24.8 C
ಪುತ್ತೂರು, ಬೆಳ್ತಂಗಡಿ
October 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ನಾವೂರು ಸ್ವಾತಿ ಕಟ್ಟಡದಲ್ಲಿರುವ ಆರೋಗ್ಯ ಕ್ಲಿನಿಕ್ ನಲ್ಲಿ ಬೆಂಕಿ ಅನಾಹುತ : ಕಿಡಿಗೇಡಿಗಳು ಡಿಸೇಲ್ ಸುರಿದು ಬೆಂಕಿ ಹಚ್ಚಿರುವ ಶಂಕೆ

ನಾವೂರು: ನಾವೂರು ಪೇಟೆಯಲ್ಲಿರುವ ಆರೋಗ್ಯ ಕ್ಲಿನಿಕ್ ಗೆ ತಡರಾತ್ರಿ  ಬೆಂಕಿ ಬಿದ್ದು ಅಪಾರ ವಸ್ತುಗಳು ಸುಟ್ಟು ಕರಕಲಾದ ಘಟನೆ ಅ. 7 ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಅನಾಹುತದದ ಹಿಂದೆ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದ್ದು, ಯಾರೋ ಕಿಡಿಗೇಡಿಗಳು ಡಿಸೇಲ್ ಸುರಿದು
ಬೆಂಕಿ ಹಚ್ಚಿದ್ದಾರೆ ಎಂಬ ವದಂತಿ ಹರಡಿದೆ. ಘಟನಾ ಸ್ಥಳದಲ್ಲಿ ನೂರಾರು ಮಂದಿ ಸಾರ್ವಜನಿಕರು ಜಮಾಯಿಸಿದ್ದಾರೆ.

ನಾವೂರು ಗ್ರಾಮದ ಶೇಖರ್ ಪೂಜಾರಿ ಎಂಬವರ ಮಾಲೀಕತ್ವದ ಸ್ವಾತಿ ಕಟ್ಟಡದಲ್ಲಿ ಡಾ. ಪ್ರದೀಪ ಎ ಅವರಿಗೆ ಸೇರಿದ ಆರೋಗ್ಯ ಕಿನ್ಲಿಕ್ ಕಾರ್ಯಚರಿಸುತ್ತಿದ್ದು  ಬುಧವಾರ ತಡರಾತ್ರಿ  ದುಷ್ಕರ್ಮಿಗಳು ಕ್ಲಿನಿಕ್ ನ ಕಿಟಕಿ ಬಳಿ ಡಿಸೇಲ್ ಹಾಕಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ.

ಆರೋಗ್ಯ ಕಿನ್ಲಿಕ್  ನ ಕನ್ಸಲ್ ಟೆಂಟ್ ಕೊಠಡಿ ಸೇರಿ ಮೂರು ಕೊಠಡಿಗಳು ಸುಟ್ಟು ಹಾನಿಯಾಗಿದೆ. ಹಾಸಿಗೆ, ಮದ್ದುಗಳು, ಇಲೆಕ್ಟ್ರಾನಿಕ್ ಸೊತ್ತುಗಳು ಬೆಂಕಿ ಅಹುತಿಯಾಗಿ ಅಪಾರ ಹಾನಿ ಸಂಭವಿಸಿದೆ. ಘಟನ ಸ್ಥಳಕ್ಕೆ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸರು,  ಅಗ್ನಿಶಾಮಕ ದಳ, ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Related posts

ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಬಳಂಜ ಆನೆಪಿಲ ರಸ್ತೆಯ ಅಭಿವೃದ್ಧಿಗೆ ರಕ್ಷಿತ್ ಶಿವರಾಮ್ ರವರಿಂದ ಅನುದಾನ ನೀಡುವ ಭರವಸೆ

Suddi Udaya

ರೀಜೆಂಟ್ ಮಳಿಗೆ ಅಳದಂಗಡಿಯಿಂದ- ಗರ್ಡಾಡಿ ಹೊನ್ನಕಟ್ಟೆಗೆ ಸ್ಥಳಾಂತರಗೊಂಡು ಶುಭಾರಂಭ

Suddi Udaya

ಪಟ್ಟೂರು ಹಾಲು ಉತ್ಪಾದಕರ ಸಹಕಾರ ಸಂಘ: ಅಧ್ಯಕ್ಷರಾಗಿ ತಿಮ್ಮಪ್ಪ ಶೆಟ್ಟಿ, ಉಪಾಧ್ಯಕ್ಷರಾಗಿ ಶಶಿಧರ ಗೌಡ ಅವಿರೋಧ ಆಯ್ಕೆ

Suddi Udaya

ಧರ್ಮಸ್ಥಳ ಕ್ಷೇತ್ರ ಹಾಗೂ ಡಾ.ಡಿ. ಹೆಗ್ಗಡೆಯವರ ಜತೆ ನಾವು ನಿಲ್ಲುತ್ತೇವೆ: ಮಾಜಿ ಸಚಿವ ಜನಾರ್ದನ ಪೂಜಾರಿ

Suddi Udaya

ಪುದುವೆಟ್ಟು: ಮಡ್ಯದಿಂದ ಹೊಳೆಯವರೆಗಿನ ಪಂಚಾಯತ್ ರಸ್ತೆಯ ಅತಿಕ್ರಮಣ: ಜೆಸಿಬಿ ಮೂಲಕ ಪೊಲೀಸ್ ರಕ್ಷಣೆಯೊಂದಿಗೆ ಗ್ರಾಮ ಪಂಚಾಯತ್ ನಿಂದ ತೆರವು ಕಾರ್ಯ

Suddi Udaya
error: Content is protected !!