ಪ್ರತಿಯೊರ್ವರ ಕನಸಿನ ಮನೆಗೆ ಸೌಂದರ್ಯದ ಸ್ಪರ್ಶ ನೀಡುವ ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ‘ಕನಸಿನ ಮನೆ’ ಸಂಸ್ಥೆಗೆ 35 ಸಂಭ್ರಮ

Suddi Udaya

ಉಜಿರೆ:1998 ರಲ್ಲಿ ಮರಕ್ಕೆ ಪರ್ಯಾಯವಾಗಿ ಸಿಮೆಂಟಿನಿಂದ ತಯಾರಿಸಲಾದ ಕಟ್ಟಡ ಸಾಮಾಗ್ರಿಗಳನ್ನು ಗ್ರಾಹಕರಿಗೆ ಪರಿಚಯಿಸಿದ ಹೆಮ್ಮೆ ಉಜಿರೆ ಸ್ವ ರಾಜು ಮೇಸ್ತ್ರಿ ಯವರಿಗೆ ಸಲ್ಲುತ್ತದೆ.

ಕಳೆದ 35 ವರ್ಷಗಳ ಹಿಂದೆ ಉಜಿರೆಯಲ್ಲಿ ಲಕ್ಷ್ಮಿ ಇಂಡಸ್ಟ್ರೀಸ್ ಸಂಸ್ಥೆಯನ್ನು ಹುಟ್ಟುಹಾಕಿ ಆ ಮುಖೇನಾ ನೂರಾರು ಮಂದಿಗೆ ಉದ್ಯೋಗ ಕಲ್ಪಿಸಿ ಉದ್ಯಮ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಮುನ್ನಡೆಯುತ್ತಿರುವ ಗ್ರಾಹಕರ ಅತ್ಯಂತ ಪ್ರೀತಿಯ ಸಂಸ್ಥೆಯಾದ ಲಕ್ಷ್ಮೀ ಇಂಡಸ್ಟ್ರೀಸ್ ಸಂಸ್ಥೆಗೆ 35 ವರ್ಷಗಳು ಎ.22 ರಂದು ಪೂರ್ತಿಯಾಗಿ ಸಂಭ್ರಮಾಚರಣೆಯಲ್ಲಿದೆ.

ಕಳೆದ 35 ವರ್ಷಗಳಿಂದ ಸಂಸ್ಥೆಯು ಗುಣಮಟ್ಟದ ವಸ್ತುಗಳನ್ನು ಪೂರೈಸುವುದರೊಂದಿಗೆ,ಗ್ರಾಹಕರ ಪ್ರೀತಿ, ವಿಶ್ವಾಸ, ನಂಬಿಕೆ ಗಳಿಸಿ ಸಮಾಜಮುಖಿಯಾಗಿಯೂ ಗುರುತಿಸಿಕೊಂಡಿದೆ.

ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ನಲ್ಲಿ 35 ವರ್ಷಗಳ ಹಿಂದೆ ಮರಕ್ಕೆ ಪರ್ಯಾಯವಾಗಿ ಸಿಮೆಂಟಿನಿಂದ ತಯಾರಿಸಿದ ಕಿಟಕಿ, ದಾರಂದಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗೆಡಯವರು ಧರ್ಮಸ್ಥಳದ ವಸತಿ ಗೃಹಗಳಿಗೆ ಉಪಯೋಗಿಸಿ ಸಂಸ್ಥೆಯು ಬಾನೆತ್ತರಕ್ಕೆ ಬೆಳಯಲು ಅವರ ಕೊಡುಗೆ ಅಪಾರವಾದ್ದು ಎಂದು ಮೋಹನ್ ಕುಮಾರ್ ತಿಳಿಸಿದರು.

ಸಂಸ್ಥೆಯಲ್ಲಿ ನೂರಾರು ಮಂದಿಗೆ ಉದ್ಯೋಗ ಕಲ್ಪಿಸಿ, ಅವರ ಬದುಕಿಗೆ ಬೆಳಕಾದವರು ಸ್ವ.ರಾಜು ಮೆಸ್ತ್ರಿಯವರು. ನಂತರದ ದಿನಗಳಲ್ಲಿ ಅತ್ಯಂತ ಯಶಸ್ವಿಯಾಗಿ, ಇನ್ನಷ್ಟು ಗಟ್ಟಿಯಾಗಿ ಸಂಸ್ಥೆಯನ್ನು ಕಟ್ಟಿ ಜಿಲ್ಲೆಯ ಪ್ರಸಿದ್ದ ಉದ್ಯಮ ಸಂಸ್ಥೆಯಲ್ಲಿ ಒಂದಾಗಿ ಮಾಡಿದವರು ಸಮಾಜ ಸೇವೆಯ ಮುಖೇನಾ ಗುರುತಿಸಿಕೊಂಡಿರುವ ಪ್ರಸಿದ್ಧ ಉದ್ಯಮಿ ಮೋಹನ್ ಕುಮಾರ್ ಉಜಿರೆಯವರು.

Leave a Comment

error: Content is protected !!