ಬೆಳ್ತಂಗಡಿ: ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಗುರುವಾಯನಕೆರೆ ಶಾಖೆ ಬೆಳ್ತಂಗಡಿ ಶ್ರೀರಾಮ್ ಕಾಂಪ್ಲೆಕ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ಲಕ್ಷ್ಮಿ ಪೂಜೆಯು ಪ್ರಕಾಶ್ ಆಚಾರ್ಯ ವೇಣೂರು ಇವರ ಪೌರೋಹಿತ್ವದಲ್ಲಿ ನ.9ರಂದು ನಡೆಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಮಂಜುನಾಥ ಆಚಾರ್ಯ ಅಳದಂಗಡಿ, ಪ್ರಭಾರ ಶಾಖಾ ವ್ಯವಸ್ಥಾಪಕರಾದ ಧನಂಜಯ ಆಚಾರ್ಯ, ಸಿಬ್ಬಂದಿಗಳಾದ ಸುಶಾಂತ್, ಯಜ್ಞೇಶ್, ಸುಶ್ಮಿತಾ ಎಸ್, ಕಟ್ಟಡದ ಮಾಲಕರಾದ ಮುಖೇಶ್ ಯೋಗೀಶ್ ಆರ್. ನಾಯಕ್, ಚಿನ್ನಾಭರಣ ಮೌಲ್ಯಮಾಪಕ ಗಣೇಶ ಆಚಾರ್ಯ, ಜನತಾನಿಧಿ ಸಂಗ್ರಹಕರಾದ ಗೌರಿ ಪ್ರಸಾದ್ ಆಚಾರ್ಯ ರೇವತಿ ಜಯರಾಮ್ ಆಚಾರ್ಯ, ಸಂಘ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯ ಗ್ರಾಹಕರು ಉಪಸ್ಥಿತರಿದ್ದರು.















