November 7, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾವೂರು: ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ-ಬಡೆಕ್ಕಾವುಗುತ್ತು ರಕ್ಷಿತ್‌ಗೆ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು

ಬೆಳ್ತಂಗಡಿ: ನಾವೂರು ಪೇಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ. ಪ್ರದೀಪ ಅವರ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾವೂರು ಗ್ರಾಮದ ಬಡೆಕ್ಕಾವುಗುತ್ತು ರಕ್ಷಿತ್ ಅವರಿಗೆ ಮಂಗಳೂರಿನ ೩ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ನ.5ರಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ನಾವೂರು ಗ್ರಾಮದ ಡಾ.ಪ್ರದೀಪ್ ಅವರ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ತನ್ನನ್ನು ಸಿಲುಕಿಸುವ ಯತ್ನಗಳು ನಡೆಯುತ್ತಿದೆ. ನಾವೂರು ಗ್ರಾಮದ ಬಡೆಕ್ಕಾವುಗುತ್ತು ದೈವಸ್ಥಾನದ ಧರ್ಮದರ್ಶಿಯಾಗಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇನೆ. ಆ.6ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 009/9096ರ ಪ್ರಕರಣದಲ್ಲಿ ನನ್ನನ್ನು ಸುಳ್ಳು ಆರೋಪದ ಮೇಲೆ ಸಿಲುಕಿಸಲಾಗುತ್ತಿದೆ.ಈ ಕೃತ್ಯವನ್ನು ನಾನು ಮಾಡಿಲ್ಲ. ಕೃತ್ಯ ಎಸಗಲು ಯಾರಿಗೂ ಪ್ರಚೋದನೆ ನೀಡಿಲ್ಲ, ಪೊಲೀಸರು ಯಾವುದೇ ಕ್ಷಣದಲ್ಲಿ ನ್ನು ಬಂಧಿಸಬಹುದೆಂಬ ಆತಂಕವಿದೆ. ಆದ್ದರಿಂದ ಪ್ರಕರಣದ ವಿಚಾರಣೆ ಮುಗಿಯುವವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ರಕ್ಷಿತ್ ತಮ್ಮ ನ್ಯಾಯವಾದಿ ಮಯೂರಕೀರ್ತಿ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ಸಂತ್ರಸ್ತ ಡಾ. ಪ್ರದೀಪ್ ಪರ ವಕೀಲರಾದ ಬಿ.ಕೆ. ಧನಂಜಯ ರಾವ್ ಹಾಗೂ ಸುಬ್ರಹ್ಮಣ್ಯ ಕುಮಾರ್ ಅಗರ್ತ ಮತ್ತು ಜಿನೇಂದ್ರ ಜೈನ್ ಅವರು ಆಕ್ಷೇಪ ಮಂಡಿಸಿ, ಇದೊಂದು ಆತಂಕ ಸೃಷ್ಟಿಸುವ ದೊಡ್ಡ ಘಟನೆ ನಾವೂರಿನಲ್ಲಿ ನಡೆದಿದೆ. ಕ್ಲಿನಿಕ್ ನಡೆಸುತ್ತಿರುವ ಡಾ.ಪ್ರದೀಪ್ ಅವರ ಜೀವ ಮತ್ತು ಜೀವನಕ್ಕೆ ಬೆದರಿಕೆ ಇದೆ. ಗಂಭೀರ ಸ್ವರೂಪದ ಅಪರಾಧ ಇದಾಗಿದೆ. ಈ ಕೃತ್ಯದಲ್ಲಿ ರಕ್ಷಿತ್ ಅವರು ನೇರ ಭಾಗಿಯಾಗಿರುವ ಸಂಶಯ ಇದೆ. ಅವರು ಕೃತ್ಯಕ್ಕೆ ಸಂಚು ರೂಪಿಸಿದ ಬಗ್ಗೆ, ತನಿಖಾಧಿಕಾರಿಗೆ ಸಾಕ್ಷಿ ಲಭ್ಯವಾಗಿದೆ. ಪ್ರಬಲ ವ್ಯಕ್ತಿಯಾಗಿರುವ ರಕ್ಷಿತ್ ಅವರು ದೈವ ಮತ್ತು ದೇವರ ಹೆಸರಿನಲ್ಲಿ ಸಾಕ್ಷಿಗಳನ್ನು ಬೆದರಿಸುವ ಸಾಧ್ಯತೆ ಇದೆ. ಸಾಕ್ಷ್ಯಗಳನ್ನು ನಾಶ ಪಡಿಸುವ ಸಾಧ್ಯತೆಯೂ ಇದೆ. ಗಂಭೀರ ಸ್ವರೂಪದ ಘಟನೆಯಲ್ಲಿ ಪಾತ್ರವಾಗಿರುವ ವ್ಯಕ್ತಿಗೆ ಈ ಹಂತದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ಕೆಟ್ಟ ಸಂದೇಶ ನೀಡಿದಂತಾಗುತ್ತದೆ ಎಂದು ವಾದಿಸಿದ್ದರು. ಎರಡು ಕಡೆಯವರ ವಾದ- ಪ್ರತಿವಾದ ಆಲಿಸಿರುವ ನ್ಯಾಯಾಧೀಶರು ನ.೫ರಂದು ಬಡೆಕ್ಕಾವುಗುತ್ತು ರಕ್ಷಿತ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುವುದಾಗಿ ವರದಿಯಾಗಿದೆ.

Related posts

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಬಿಸಿಎ ವಿಭಾಗದಿಂದ ಎನಿಗ್ಮಾ- 2024

Suddi Udaya

ಉಜಿರೆ: ಮುಂಡತ್ತೋಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ

Suddi Udaya

ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರ ಪ್ರಮಾಣ ವಚನ: ಶಿರ್ಲಾಲು ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಗೆ ಇಂಗ್ಲೇಂಡಿನ ಟೀಮ್ ಮಲ್ಟಿ ಅಕಾಡೆಮಿ ಸಂಸ್ಥೆಯ ಸಿ.ಇ.ಒ ಭೇಟಿ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 15ನೇ ವಾರ್ಷಿಕ ಸಾಮಾನ್ಯ ಸಭೆ: ರೂ. 308.58 ಲಕ್ಷ ನಿವ್ವಳ ಲಾಭ : ಆತ್ಮಶಕ್ತಿಯ ನಿರಂತರ ಸಾಧನೆಗೆ ಸದಸ್ಯರ ಶ್ಲಾಘನೆ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ಕಲ್ಪತರು ನರ್ಸಿಂಗ್ ಕಾಲೇಜಿನ 22ನೇ ತಂಡದ ವಿದ್ಯಾರ್ಥಿಗಳಿಗೆ ದೀಪ ಬೆಳಗಿಸುವ ಸಮಾರಂಭ

Suddi Udaya
error: Content is protected !!