November 17, 2026
ಧಾರ್ಮಿಕ

ಕೊಯ್ಯೂರು ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವ ಮತ್ತು ಅಭಿವೃದ್ಧಿ ಯೋಜನೆ ಪೂರ್ವಭಾವಿಯಾಗಿ ಪ್ರಶ್ನಾಚಿಂತನೆ

ಕೊಯ್ಯೂರು : ನ.16. ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವ ಮತ್ತು ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಪ್ರಶ್ನಾಚಿಂತನೆ ಹಾಗೂ ಸಮಾಲೋಚನೆ ಸಭೆ ನ.16.ಕೊಯ್ಯೂರು ದೇವಸ್ಥಾನದಲ್ಲಿ ನಡೆಯಿತು.

ಕ್ಷೇತ್ರದ ತಂತ್ರಿಗಳಾದ ಕೊಯ್ಯೂರು ಶ್ರೀ ನಂದ ಕುಮಾರ್ ಅವರ ನೇತೃತ್ವದಲ್ಲಿ ಹಾಗೂ ದೈವಜ್ಞರಾದ
ಶ್ರೀನಿವಾಸ ಭಟ್ ಕೊಂಡೆಜಾಲು ಮತ್ತು ರಾಘವೇಂದ್ರ ಭಟ್ ಮುಟ್ಲುಪಾಡಿ ಅವರ ಮಾರ್ಗದರ್ಶನದಂತೆ 2027ರ ಮಾ.10 ರಿಂದ ಮಾ.14 ರವರೆಗೆ ಬ್ರಹ್ಮ ಕಲಶೋತ್ಸವ ಹಾಗೂ ನಂತರ ವರ್ಷಾವಧಿ ಜಾತ್ರಾ ಮಹೋತ್ಸವ ವಿಧಿವತ್ತಾಗಿ


ದೇವಸ್ಥಾನದಲ್ಲಿ ನಡೆಯುತ್ತದೆ ಎಂದು ತಿಳಿಸಿದರು. ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಪ್ರಶ್ನಾಚಿಂತನ ಕಾರ್ಯಕ್ರಮ ಮತ್ತು ಸಮಾಲೋಚನ ಸಭೆಯಲ್ಲಿ ಭಾಗವಹಿಸಿ,


