ಧರ್ಮಸ್ಥಳ : ಧರ್ಮಸ್ಥಳದಲ್ಲಿ ನವರಾತ್ರಿ ಸಂದರ್ಭದಲ್ಲಿ ಮಂಗಳೂರು ಅರ್ಕುಳದ ಪವಿತ್ರ ವಿನಯ್ ಮಯ್ಯ ಮತ್ತು ಅವರ ಮಗಳು ಕುಮಾರಿ ಇಂಚರ ಹಾಗೂ ಟಿ.ವಿ. ಗಿರಿ ಎರಡು ಗಂಟೆಗಳ ಕಾಲ ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.
ಹಿಮ್ಮೇಳದಲ್ಲಿ ತಬಲಾವಾದಕರಾಗಿ ವಿವೇಕ್ ಬಾಳಿಗ, ಕೀಬೋರ್ಡ್ ಅಮ್ಮುಮಾಸ್ಟರ್ ಕಾಸರಗೋಡು ಮತ್ತು ಕಮಲಾಕ್ಷ ಗುಡಿಗಾರ್, ರಿದಂಪ್ಯಾಡ್ ವಾದಕರಾಗಿ ಪ್ರದೀಪ್ ಕಾಸರಗೋಡು ಸಹಕರಿಸಿದರು.
ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಪೂಜೆ ನಡೆಯಿತು.
ಇಂದು ರಾತ್ರಿ ಮೈಸೂರಿನ ಕುಮಾರಿ ಮಾನ್ಸಿ ಭಕ್ತಿ ಸಂಗೀತ ಹಾಡಿದರು. ಬುಧವಾರ ಮಂಗಳೂರಿನ ಮಾಸ್ಟರ್ ಆಗಮ ಪೆರ್ಲ ಅವರಿಂದ ಕರ್ನಾಟಕ ಶಾಸ್ತ್ರಿಯ ಸಂಗೀತ ಕಾರ್ಯಕ್ರಮವಿದೆ.
ಅ. 19 ವರೆಗೆ ಪ್ರತಿದಿನ ಸಂಜೆ ಆರು ಗಂಟೆಯಿಂದ ಎಂಟು ಗಂಟೆ ವರೆಗೆ ನಾಡಿನ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.












