November 19, 2026
ಅಪರಾಧ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿವರದಿಸಮಸ್ಯೆ

ಅಕ್ರಮ ಕೂಟ ಸೇರಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ: ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಬೆಂಬಲಿಗರಿಗೆ ಜಾಮೀನು ಮಂಜೂರು

ಬೆಳ್ತಂಗಡಿ: ಉಜಿರೆಯಲ್ಲಿ ಅಕ್ರಮ ಕೂಟ ಸೇರಿ ಘೋಷಣೆ ಕೂಗುತ್ತಾ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ ಎದುರಿಸುತ್ತಿರುವ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮುಖ್ಯಸ್ಥ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಮತ್ತಿತರರಿಗೆ ಬೆಳ್ತಂಗಡಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಪಾಂಗಾಳ ಕ್ರಾಸ್ ಬಳಿ ಕುಡ್ಲ ರಾಂಪೇಜ್ ಯೂ ಟ್ಯೂಬ್‌ನ ಅಜಯ್ ಬಿ, ಸಂಚಾರಿ ಸ್ಟುಡಿಯೋದ ಸಂತೋಷ್ ಮತ್ತು ಯುನೈಟೆಡ್ ಮಿಡಿಯಾದ ಅಭಿಷೇಕ್ ಅವರು ಅಪರಿಚಿತ ವ್ಯಕ್ತಿಗಳಿಂದ ಹಲ್ಲೆಗೊಳಗಾಗಿ ಉಜಿರೆ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವೇಳೆ ಅಲ್ಲಿಗೆ ಆಗಮಿಸಿದ್ದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಹರೀಶ್, ನವೀನ್ ಪೂಜಾರಿ, ಸಮೀರ್ ಎಂ.ಡಿ., ಜಯಂತ್ ಟಿ, ತನುಷ್ ಶೆಟ್ಟಿ, ಮನೋಜ್ ಕುಮಾರ್, ಅನಿಲ್ ಕುಮಾರ್, ರಂಜನ್, ಉದಯ, ಗಣೇಶ್ ಶೆಟ್ಟಿ, ಶ್ರೀನಿವಾಸ ಗೌಡ, ವೆಂಕಪ್ಪ ಕೋಟ್ಯಾನ್, ರಾಜೇಶ್ ಭಟ್, ಶೇಖರ್ ಹೆಗ್ಡೆ, ಮೋಹನ್ ಕುಮಾರ್ ವಿ. ಶೆಟ್ಟಿ ಮತ್ತು ಹರೀಶ್ ಮಣಿಯಾಣಿ ಎಂಬವರು ಸುವರ್ಣ ನ್ಯೂಸ್ ಚಾನೆಲ್ ವರದಿಗಾರ ಹಾಗೂ ಕ್ಯಾಮರಾಮೆನ್ ಹೇಳಿಕೆ ಕೊಡುವಂತೆ ಕೇಳಿಕೊಂಡಾಗ ಮಾತಿನ ಚಕಮಕಿ ನಡೆದು, ನೂಕು ನುಗ್ಗಲು ಉಂಟಾಗಿತ್ತು.

ಈ ವೇಳೆ ಪೊಲೀಸರು ಅಕ್ರಮ ಕೂಟ ಸೇರಿ ಕಾನೂನು ಬಾಹಿರ ಚಟುವಟಿಕೆ ಮಾಡಬಾರದಂತೆ ಹೇಳಿದರೂ ಕೇಳದೆ ಮಹೇಶ್ ಶೆಟ್ಟಿ, ಮತ್ತಿತರರು ಕಾನೂನು ಬಾಹಿರ ಘೋಷಣೆಗಳನ್ನು ಕೂಗುತ್ತಾ ಪೊಲೀಸರ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿದ್ದರು ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 189(2), 221 ಜೊತೆಗೆ 190 ಬಿಎನ್‌ಎಸ್‌ರಡಿ ಪ್ರಕರಣ ದಾಖಲಾಗಿತ್ತು.

ಬಳಿಕ ಪೊಲೀಸರು ತನಿಖೆ ನಡೆಸಿ ಮಹೇಶ್ ಶೆಟ್ಟಿ ತಿಮರೋಡಿ ಮತ್ತಿತರರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಮತ್ತಿತರರಿಗೆ ಬೆಳ್ತಂಗಡಿ ನ್ಯಾಯಾಲಯ ನ.17ರಂದು ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ನ್ಯಾಯವಾದಿ ಸಿರಾಜುದ್ದೀನ್ ಎ. ಜೋಗಿಬೆಟ್ಟು ವಾದಿಸಿದ್ದರು.

Related posts

ಸೌತಡ್ಕದಲ್ಲಿ ಕೆಎಂಎಫ್ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆ ಶುಭಾರಂಭ

Suddi Udaya

ರೆಖ್ಯ ವಿಶ್ವ ಹಿಂದೂ ಪರಿಷತ್, ಬಜರಂಗದಳ ಘಟಕದಿಂದ ಸಾರ್ವಜನಿಕ ಶ್ರೀ ಶನೇಶ್ವರ ಪೂಜೆ ಮತ್ತು ಧಾರ್ಮಿಕ ಸಭೆ

Suddi Udaya

ಜ. 20 ರಂದು ನಡೆಯಲಿರುವ ಗಮಕ ಸಮ್ಮೇಳನ ಶಾಸಕರಿಗೆ ಆಹ್ವಾನ

Suddi Udaya

ಮುಂಡಾಜೆ: ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಅಧ್ಯಯನ ಕೇಂದ್ರ ಉದ್ಘಾಟನೆ

Suddi Udaya

ಅರಣ್ಯ ಇಲಾಖೆ ಬುಡಕಟ್ಟು ಸಮುದಾಯದ ಜೊತೆಗೆ ಸರ್ಕಾರವನ್ನು ಕೂಡ ವಂಚಿಸುತ್ತಿದೆ : ಹರೀಶ್ ಎಳನೀರ್

Suddi Udaya

ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

Suddi Udaya
error: Content is protected !!