರ್ಕಾರವನ್ನು ಅಭಿನಂದಿಸಿದ ಪಟ್ಟಣ ಪಂಚಾಯತ್ ಹಿರಿಯ ಸದಸ್ಯ ಜಗದೀಶ್ ಡಿ.

ಬೆಳ್ತಂಗಡಿ: ಬೆಳ್ತಂಗಡಿ ನಗರ ಹಾಗೂ ಗ್ರಾಮಂತರದಲ್ಲಿ 25 ಸೆಂಟ್ಸ್ (1000 ಚ. ಮೀಟರ್) ವರೆಗಿನ ವಿನ್ಯಾಸ ಅನುಮೋದನೆಗೆ ಹಾಗೂ 9/11 ಖಾತಾ ನೀಡುವ ಅಧಿಕಾರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಹಾಗೂ ಗ್ರಾಮ ಪಂಚಾಯತ್‌ಲೇ ಖಾತಾ ನೀಡುವ ಅಧಿಕಾರ ನೀಡಿರುವ ಕರ್ನಾಟಕ ಸರಕಾರದ ಸ್ಪಂದನೆ ಮತ್ತು ಜನಪರ ನಿರ್ಧಾರಕ್ಕೆ ಸರಕಾರಕ್ಕೆ ಅಭಿನಂದನೆಗಳು ಹಾಗೂ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ ಎಂದು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಪಟ್ಟಣ ಪಂಚಾಯಿತ್ ಮಾಜಿ ಹಿರಿಯ ಸದಸ್ಯ ಹಾಗೂ ಕೆಡಿಪಿ ಸದಸ್ಯರಾದ ಡಿ.ಜಗದೀಶ್ ಹೇಳಿದರು.

ಅವರು ಸೆ.26ರಂದು ಬೆಳ್ತಂಗಡಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 2017-18 ರಲ್ಲಿ ನೀಡಿದ ಎಲ್ಲ ಫಾರ್ಮ್ 3 ರದ್ದು ಪಡಿಸಿ 2018 ರಿಂದ 2024 ವರೆಗೆ ಮೂಡಾ ಪ್ರಾಧಿಕಾರದಿಂದ ಅನುಮೋದನೆಗೊಂಡ ವಿನ್ಯಾಸ ನಕ್ಷೆ ಪಡೆದು ನಮೂನೆ 3 ಪಡೆದುಕೊಳ್ಳಬೇಕು ಎಂಬ ನಿಯಮ ದಿಂದ ಬೆಳ್ತಂಗಡಿ ನಗರದಲ್ಲಿ ಭೂ ಮಾಲಿಕರಿಂದ ಕಟ್ ಕನ್ವರ್ಷನ್ ಆದ ನಿವೇಶನಗಳನ್ನು ಖರೀದಿ ಮಾಡಿರುವುದರಿಂದ ಖಾತಾ ಸಿಗದ ಸಂದರ್ಭದಲ್ಲಿ ನಗರದ ಜನತೆಯ ಪರವಾಗಿ ನಾನು 2024 ರಲ್ಲಿ ಕರ್ನಾಟಕ ಸರಕಾರ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರಿಗೆ, ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರಿಗೆ, ನಗರಾಭಿವೃದ್ಧಿ ಸಚಿವರರಾದ ಬೈರತಿ ಸುರೇಶ್ ರವರಿಗೆ ಪೌರಾಡಳಿತ ಸಚಿವರಾದ ರಹೀಂ ಖಾನ್ ರವರಿಗೆ, ದ.ಕ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರಿಗೆ, ನಮ್ಮ ತಾಲೂಕಿನ ಶಾಸಕರಾದ ಹರೀಶ್ ಪೂಂಜಾ ರವರಿಗೆ. ಎಮ್.ಎಲ್.ಸಿ ಪ್ರತಾಪ್‌ ಸಿಂಹ ನಾಯಕ್ ರವರಿಗೆ, ನಮ್ಮ ನಾಯಕರಾದ ಡಿ.ಸಿ.ಸಿ ಅಧ್ಯಕ್ಷರಾದ ಮತ್ತು ಇಂದಿನ ಮೆಸ್ಕಾಂ ಅದ್ಯಕ್ಷ ಹರೀಶ್ ಕುಮಾರ್ ರವರಿಗೆ, ಎಮ್.ಎಲ್.ಸಿ ಮಂಜುನಾಥ್ ಭಂಡಾರಿ ರವರಿಗೆ, ಕೆ.ಪಿ.ಸಿ.ಸಿ ಪ್ರದಾನ ಕಾಯ೯ದರ್ಶಿಯಾದ ರಕ್ಷಿತ್ ಶಿವರಾಂ ರವರಿಗೆ ಮೂಡದಿಂದ ಆಗುತ್ತಿರುವ ಸಮಸ್ಯೆಗಳಿಗೆ ಮನವಿಯನ್ನು ಬೆಂಗಳೂರಿನಲ್ಲಿ ನೀಡಲಾಯಿತು.

