September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಸರ್ಕಾರಿ ಇಲಾಖಾ ಸುದ್ದಿ

ಬೆಳ್ತಂಗಡಿ : ಅಕ್ರಮ ಮದ್ಯ ಮಾರಾಟ: ವಾಹನ ಸಹಿತ ರೂ. 3.31ಲಕ್ಷದ ಮದ್ಯ ವಶ

ಬೆಳ್ತಂಗಡಿ: ವಿಧಾನಸಭಾ ಚುನಾವಣೆ-2023 ರ ಸಂಬಂಧ ಯಾವುದೇ ಅಬಕಾರಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಗಸ್ತು ನಡೆಸುತ್ತಿದ್ದಾಗ ಓಡಿಲ್ನಾಳದ ರತ್ನಾಕರ ಎಂಬವರು ಬೆಳ್ತಂಗಡಿ ಕಸಬದ ಕೆಲ್ಲಗುತ್ತು ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ವಶಪಡಿಸಿಕೊಂಡ ಘಟನೆ ಎ.10ರಂದು ನಡೆದಿದೆ.

ಅಬಕಾರಿ ಜಂಟಿ ಆಯುಕ್ತರು ಮಂಗಳೂರು ಹಾಗೂ ಅಬಕಾರಿ ಉಪ ಆಯುಕ್ತರು, ದಕ್ಷಿಣ ಕನ್ನಡ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಮತ್ತು ಅಬಕಾರಿ ಉಪ ಅಧೀಕ್ಷಕರು ಬಂಟ್ವಾಳ ಉಪ ವಿಭಾಗರವರ ಹಾಗೂ ಅಬಕಾರಿ ನಿರೀಕ್ಷಕರು ಬೆಳ್ತಂಗಡಿ ವಲಯರವರ ನಿರ್ದೇಶನದಂತೆ ಈ ಕಾಯಾ೯ಚರಣೆ ನಡೆಯಿತು.
ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, 17,280ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. , ಪರಾರಿಯಾದ ಆರೋಪಿಯ ವಿರುದ್ದ ಮೊಕದ್ದಮೆಯನ್ನು ದಾಖಲಿಸಲಾಗಿದೆ. ವಾಹನ ಹಾಗೂ ಮದ್ಯವನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. ವಾಹನ ಹಾಗೂ ಸೊತ್ತಿನ ಒಟ್ಟು ಮೌಲ್ಯ ಸುಮಾರು 3,31,720/- ಆಗಿದೆ.
ಪ್ರಕರಣವನ್ನು ಸಯ್ಯದ್ ಶಬೀರ್ ಅಬಕಾರಿ ಉಪ ನಿರೀಕ್ಷಕರು ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ

Related posts

ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ತಿಂಗಳ ಸಭೆ ಹಾಗೂ ಆಟಿಡ್ ಒಂಜಿ ವಿಶೇಷ ತಿನಸ್

Suddi Udaya

ಲಾಯಿಲ: ಪುತ್ರ ಬೈಲು ಗ್ರಂಥಾಲಯ ಕಟ್ಟಡಕ್ಕೆ ಶಿಲಾನ್ಯಾಸ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

Suddi Udaya

ಸಿಎ ಬ್ಯಾಂಕಿನ ಮಾಜಿ ಅಧ್ಯಕ್ಷ ದಿ| ಪ್ರಮೋದ್ ಕುಮಾರ್ ರವರಿಗೆ ಬೆಳ್ತಂಗಡಿ ಸಿಎ ಬ್ಯಾಂಕ್ ನಿಂದ ಸಂತಾಪ

Suddi Udaya

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ವಿಶ್ರುತಿ 2k26’ ಕಾರ್ಯಕ್ರಮ

Suddi Udaya

ಶ್ರೀಕ್ಷೇತ್ರ ಧರ್ಮಸ್ಥಳದ ಕ್ಯೂ ಕಾಂಪ್ಲೆಕ್ಸ್ ಶ್ರೀ ಸಾನಿಧ್ಯದ ಸೇವೆಗೆ ವರ್ಷದ ಸಂಭ್ರಮ

Suddi Udaya
error: Content is protected !!