31.7 C
ಪುತ್ತೂರು, ಬೆಳ್ತಂಗಡಿ
October 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಅ.4: ಎಕ್ಸೆಲ್ ಸಮೂಹ ವಿದ್ಯಾಸಂಸ್ಥೆಯಲ್ಲಿ ‘ಗುರುನಮನ 2026’

ಗುರುವಾಯನಕೆರೆ : ಎಕ್ಸೆಲ್ ಸಮೂಹ ವಿದ್ಯಾಸಂಸ್ಥೆಯಲ್ಲಿ ಎಕ್ಸೆಲ್ ವಿದ್ಯಾಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಎಕ್ಸೆಲ್‌ನ ವಿದ್ಯಾರ್ಥಿಗಳ ಪಾಲಕರಾದ ಶಿಕ್ಷಕರಿಗೆ ‘ಗುರುನಮನ 2026’ ಕಾರ್ಯಕ್ರಮ ಅ. 04 ರಂದು ಮಧ್ಯಾಹ್ನ ಗಂಟೆ 1:30 ರಿಂದ ಅರಮಲೆ ಬೆಟ್ಟ ಕ್ಯಾಂಪಸ್ ನಲ್ಲಿ ನಡೆಯಲಿದೆ.

ಅನಂತಶ್ರೀ ವಿಭೂಷಿತ ಶ್ರೋತ್ರಿಯ ಬ್ರಹ್ಮನಿಷ್ಠ ಮಹಾ ಮಂಡಲೇಶ್ವರ 1008 ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಜೀ ಮಹಾರಾಜ್ ಹಾಗೂ ಶ್ರೀ ದುರ್ಗಾ ಮಹಾಲಕ್ಷ್ಮಿ ಕ್ಷೇತ್ರ ಶ್ರೀ ಧಾಮ ಮಾಣಿಲ ಕರ್ಮಯೋಗಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಯವರಿಂದ ಆಶೀರ್ವಚನ ನೀಡಲಿದ್ದಾರೆ.

ಅಧ್ಯಕ್ಷತೆ ಎಕ್ಸೆಲ್ ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾ‌ರ್ ಜೈನ್‌ ಬಿ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮೂಲ್ಕಿ ವಿಜಯಾ ಕಾಲೇಜು ವಿಶ್ರಾಂತ ಪ್ರಾಂಶುಪಾಲರು ಡಾ. ನಾರಾಯಣ ಪೂಜಾರಿ , ಸುಬ್ರಹ್ಮಣ್ಯ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಪ.ಪೂ ಕಾಲೇಜು ಪ್ರಾಂಶುಪಾಲರು ಸೋಮಶೇಖರ ನಾಯಕ್, ಬೆಳ್ತಂಗಡಿ ಸಾಮಾಜಿಕ ಧಾರ್ಮಿಕ ಮುಂದಾಳು ಸಂತೋಷ್ ಕುಮಾ‌ರ್ ಕಾಪಿನಡ್ಕ ಭಾಗವಹಿಸಲಿದ್ದಾರೆ.

ಬೆಳಿಗ್ಗೆ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ, ರಾತ್ರಿ ಗಂಟೆ 8 ರಿಂದ ಗಿರಿಜಾ ಕಲ್ಯಾಣ ಹಾಗೂ ತಾರಕಾಸುರ ವಧೆ ನಡೆಯಲಿದೆ.

Related posts

ಚುನಾವಣಾ ಕೇಂದ್ರದ ಎಡವಟ್ಟು: ಮತಗಟ್ಟೆ ಸಂಖ್ಯೆ ಬದಲಾವಣೆ: ಕೊಕ್ಕಡದಿಂದ ಮರ್ಕಂಜದ ಮಿತ್ತಡ್ಕಕ್ಕೆ ಬಂದು ಮತ ಚಲಾಯಿಸಿದ ಮತದಾರ

Suddi Udaya

ಮಡಂತ್ಯಾರು ವಲಯ ಆಟೋ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ

Suddi Udaya

ಎಸ್‌ಕೆಎಸ್‌ಎಸ್‌ಎಫ್ ಈಸ್ಟ್ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಯಾಸಿರ್ ಕಕ್ಕಿಂಜೆ ಆಯ್ಕೆ

Suddi Udaya

ಬೈಕ್ ಢಿಕ್ಕಿಯಾಗಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪಾದಚಾರಿ ಚಿಕಿತ್ಸೆ ಫಲಿಸದೆ ಸಾವು

Suddi Udaya

ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ಪದಗ್ರಹಣ ಸಮಾರಂಭ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಜೆಸಿಐ ಬೆಳ್ತಂಗಡಿ ಮಂಜುಶ್ರೀ 47ನೇ ಜೆಸಿ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!