ಅದರಂತೆ ಎಲ್ಲಾ ನಾಯಕರು ಬೆಳಗಾಂ ಅಧಿವೇಶನದಲ್ಲಿ ಎಮ್.ಎಲ್.ಎ ಹಾಗೂ ಎಮ್.ಎಲ್.ಸಿ ಅವರೆಲ್ಲರೂ ಬೆಳ್ತಂಗಡಿಯ ಮೂಡದ ಫಾರ್ಮ್ 3 ಹಾಗೂ ಕಟ್ ಕನ್ವರ್ಷನ್‌ನಿಂದ ವಿನ್ಯಾಸ ನಕ್ಷೆ ದೊರಕದೆ ಇರುವ ಬಗ್ಗೆ ವಿಧಾನ ಮಂಡಲ ಹಾಗೂ ವಿಧಾನ ಪರಿಷತ್‌ನಲ್ಲಿ ಧ್ವನಿ ಎತ್ತಿದ್ದರಿಂದ 2025 ರಲ್ಲಿ ಪ್ರಥಮ ಬಾರಿಗೆ ಅಂದಿನ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಬಿ’ ಖಾತಾ ನೀಡಲು ಆದೇಶ ಹೊರಡಿಸಿದರೂ ಬೆಳ್ತಂಗಡಿ ಯಲ್ಲಿ ಬಿ ‘ಖಾತಾ ಪಡಕೊಂಡವರಿಗೆ ನಿವೇಶನವು ಮಾರಾಟ ಮಾಡ ಬಹುದೆ ವಿನಃ ಮನೆ ಕಟ್ಟಲು ಬ್ಯಾಂಕ್ ಸಾಲವಾಗಲಿ, ಮನೆ ಕಟ್ಟಲು ಪಂಚಾಯತ್ ಗಳಿಂದ ಪರವಾನಿಗೆ ಸಿಗುತ್ತಿರಲಿಲ್ಲ. ಇದನ್ನು ಮನಗಂಡು ಬೆಳ್ತಂಗಡಿ ಪ.ಪ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿದರೂ ಮನೆ ಕಟ್ಟಲು ಪರವಾನಿಗೆ ಸಿಗುತ್ತಿರಲಿಲ್ಲ ಇಂತಹ ಸಂದರ್ಭದಲ್ಲಿ ಮತ್ತೆ ಸರಕಾರಕ್ಕೆ ವಿಭಜಿತ ಕಟ್ ಕನ್ವರ್ಷನ್ ನಿವೇಶನಗಳಿಗೆ ಎ ಖಾತ ನೀಡದ್ದಿದ್ದರೇ ಬಿ ಖಾತಾದಿಂದ ಎನೂ ಪ್ರಯೋಜನ ಜನತೆಗೆ ಸಿಗದೆ ಇರುವುದರಿಂದ ಬೇಡಿಕೆಯನ್ನು ಪ.ಪ ಹಾಗೂ ಜನರ ಪರವಾಗಿ ಮನವಿ ನೀಡಿದ್ದೇನೆ. ಅದರಂತೆ ರಾಜ್ಯಕ್ಕೆ 2026 ಜನವರಿಯಲ್ಲಿ ಬಿ ಖಾತಾ ಮಾಡಿಸಿ ಕೊಂಡವರೆಲ್ಲರೂ ಎ ಖಾತಾ ಮಾಡಿಸಿಕೊಳ್ಳುವಂತೆ ಮೂಡದಿಂದ ಅನುಮತಿ ಕಡ್ಡಾಯ ಎಂಬ ನಿಯಮವನ್ನು ಜಾರಿಗೆ ತಂದಿರುವುದರಿಂದ ಬೆಳ್ತಂಗಡಿಯ ಜನತೆಗೆ ಬಹಳ ಒಳ್ಳೆಯ ಸಮಾಧಾನಕರವಾದ ವಿಷಯವಾಗಿರುತ್ತದೆ. ಇನ್ನು ಮುಂದೆ ಬೆಳ್ತಂಗಡಿ ನಗರದ ಜನತೆ ಪ.ಪ ಮುಖ್ಯಾಧಿಕಾರಿಗಳಿಂದಲೆ ವಿನ್ಯಾಸ ನಕ್ಷೆ ಹಾಗೂ ನಮೂನೆ 3 ಪಡೆದುಕೊಳ್ಳುವಂತೆ ಅದೇಶ ಬಂದಿರುತ್ತದೆ. ಇತ್ತೀಚೆಗೆ ದ.ಕ ಜಿಲ್ಲೆ ಮಂಗಳೂರಿನಲ್ಲಿ – ವಿಶೇಷ ಸಂಪುಟ ಸಭೆಯಲ್ಲಿ ನಗರಾಭಿವೃದ್ಧಿ ಸಚಿವರು ಯತೀಂದ್ರ ಸಿದ್ದರಾಮಯ್ಯ ಹಾಗೂ ಮಾನ್ಯ ಮುಖ್ಯಮಂತ್ರಿ ರವರಿಗೆ ಮನವಿ ಅರ್ಪಿಸಿ ಮೂಡದ ಬಗ್ಗೆ ವಿವರಿಸಲಾಯಿತು.


