July 23, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ದಿವ್ಯಾಂಗರಿಗೆ ಗಾಲಿ ಕುರ್ಚಿ ಗಳ ವಿತರಣೆ

ಕನ್ಯಾಡಿ: ಸೇವಾಭಾರತಿಯ ಅಂಗಸಂಸ್ಥೆಯಾದ ಸೇವಾಧಾಮದಿಂದ ಗುರುತಿಸಲ್ಪಟ್ಟ 5 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣಾ ಕಾರ್ಯಕ್ರಮ ಫೆ.05 ರಂದು ನಡೆಯಿತು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕರ್ನಾಟಕ ಬ್ಯಾಂಕಿನ ಮ್ಯಾನೆಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಮಹಾಬಲೇಶ್ವರ ಎಂ.ಎಸ್ ಗಾಲಿಕುರ್ಚಿಗಳನ್ನು ಹಸ್ತಾಂತರಿಸಿ, ಸೇವಾಭಾರತಿಯು ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ಸಮುದಾಯ ಹಾಗೂ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಮಾಡುವ ನಿರಂತರ ಸೇವೆಯನ್ನು ಶ್ಲಾಘಸಿದರು. 100ನೇ ವರ್ಷದ ಸಂಭ್ರಮಾಚರಣೆಯಲ್ಲಿರುವ ಕರ್ನಾಟಕ ಬ್ಯಾಂಕ್, ಸಮಾಜದ ಕೊರತೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ 1924 ರಿಂದಲೂ ಮಾನವೀಯತೆಯ ಸ್ಪರ್ಶದೊಂದಿಗೆ ಸಮಾಜ ಸೇವಾ ಕಾರ್ಯಗಳಿಗೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿರುತ್ತದೆ ಎಂದರು. ಸೇವಾಭಾರತಿಯ ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಮುಂದಿನ ದಿನಗಳಲ್ಲಿ ಸಹಕರಿಸುವ ಭರವಸೆ ನೀಡಿ, ಫಲಾನುಭವಿಗಳಿಗೆ ವಿಶ್ವಾಸ ಬದುಕಿಗಾಗಿ ಧೈರ್ಯ ತುಂಬಿದರು.

ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಕೆ. ಎನ್ ಜನಾರ್ಧನ್ ಇವರು ಸೇವಾಭಾರತಿಯಿಂದ ನೀಡಿದ ನೀರಿನ ಹಾಸಿಗೆಗೆ ಧನ ಸಹಾಯದ ಚೆಕ್ಕನ್ನು ಫಲಾನುಭವಿಗೆ ಹಸ್ತಾಂತರಿಸಿ, ಸೇವಾಭಾರತಿ ಸಂಸ್ಥೆಯು ದಿವ್ಯಾಂಗರ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ ಹಾಗೂ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಇಂತಹ ಸಂಸ್ಥೆಯ ಪ್ರಯೋಜನ ಪಡೆದು ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸುವಲ್ಲಿ ಸಫಲರಾಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್ ಶಾಖಾ ಪ್ರಬಂಧಕರುಗಳಾದ ವಿನಾಯಕ ಪ್ರಭು, ಪ್ರವೀಣ್, ಪದ್ಮಪ್ರಸಾದ್ ಆಳ್ವ, ಅವಿನಾಶ್ ಕೆ ಹಾಗೂ ಸೇವಾಧಾಮದ ಸಂಚಾಲಕರಾದ ಪುರಂದರ ರಾವ್, ಸಂಸ್ಥೆಯ ಅಧ್ಯಕ್ಷರಾದ ಕೆ ವಿನಾಯಕ ರಾವ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಚರಣ್ ಕುಮಾರ್ ಎಂ ಇವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೆ ಪುರಂದರ ರಾವ್ ಧನ್ಯವಾದ ವಿತ್ತರು.

Related posts

ಜು.21: ವಿದ್ಯಾಶ್ರೀ ಅಡೂರ್ ರವರ ಬಹುನಿರೀಕ್ಷೆಯ ಸಂಕಲನ ಪಯಣ ಬಿಡುಗಡೆ

Suddi Udaya

ಗುರುವಾಯನಕೆರೆ: ನವರಾತ್ರಿ, ದೀಪಾವಳಿ ಹಬ್ಬದ ಪ್ರಯುಕ್ತ ಶ್ರೀ ಶಿವಂ ಟೆಕ್ಸ್‌ಟೈಲ್ಸ್ & ರೆಡಿಮೇಡ್ಸ್‌ನಲ್ಲಿ ಡಿಸ್ಕೌಂಟ್ ಆಫರ್

Suddi Udaya

ಗೇರುಕಟ್ಟೆ : ಕಳಿಯ ಗ್ರಾಮ ಪಂಚಾಯತ್ ನಲ್ಲಿ ಸ್ವಚ್ಛತಾ ಜಾಗೃತಿ ಅಭಿಯಾನ ಕಾರ್ಯಕ್ರಮ

Suddi Udaya

ಉಜಿರೆ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಅಂತರ್ ಜಿಲ್ಲಾ ಈಜು ಸ್ಪರ್ಧೆ

Suddi Udaya

ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ, ವಲಯ ಬಂಟರ ಸಂಘ, ಉಜಿರೆ ಹಾಗೂ ಬಂಟರ ಗ್ರಾಮ ಸಮಿತಿ ಉಜಿರೆ ಮುಂಡಾಜೆ ಮತ್ತು ತೋಟತ್ತಾಡಿ ಇವುಗಳ ಸಹಭಾಗಿತ್ವದಲ್ಲಿ ಉಜಿರೆ ವಲಯ ಬಂಟರ ಕ್ರೀಡಾಕೂಟ

Suddi Udaya

ಜಿಲ್ಲಾಮಟ್ಟದ ವಿದ್ಯಾರತ್ನ ಪ್ರಶಸ್ತಿ ಪುರಸ್ಕೃತೆ ಉಮಾ ಡಿ ಗೌಡರಿಗೆ ಬೆಳ್ತಂಗಡಿ ತಾಲೂಕು ಮುಖ್ಯ ಶಿಕ್ಷಕರ ಸಂಘದಿಂದ ಸನ್ಮಾನ

Suddi Udaya
error: Content is protected !!