29.4 C
ಪುತ್ತೂರು, ಬೆಳ್ತಂಗಡಿ
September 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

1000ಚ.ಮೀ.ವರೆಗಿನ ಏಕ ನಿವೇಶನ ಲೇಔಟ್ ಅನುಮೋದನೆಗೆ ಪಿಡಿಒಗಳಿಗೆ ಅಧಿಕಾರ: ಗ್ರಾಮೀಣ ಜನರ ಸಂಕಷ್ಟಕ್ಕೆ ಸರ್ಕಾರದ ಸ್ಪಂದನೆಗೆ ಸ್ವಾಗತಿಸಿದ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾ‌ರ್ ಗೌಡ

ಬೆಳ್ತಂಗಡಿ : ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1000 ಚದರ ಮೀಟರ್‌ವರೆಗಿನ (25ಸೆಂಟ್ಸ್) ಏಕ ನಿವೇಶನ (Single Plot/Single Layout) ಲೇಔಟ್ ಪ್ಲಾನ್ ಗಳಿಗೆ ಅನುಮೋದನೆ ನೀಡುವ ಅಧಿಕಾರವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (PDO) ವಹಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗ್ರಾಮೀಣ ನಾಗೇಶ್ ಕುಮಾರ್ ಗೌಡ ಸ್ವಾಗತಿಸಿದ್ದಾರೆ.

ಹಲವು ಸಮಯದಿಂದ ಗ್ರಾಮೀಣ ಭಾಗದ ಜನರು ತಮ್ಮ ಮನೆ ನಿರ್ಮಾಣಕ್ಕಾಗಿ ಲೇಔಟ್ ಅಥವಾ ನಿವೇಶನ ಸಂಬಂಧಿತ ಅನುಮೋದನೆ ಪಡೆಯಲು ಈ ಹಿಂದೆ ವಿವಿಧ ಹಂತಗಳ ಕಚೇರಿಗಳಿಗೆ ತೆರಳಿ ಸಮಯ ಮತ್ತು ಹಣ ವ್ಯಯಿಸಬೇಕಾಗುತಿತ್ತು. ಈ ಸಮಸ್ಯೆಯನ್ನು ಪರಿಹರಿಸುವಂತೆ ಹಾಗೂ ಗ್ರಾಮೀಣ ಜನರಿಗೆ ಸ್ಥಳೀಯ ಮಟ್ಟದಲ್ಲೇ ತ್ವರಿತವಾಗಿ ಸೇವೆ ದೊರೆಯುವಂತೆ ಮಾಡಿದ್ದು ನಿಟ್ಟುಸಿರು ಬಿಡುವಂತಾಗಿದೆ. ಈ ನಿರ್ಧಾರದಿಂದ ಗ್ರಾಮೀಣ ಪ್ರದೇಶದ ಸಾಮಾನ್ಯ ಜನರು ಹಿರಿಯ ಅಧಿಕಾರಿಗಳ ಕಚೇರಿಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿ ತಪ್ಪಿದಂತಾಗಿದೆ. ಇದರಿಂದ ಮದ್ಯಾವರ್ತಿಗಳ ಹಾವಳಿ ತಪ್ಪಿದಂತಾಗಿದೆ.

ಸಣ್ಣ ಸಣ್ಣ ನಿವೇಶನ ಹೊಂದಿದ ರೈತರು, ಕಾರ್ಮಿಕರು, ಹಾಗೂ ಗ್ರಾಮೀಣ ಭಾಗದ ಸಾಮಾನ್ಯ ನಾಗರಿಕರಿಗೆ ಈ ಕ್ರಮದಿಂದ ಹೆಚ್ಚಿನ ಪ್ರಯೋಜನವಾಗಲಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಈ ರೀತಿಯ ಸರಳೀಕರಣ ಕ್ರಮ ಕೈಗೊಂಡಿರುವ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.

Related posts

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

Suddi Udaya

‘ರಾಜ್ಯ ಜ್ಯೂನಿಯರ್‌ ಅಥ್ಲೆಟಿಕ್ಸ್‌ ಗೆ’ ಸೇಕ್ರೆಡ್‌ ಹಾರ್ಟ್‌ ಕಾಲೇಜಿನ ವಿದ್ಯಾರ್ಥಿ ಪುನೀತ್‌ ಕುಮಾರ್‌ ಆಯ್ಕೆ

Suddi Udaya

ತೆಕ್ಕಾರು : ಪತ್ನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ಪತಿ

Suddi Udaya

ಬೆಳ್ತಂಗಡಿ: ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿ ಆಯ್ಕೆ ಯಾದ ಸೇಬಾಷ್ಟಿಯನ್ ಪಿ ಸಿ ರವರಿಗೆ ಕೆ ಎಸ್ ಎಂ ಸಿ ಎ ಬೆಳ್ತಂಗಡಿ ವತಿಯಿಂದ ಅಭಿನಂದನೆ

Suddi Udaya

ಬೆಳ್ತಂಗಡಿ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದಲ್ಲಿ 50 ನೇ ವರ್ಷದ ಸಂಭ್ರಮಾಚರಣೆ

Suddi Udaya

ರೀಜೆಂಟ್ ಮಳಿಗೆ ಅಳದಂಗಡಿಯಿಂದ- ಗರ್ಡಾಡಿ ಹೊನ್ನಕಟ್ಟೆಗೆ ಸ್ಥಳಾಂತರಗೊಂಡು ಶುಭಾರಂಭ

Suddi Udaya
error: Content is protected !!