ಈಗ ಬೆಳ್ತಂಗಡಿ ನಗರ ಹಾಗೂ ಗ್ರಾಮಂತರದಲ್ಲಿ 25 ಸೆಂಟ್ಸ್ (1000 ಚ. ಮೀಟರ್) ವರೆಗಿನ ವಿನ್ಯಾಸ ಅನುಮೋದನೆಗೆ 9/11 ಮತ್ತು ಖಾತಾ ನೀಡುವ ಹಾಗೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಪಟ್ಟಣ ಪಂಚಾಯತ್‌ನಿಂದಲೇ ಖಾತಾ ನೀಡುವ ಅಧಿಕಾರ ನೀಡಿರುವ ಕರ್ನಾಟಕ ಸರಕಾರದ ಆದೇಶ ಮಾಡಿದೆ ಎಂದು ತಿಳಿಸಿದರು.
ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಹಾಗೂ ನಗರಾಭಿವೃದ್ಧಿ ಸಚಿವರು ಹಾಗೂ ನಗರ -ಯೋಜನೆ ಸಚಿವರು ಆಗಿರುವ ಯತೀಂದ್ರ ಸಿದ್ದರಾಮಯ್ಯ ನವರಿಗೆ ಬೆಳ್ತಂಗಡಿ ತಾಲೂಕಿನ ಸಮಸ್ತ ನಾಗರಿಕರ ಮತ್ತು ಪ.ಪ ವ್ಯಾಪ್ತಿಯ ಸಮಸ್ತ ನಾಗರಿಕ ಪರವಾಗಿ ಆಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ತುಳು ಭಾಷೆಯನ್ನು ಕರ್ನಾಟಕದ 2ನೇ ಭಾಷೆಯಾಗಿ ಘೋಸಿಷಿಸಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರಿಗೆ ಧನ್ಯವಾದ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.


ಪತ್ರಿಕಾ ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಕೆ ವಸಂತ, ಮಾಜಿ ಸದಸ್ಯ ಜೇಮ್ಸ್ ಡಿ ಸೋಜ, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಅಭಿನಂದನ್ ಹರೀಶ್ , ಮಾಜಿ ಯೋಧ ಮಹಮ್ಮದ್ ರಫಿ, ಹರೀಶ್ ಕೆ. ಉಪಸ್ಥಿತರಿದ್ದರು.

Related posts

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಡಿ.ಕೆ. ಆರ್.ಡಿ.ಎಸ್ ನಿಂದ ಪೌಷ್ಟಿಕ ಆಹಾರ ಮಾಹಿತಿ, ಪ್ರಾತ್ಯಕ್ಷಿಕೆ ಹಾಗೂ ಗುರುವಂದನಾ ಕಾರ್ಯಕ್ರಮ

Suddi Udaya

ನಾಲ್ಕೂರು: ಭಾರಿ ಮಳೆಗೆ ಕುರೆಲ್ಯ ರಾಜೇಂದ್ರ ಶೆಟ್ಟಿಯವರ ಮನೆಗೆ ಬರೆ ಕುಸಿದು ಹಾನಿ: ಬಿಜೆಪಿ ಬೆಳ್ತಂಗಡಿ ಮಂಡಲದಿಂದ ಭೇಟಿ

Suddi Udaya

ಬಳ್ಳಮಂಜ ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ ಅಲ್ಪಸಂಖ್ಯಾತ ಕಾಲೋನಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಬಗ್ಗೆ ಸಚಿವ ಬಿ ಜೆಡ್ ಜಮೀರ್ ಅಹಮ್ಮದ್ ಖಾನ್ ರವರಿಗೆ ರಕ್ಷಿತ್ ಶಿವಾರಾಂ ರಿಂದ ಮನವಿ

Suddi Udaya

ಬೆಳ್ತಂಗಡಿಯಲ್ಲಿ ಬಿದಿರು ಕೃಷಿಯ ಬಗ್ಗೆ ತಾಂತ್ರಿಕ ಮಾಹಿತಿ ಕಾರ್ಯಗಾರ

Suddi Udaya
error: Content is protected !!