July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಚಾರ್ಮಾಡಿ ಘಾಟಿಯ 7ನೇ ತಿರುವಿನಲ್ಲಿ ವಾಹನ ಸವಾರರಲ್ಲಿ ಭೀತಿ ಹುಟ್ಟಿಸಿದ ಒಂಟಿ ಸಲಗ

ಚಾರ್ಮಾಡಿ ಘಾಟಿಯ 7‌ನೇ ತಿರುವಿನಲ್ಲಿ ಗುರುವಾರ ಬೆಳಿಗ್ಗೆ 9ಗಂಟೆ ಹೊತ್ತಿಗೆ ಕಾಡಾನೆ ವಾಹನ ಸವಾರರಿಗೆ ಕಂಡು ಬಂದಿದೆ.ಸಲಗವು ರಸ್ತೆ ದಾಟುತ್ತಿದ್ದ ಕಾರಣ ಎರಡು ಕಡೆ ಸ್ವಲ್ಪ ಹೊತ್ತು ವಾಹನಗಳು ಸಾಲುಗಟ್ಟಿ ನಿಂತವು. ಈ ವೇಳೆ ವಾಹನ ಸವಾರರು ನಿರಂತರ ಹಾರ್ನ್ ಬಾರಿಸಿ ಕೆಲವರು ಫೋಟೋ ತೆಗೆಯಲು ಮುಂದಾದಾಗ ಆನೆ ಒಂದಿಷ್ಟು ಆಕ್ರೋಶಗೊಂಡ ಘಟನೆ ನಡೆದಿರುವ ಕುರಿತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಘಾಟಿ ರಸ್ತೆ ಬದಿ ಒಂಟಿ ಸಲಗ ಕಂಡುಬಂದಿರುವುದು ವಾಹನ ಸವಾರರಲ್ಲಿ ಭೀತಿ ಮೂಡಿಸಿದೆ.ಒಂಟಿ ಸಲಗ ಘಾಟಿ ಪರಿಸರದಲ್ಲಿ ಸಂಚರಿಸುತ್ತಿರುವ ಕುರಿತು ಚಾರ್ಮಾಡಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಗೆ ವಾಹನ ಸವಾರರು ಮಾಹಿತಿ ನೀಡಿದ್ದು ಇಲ್ಲಿನ ಸಿಬ್ಬಂದಿ ಘಾಟಿ ಪ್ರದೇಶಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಾಡಾನೆ ಕಂಡು ಬರದಿದ್ದರೂ ಅದು ಸಂಚರಿಸಿದ ಕುರುಹುಗಳು ಕಂಡುಬಂದಿವೆ.

ಎಚ್ಚರಿಕೆ.: ಚಾರ್ಮಾಡಿ ಘಾಟಿ ಪರಿಸರವು ಅರಣ್ಯ ಪ್ರದೇಶದಲ್ಲಿದ್ದು, ಇಲ್ಲಿ ಹಲವಾರು ವನ್ಯಜೀವಿಗಳು ವಾಸಿಸುತ್ತವೆ. ಸಾಮಾನ್ಯವಾಗಿ ರಾತ್ರಿ ವೇಳೆ ರಸ್ತೆಯ ಅಲ್ಲಲ್ಲಿ ಆಗಾಗ ಇವು ವಾಹನ ಸವಾರರಿಗೆ ಕಾಣಿಸಿಗುತ್ತವೆ. ಆದರೆ ಇದೀಗ ಹಗಲಿನ ವೇಳೆ ಕಾಡಾನೆ ರಸ್ತೆಯಲ್ಲಿ ಸಂಚರಿಸುವುದು ಕಂಡುಬಂದಿದೆ. ಈ ಕಾರಣದಿಂದ ವಾಹನ ಸವಾರರು ಹೆಚ್ಚಿನ ಮುಂಜಾಗ್ರತೆಯಿಂದ ಘಾಟಿ ರಸ್ತೆಯಲ್ಲಿ ಸಂಚರಿಸಬೇಕಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ.

Related posts

ಪುದುವೆಟ್ಟು ಶ್ರೀಧ.ಮಂ.ಅ.ಹಿ. ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

Suddi Udaya

ಪ್ಯಾಲೆಸ್ತೀನ್ ದೇಶದ ಜನತೆಗೆ ಬೆಂಬಲ ಸೂಚಿಸಿ ಎಸ್‌ಡಿಪಿಐ ವತಿಯಿಂದ ವಿವಿಧೆಡೆ ಭಿತ್ತಿಪತ್ರ ಪ್ರದರ್ಶನ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಮತ್ತು ಲಯನ್ ಸೇವಾ ಟ್ರಸ್ಟ್ ವತಿಯಿಂದ ವಿವಿಧ ಸಂಸ್ಥೆಗಳಿಗೆ ರೂ. 1ಲಕ್ಷ ಸಹಾಯಧನ

Suddi Udaya

ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ

Suddi Udaya

ಕುಕ್ಕುಟೋದ್ಯಮದ ಸಮಸ್ಯೆಗಳ ಕುರಿತು ಬೆಂಗಳೂರಿನಲ್ಲಿ ಸಭೆ – ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟದ ಬಲವಾದ ಪ್ರತಿಪಾದನೆ

Suddi Udaya

ನಡ : ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಿಂದ ಗುರುಪೂಜೆ ಮತ್ತು ವಾರ್ಷಿಕ ಮಹಾಸಭೆ

Suddi Udaya
error: Content is protected !!