November 19, 2026
ಅಪರಾಧ ಸುದ್ದಿತಾಲೂಕು ಸುದ್ದಿ

ಮಡಂತ್ಯಾರು ಸಾನಿಧ್ಯ ಜುವೆಲ್ಲರ‍್ಸ್‌ನಿಂದ ರೂ.4.40 ಲಕ್ಷದ ಚಿನಾಭರಣ ಕಳವು-ಉಂಗುರ ಖರೀದಿಯ ನೆಪದಲ್ಲಿ ಬಂದ ಅಪರಿಚಿತ ವ್ಯಕ್ತಿಗಳ ಕೃತ್ಯ ಸಿಸಿ ಕ್ಯಾಮರದಲ್ಲಿ ಸೆರೆ

ಮಡಂತ್ಯಾರು: ಅಪರಿಚಿತ ವ್ಯಕ್ತಿಗಳಿಬ್ಬರು ಚಿನ್ನದ ಉಂಗುರ ಖರೀದಿಸುವ ನೆಪದಲ್ಲಿ ಮಡಂತ್ಯಾರು ಪೇಟೆಯ ಮುಖ್ಯ ರಸ್ತೆ ಬದಿಯಲ್ಲಿರುವ ಸಾನಿಧ್ಯ ಜುವೆಲ್ಲರ‍್ಸ್‌ಗೆ ಬಂದು ಚಿನ್ನದ ಅಂಗಡಿಯಿಂದ ಸುಮಾರು 4.40 ಲಕ್ಷ ಮೌಲ್ಯದ 35 ಗ್ರಾಂ ತೂಕದ 5 ರಿಂದ 6 ಚಿನ್ನದ ಬ್ರಾಸ್ಲೆಟ್‌ಗಳಿದ್ದ ಪ್ಲಾಸ್ಟಿಕ್ ಪ್ಯಾಕೇಟನ್ನು ಅಪಹರಿಸಿ ಪರಾರಿಯಾದ ಘಟನೆ ನ.16ರಂದು ಮಡಂತ್ಯಾರು ಪೇಟೆಯಲ್ಲಿ ನಡೆದಿದೆ.

ಮಡಂತ್ಯಾರು ಪೇಟೆಯ ಮುಖ್ಯ ರಸ್ತೆಯಲ್ಲಿರುವ ರಾಜೇಶ್ (43ವ) ಎಂಬವರ ಮಾಲಕತ್ವದ ಸಾನಿಧ್ಯ ಜುವೆಲ್ಲರೀಸ್‌ನಿಂದ ಈ ಸೊತ್ತುಗಳನ್ನು ಕಳವು ಮಾಡಲಾಗಿದೆ.

ಪಾರೆಂಕಿ ಗ್ರಾಮದ ಮಡಂತ್ಯಾರು ಕಾನ್ವೆಂಟ್ ರಸ್ತೆಯಲ್ಲಿ ವಾಸವಾಗಿರುವ ರಾಜೇಶ್ ಅವರು ಮಡಂತ್ಯಾರು ಪೇಟೆಯ ಮುಖ್ಯ ರಸ್ತೆಯ ಆರ್.ಕೆ ಕಾಂಪ್ಲೇಕ್ಸ್‌ನಲ್ಲಿ ಕೆಲ ವರ್ಷಗಳಿಂದ ತನ್ನ ಮಾಲಕತ್ವದ ಸಾನಿಧ್ಯ ಜುವೆಲ್ಲರೀಸ್ ಎಂಬ ಚಿನ್ನಾಭರಣದ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

ನ.16 ರಂದು ಅವರು ತನ್ನ ಸಾನಿಧ್ಯ ಜ್ಯುವೆಲ್ಲರಿ ಶಾಪ್‌ನಲ್ಲಿದ್ದಾಗ ಸಂಜೆ ಸುಮಾರು ಗಂಟೆ ೬.೨೫ರ ಅಂದಾಜು ಸಮಯಕ್ಕೆ ಇಬ್ಬರು ಅಪರಿಚಿತ ವ್ಯಕ್ತಿಗಳು ಚಿನ್ನದ ಉಂಗುರ ಖರೀದಿಗೆಂದು ಬಂದಿದ್ದರು. ಚಿನ್ನದ ಉಂಗುರ ತೋರಿಸುತ್ತಿರುವ ಸಂದರ್ಭದಲ್ಲಿ ಕಣ್ತಪ್ಪಿಸಿ ಅಪರಿಚಿತ ವ್ಯಕ್ತಿಗಳು ಜ್ಯುವೆಲ್ಲರಿ ಶಾಪ್‌ನಲ್ಲಿದ್ದ ಸುಮಾರು ರೂ.೪,೪೦,೦೦೦ ಮೌಲ್ಯದ ಅಂದಾಜು ೩೫.೦೦ ಗ್ರಾಂ ತೂಕವಿರುವ ೫ರಿಂದ ೬ ಚಿನ್ನದ ಬ್ರಾಸ್ಲೆಟ್‌ಗಳಿದ್ದ ಪ್ಲಾಸ್ಟಿಕ್ ಪ್ಯಾಕೆಟ್‌ನ್ನು ಕಳವು ಮಾಡಿಕೊಂಡು ಅಲ್ಲಿಂದ ಪರಾರಿಯಾಗಿದ್ದರು.

ರಾತ್ರಿ ರಾಜೇಶ್ ಅವರು ಅಂಗಡಿಯಲ್ಲಿ ಚಿನ್ನಾಭರಣಗಳನ್ನು ಜೋಡಿಸುವ ಸಂದರ್ಭ ಚಿನ್ನದ ಬ್ರಾಸ್ಲೆಟ್ ಇದ್ದ ಪ್ಲಾಸ್ಟಿಕ್ ಪ್ಯಾಕೇಟ್‌ಗಳು ಕಳವಾಗಿರುವುದು ಬೆಳಕಿಗೆ ಬಂದಿತ್ತು. ಕೂಡಲೇ ಅಂಗಡಿಯ ಒಳಭಾಗದಲ್ಲಿರುವ ಸಿಸಿ ಟಿವಿಯನ್ನು ಪರಿಶೀಲಿಸಿದಾಗ ಶಾಪ್‌ಗೆ ಉಂಗುರ ಖರೀದಿಗಾಗಿ ಬಂದಿದ್ದ ಅಪರಿಚಿತ ವ್ಯಕ್ತಿಗಳು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದೆ. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Related posts

ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಕನಕದಾಸ ಜಯಂತಿ ಆಚರಣೆ

Suddi Udaya

ಬೆಳ್ತಂಗಡಿ : ಶ್ರೀ ಗುರುದೇವ ಕಾಲೇಜಿನ ಕ್ರೀಡಾಕೂಟ ಉದ್ಘಾಟನೆ

Suddi Udaya

ವೇಣೂರು: ಮನೆಯಲ್ಲಿ ಇಟ್ಟಿದ್ದ ರೂ 2.25 ಲಕ್ಷ ನಗದು ಹಣ ಕಳವು

Suddi Udaya

ವೇಣೂರು : ಟೈಲರ್ ಸಂಜೀವ ಪಾಣೂರು ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ ಸ.ಪ.ಪೂ. ಕಾಲೇಜಿನಲ್ಲಿ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದಿಂದ ಮುಂಡ್ರುಪ್ಪಾಡಿ ಶಾಲೆಗೆ ಪ್ರಿಂಟರ್ ಕೊಡುಗೆ

Suddi Udaya
error: Content is protected !!