ಕೊಯ್ಯೂರು ಶ್ರೀ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಂಪ್ರತಿ ವಾರ್ಷಿಕ ಜಾತ್ರಾ ಮಹೋತ್ಸವ ವಿಧಿವತ್ತಾಗಿ ನಡೆಯುತ್ತದೆ. ಅದರೇ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮ ಮಾತ್ರ 12 ವರ್ಷಕ್ಕೊಮ್ಮೆ ನಡೆಯುವುದು. ಈ ಪುಣ್ಯ ಕಾರ್ಯದಲ್ಲಿ ಗ್ರಾಮದ ಭಕ್ತಾದಿಗಳು ಎಲ್ಲಾ ರೀತಿಯಿಂದಲೂ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿ,ಬ್ರಹ್ಮ ಕಲಶೋತ್ಸವ ಮಾದರಿಯಾಗ ಬೇಕು.
ನನ್ನ ವೈಯುಕ್ತಿಕ ಹಾಗೂ ದಾನಿಗಳ ಕಡೆಯಿಂದಲೂ ಆರ್ಥಿಕವಾಗಿ ಸಹಾಯ ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದರು.
ಸರಕಾರದಿಂದ ಹೆಚ್ಚಿನ ಅನುದಾನವನ್ನು ಆದ್ಯತೆಯ ಮೇಲೆ ದೊರಕಿಸಿ ಕೊಡುವ ಪ್ರಯತ್ನ ಮಾಡುತ್ತೇನೆ ಹಾಗೂ ನನ್ನ ವೈಯಕ್ತಿಕ ಮತ್ತು ದಾನಿಗಳ ಮನೆ,ಮನೆಗೆ ಭೇಟಿಯಾಗುವ ಮೂಲಕವೂ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದ ಯಶಸ್ವಿಗೆ ರಾಜಕೀಯ ಬಿಟ್ಟು ಶ್ರಮಿಸುತ್ತವೆ. ಗ್ರಾಮದ ಭಕ್ತಾದಿಗಳು ಹೆಚ್ಚಿನ ಜವಾಬ್ದಾರಿಯಿಂದ ಕೈ ಜೋಡಿಸಬೇಕು ಎಂದು ಬೆಳ್ತಂಗಡಿ ತಾಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಸಮಾಲೋಚನೆ ಸಭೆಯಲ್ಲಿ ಕ್ಷೇತ್ರದ ಪರವಾಗಿ ಮನವಿಯನ್ನು ಮಾಡಿದರು.
ಆಡಳಿತ ಮೊಕ್ತೇಸರರಾದ ಕೆ.ಬಿ.ಹರೀಶ್ಚಂದ್ರ ಬಲ್ಲಾಳ್ ಕೊಯ್ಯೂರು ಗುತ್ತು,ದೇವಸ್ಥಾನದ
ಪ್ರಧಾನ ಅರ್ಚಕರಾದ ಅಶೋಕ್ ಕುಮಾರ್ ಭಾಂಗೀಣ್ಣಾಯ, ಕೊಯ್ಯೂರು ಸಿ.ಎ.ಬ್ಯಾಂಕು ಕಾರ್ಯನಿರ್ವಾಹಣಾಧಿಕಾರಿ ಅನಂತ ಕೃಷ್ಣ ಭಟ್ ಕೊಯ್ಯೂರು,
ಮಾಧವ ಗೌಡ ಬೆಲ್ಡೆ,ಹಿರಿಯರಾದ ದುಗ್ಗೇ ಗೌಡ,ತಿಮ್ಮಯ್ಯ ಗೌಡ,
ಭಜನಾ ಮಂಡಳಿ ಅಧ್ಯಕ್ಷರು ,ಪದಾಧಿಕಾರಿಗಳು ಕೊಯ್ಯೂರು ಗ್ರಾಮದ ಭಕ್ತಾದಿಗಳು ಮತ್ತಿತರರು ಉಪಸ್ಥಿತರಿದ್ದರು.ದಿನೇಶ್ ಗೌಡ ಪೂರ್ಯಾಳ ನಿರೂಪಣೆ ಮಾಡಿದರು. ಯಶವಂತ ಗೌಡ ಪೂರ್ಯಾಳ ವಂದಿಸಿದರು.

Related posts

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಓಣಂ ಆಚರಣೆ

Suddi Udaya

ಹುಣ್ಸೆಕಟ್ಟೆ ಕಡೆಮಾರು ನಾಗಬನದಲ್ಲಿ ನಾಗದೇವರಿಗೆ ಕ್ಷೀರಾಭಿಷೇಕ, ಮಹಾಪೂಜೆ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಷಷ್ಠಿ ಮಹೋತ್ಸವ, ಮಹಾರಥೋತ್ಸವ

Suddi Udaya

ಪಡ್ಡಂದಡ್ಕ: ಮಂಜನಬೆಟ್ಟು ಶ್ರೀ ನಾಗಬ್ರಹ್ಮ ಪರಿವಾರ ಸಾನಿಧ್ಯಗಳ ಪುನರ್ ಪ್ರತಿಷ್ಠೆ-ಎ.5 ನೂತನ ಶಿಲಾಮಯ ಶ್ರೀ ನಾಗದೇವರ ಬಿಂಬಗಳ ಜಲಾಧಿವಾಸ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಭಗವದ್ಗೀತಾ ತರಗತಿ ಪ್ರಾರಂಭ

Suddi Udaya

ಮುಂಡೂರು ಶ್ರೀ ಉದ್ಭವ ಗಣಪತಿ ಶ್ರೀ ನಾಗಾಂಬಿಕಾ ದೇವಸ್ಥಾನದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya
error: Content is protected !!