November 19, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನಾವೂರು ಕ್ಲಿನಿಕ್ ಗೆ ಬೆಂಕಿ ಹಚ್ಚಿದ ಪ್ರಕರಣ : ಆರೋಪಿಗಳಿಗೆ ಜಾಮೀನು ಮಂಜೂರು

ಬೆಳ್ತಂಗಡಿ: ನಾವೂರು ಗ್ರಾಮದ ನಾವೂರು ಪೇಟೆಯ ಸ್ವಾತಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ. ಪ್ರದೀಪ್ ಆಟಿಕುಕ್ಕೆ ಅವರ ಆರೋಗ್ಯ ಕ್ಲಿನಿಕ್ ಗೆ ಅ.6ರಂದು ತಡರಾತ್ರಿ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸೈಂಬಂಧಿಸಿದಂತೆ ಬೆಳ್ತಂಗಡಿ ಠಾಣಾ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ನಾವೂರು ನಿವಾಸಿಗಳಾದ ರವಿ ಪೂಜಾರಿ(31), ಸುರೇಶ್ ಪಿ.ಎನ್. ಇಂಚರ (44) ಮತ್ತು ದಿನೇಶ್ ಪ್ರಭು(51) ಅವರಿಗೆ ಮಂಗಳೂರು ನ್ಯಾಯಾಲಯ ನ.16ರಂದು ಜಾಮೀನು ಮಂಜೂರು ಮಾಡಿದೆ.

ಹಲವು ವರ್ಷಗಳಿಂದ ನಾವೂರಿನ ಶೇಖರ ಪೂಜಾರಿಯವರ ಮಾಲಕತ್ವದ ಸ್ವಾತಿ ಬಿಲ್ಡಿಂಗ್‌ನಲ್ಲಿ ನಡೆಸುತ್ತಿರುವ ಆರೋಗ್ಯ ಕ್ಲಿನಿಕ್‌ಗೆ ಅ.6ರಂದು ರಾತ್ರಿ ಯಾರೋ ಕಿಡಿಗೇಡಿಗಳು ದುರುದ್ದೇಶದಿಂದ ಯಾವುದೋ ದಹನ ಶೀಲ ದ್ರವವನ್ನು ಉಪಯೋಗಿಸಿ ಕಿಟಕಿಯ ಮೂಲಕ ಒಳ ಸುರಿದು ಬೆಂಕಿ ಹಾಕಿ ಸುಟ್ಟಿದ್ದರು.

ಕೃತ್ಯದ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.7ರಂದು ಅಪರಾಧ ಕ್ರಮಾಂಕ 112/2026ರಂತೆ ಬಿಎನ್‌ಸ್ 326 (ಎಫ್), 326(ಜಿ) ಮತ್ತು 324(5) ರಡಿ ಪ್ರಕರಣ ದಾಖಲಾಗಿತ್ತು.  ರವಿ ಪೂಜಾರಿ, ಸುರೇಶ್ ಪಿ.ಎನ್. ಇಂಚರ ಮತ್ತು ದಿನೇಶ್ ಪ್ರಭು ಅವರನ್ನು ಬಂಧಿಸಲಾಗಿತ್ತು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳು ಅವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಮಂಗಳೂರು ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಪ್ರಮುಖ ಆರೋಪಿ ರವಿ ಪೂಜಾರಿ ಪರ ವಕೀಲ ಅರುಣ್ ಬಂಗೇರ ವಾದಿಸಿದ್ದು ಎರಡನೇ ಆರೋಪಿ ಸುರೇಶ್ ಇಂಚರ ಮತ್ತು ಮೂರನೇ ಆರೋಪಿ ದಿನೇಶ್ ಪ್ರಭು ಪರ ವಕೀಲ ಮಯೂರಕೀರ್ತಿ ವಾದಿಸಿದ್ದರು.

Related posts

ಕಳೆಂಜ ಗ್ರಾ.ಪಂ.ನಲ್ಲಿ ಎಸ್.ಸಿ, ಎಸ್.ಟಿ ಫಲಾನುಭವಿಗಳಿಗೆ ನೀರಿನ ಟ್ಯಾಂಕ್ ಹಾಗೂ ವಿಕಲಚೇತನ ಫಲಾನುಭವಿಗಳಿಗೆ ಫ್ಯಾನ್ ವಿತರಣೆ

Suddi Udaya

ಕಳೆಂಜ ಗ್ರಾಮ ಅರಣ್ಯ ಸಮಿತಿ ವಾರ್ಷಿಕ ಮಹಾ ಮಂಡಳಿ ಸಭೆ

Suddi Udaya

ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದ ಚಿನ್ಮಯ್ ಗೆ ಡಿ ವೀರೇಂದ್ರ ಹೆಗ್ಗಡೆ ದಂಪತಿಗಳು, ಹಾಗೂ ಡಿ. ಹರ್ಷೇಂದ್ರ ಕುಮಾರ್ ರವರಿಂದ ಅಭಿನಂದನೆ

Suddi Udaya

ಮಡಂತ್ಯಾರು ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಕಡಿರುದ್ಯಾವರ ಗ್ರಾ.ಪಂ. ಗ್ರಾಮ ಸಭೆ

Suddi Udaya

ಚಾಲಕನ ನಿಯಂತ್ರಣ ತಪ್ಪಿ ಟಿ.ಟಿ ವಾಹನ ರಸ್ತೆಗೆ ಪಲ್ಟಿ: ಉಜಿರೆಯ ಮಾಲಾಧಾರಿಗಳಿಗೆ ಗಾಯ

Suddi Udaya
error: Content is protected !!